ಚರ್ಮ, ಉಗುರಿಗೆ ಭಾರೀ ಬೇಡಿಕೆ: ಹುಲಿಗಳ ವಿನಾಶಕ್ಕೆ ನಾಂದಿ
ಚಾಮರಾಜನಗರ

ಚರ್ಮ, ಉಗುರಿಗೆ ಭಾರೀ ಬೇಡಿಕೆ: ಹುಲಿಗಳ ವಿನಾಶಕ್ಕೆ ನಾಂದಿ

August 1, 2018

ಗುಂಡ್ಲುಪೇಟೆ: ಹುಲಿಯ ಚರ್ಮ ಮತ್ತು ಉಗುರಿನ ಬೇಡಿಕೆಯಿಂದಾಗಿ ಹುಲಿಗಳು ವಿನಾಶ ದಂಚಿಗೆ ಬಂದಿವೆ ಎಂದು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್. ಕೆ ಮಧು ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಕಿರಿಯ ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಜಾಗತಿಕ ಹುಲಿ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, 2010ರಲ್ಲಿ ಪ್ರಾರಂಭವಾದ ಹುಲಿ ದಿನಾ ಚರಣೆ ಇಂದು ವಿಶ್ವದಾದ್ಯಂತ ಆಚರಿಸಲಾಗು ತ್ತಿದೆ ಎಂದರು. ಪ್ರಸ್ತುತ ವಿಶ್ವದಲ್ಲಿ 6 ವಿಧದ ಹುಲಿಗಳಿದ್ದು, ಎಲ್ಲವೂ ಏಷ್ಯಾಖಂಡದಲ್ಲಿ ರುವುದು ವಿಶೇಷ. ರಾಯಲ್ ಬೆಂಗಾಲ್ ಹುಲಿ, ದಕ್ಷಿಣ ಚೀನಾ ಹುಲಿ, ಇಂಡೋ ಚೈನಾ ಹುಲಿ, ಮಲಯ ಹುಲಿ, ಸೈಬೀರಿಯಾ ಹುಲಿ ಹಾಗೂ ಸುಮಾತ್ರ ಹುಲಿಗಳಿದ್ದು. ಉಳಿದ ಪ್ರಭೇದ ಗಳು ಅವನತಿ ಹೊಂದಿವೆ. ಸ್ವತಂತ್ರ ಪೂರ್ವ ದಲ್ಲಿ ಸುಮಾರು 10 ಸಾವಿರದ್ದಷ್ಟಿದ್ದ ಹುಲಿಗಳ ಸಂಖ್ಯೆ ಇಂದು ಕಳ್ಳಬೇಟೆ, ಚರ್ಮ ಹಾಗೂ ಉಗುರುಗಳಿಗೆ ಇದ್ದ ಬೇಡಿಕೆಯಿಂದಾಗಿ ನಾಶ ದಂಚಿಗೆ ಬಂದಿವೆ. ಪ್ರಸ್ತುತ ವಿಶ್ವದಲ್ಲಿ ಕೇವಲ 3890 ಹುಲಿಗಳಿದ್ದು, ಅದರಲ್ಲಿ ಭಾರತ ದಲ್ಲೇ 2226  ಇವೆ. ಕರ್ನಾ ಟಕದ 406 ಹುಲಿಗಳಲ್ಲಿ ಬಂಡೀ ಪುರದಲ್ಲಿ 139 ಹುಲಿಗಳಿರುವ ಹೆಗ್ಗಳಿಗೆ ನಮ್ಮದಾಗಿದೆ ಎಂದರು.

ಹುಲಿಗಳು ಏಕಾಂಗಿ ಜೀವಿಗಳಾಗಿದ್ದು, ಮರಿ ಹಾಕುವ ಸಮಯದಲ್ಲಿ ಮಾತ್ರ ಗಂಡು ಹೆಣ್ಣು ಜತೆಯಾಗುತ್ತವೆ. 6 ತಿಂಗಳ ನಂತರ ಗಂಡು ಹುಲಿ ಬೇರೆಯಾಗುತ್ತವೆ. ಹೆಣ್ಣು ಹುಲಿ ಮಾತ್ರ ತನ್ನ ಮರಿಗಳ ಜವಾ ಬ್ದಾರಿ ಹೊತ್ತು ಒಂದೂವರೆ ವರ್ಷದಿಂದ 2 ವರ್ಷದ ಅವಧಿಯಲ್ಲಿ ಬೇರೆಯಾಗು ತ್ತವೆ. ಬಿಳಿ ಹುಲಿಗಳು ಮಾಮೂಲಿ ಹುಲಿ ಗಳಾಗಿದ್ದು, ಅವು ಹುಟ್ಟಿನ ಮೆಲಾನಿನ್ ಪ್ರಭಾವ ದಿಂದ ಬಣ್ಣ ಬಿಳಿಯಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಾವು ಸೆರೆಹಿಡಿದ ಹುಲಿಗಳ ಛಾಯಾಚಿತ್ರ ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹುಲಿ ಸಂರಕ್ಷಣೆ ಮತ್ತು ಪರಿಸರದಲ್ಲಿ ಹುಲಿಗಳ ಪಾತ್ರವನ್ನು ಸವಿವರವಾಗಿ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪ ಡಿಸಿ ವಿಜೇತರಿಗೆ ಪ್ರಾಂಶುಪಾಲ ಮಂಜಣ್ಣ ಹಾಗೂ ಸವಿತಾ ಬಹುಮಾನ ವಿತರಿಸಿ ದರು. ಶಿಕ್ಷಕ ನಾಗರಾಜಶರ್ಮನ್ ಸೇರಿ ದಂತೆ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾ ರ್ಥಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.

 

 

Translate »