ಕಾನೂನು ಪಾಲನೆಯಿಂದ ನೆಮ್ಮದಿ ಜೀವನ ಸಾಧ್ಯ
ಮೈಸೂರು

ಕಾನೂನು ಪಾಲನೆಯಿಂದ ನೆಮ್ಮದಿ ಜೀವನ ಸಾಧ್ಯ

July 13, 2019

ಮೈಸೂರು, ಜು.12(ಆರ್‍ಕೆಬಿ)- ನಮ್ಮ ಸಮಾಜದಲ್ಲಿ ಕಾನೂನು, ನ್ಯಾಯಾಲಯ, ಪೊಲೀಸ್ ಠಾಣೆಗಳಿರುವುದರಿಂದಲೇ ನಾವು ನೆಮ್ಮದಿಯ ಜೀವನ ನಡೆಸಲು ಸಾಧ್ಯ ವಾಗಿದೆ ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ.ಪಿ.ದೇವಮಾನೆ ತಿಳಿಸಿದರು.

ಮೈಸೂರಿನ ಜಯನಗರದ ನೇಗಿಲ ಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಶುಕ್ರವಾರ ಬಿಜಿಎಸ್ ಒಕ್ಕಲಿಗ ಹಿರಿಯ ನಾಗ ರಿಕರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿದ್ದ `ಕಾನೂನು ಅರಿವು-ನೆರವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಕಾನೂನು ಸರಿಯಾಗಿ ಪಾಲಿಸಿದರೆ ಮಾತ್ರ ನೆಮ್ಮದಿಯ ಜೀವನ ಸಾಧ್ಯ. ಕಾನೂನು ಅರಿತುಕೊಳ್ಳದಿದ್ದರೆ, ಅದನ್ನು ಪಾಲಿಸದಿ ದ್ದರೆ ನೆಮ್ಮದಿಯ ಜೀವನ ಸಾಧ್ಯವಿಲ್ಲ. ಇಂದು ಕಾನೂನು, ಪೊಲೀಸ್, ನ್ಯಾಯಾ ಲಯ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಯಾರು ಏನು ಬೇಕಾ ದರೂ ತೆಗೆದುಕೊಂಡು ಹೋಗಬಹುದಿತ್ತು. ಯಾರಿಗೂ ಯಾರ ಭಯವೂ ಇರುತ್ತಿರ ಲಿಲ್ಲ. ಬಲಾಢ್ಯರೂ ಕಾನೂನಿಗೆ ಹೆದರಿ, ಈ ಸಮಾಜದಲ್ಲಿ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ವಾಗಿದೆ ಎಂದು ಹೇಳಿದರು.

ಪರಿಸರ, ಜಲ, ಅರಣ್ಯ ಸಂರಕ್ಷಣೆಗೂ ಅದರದ್ದೇ ಆದ ಕಾನೂನಿದೆ. ಅದರ ಬಗ್ಗೆ ಅರಿತು ಪರಿಸರ, ಜಲ, ಅರಣ್ಯ ಸಂರಕ್ಷ ಣೆಯಲ್ಲಿ ತೊಡಗಬೇಕು ಎಂದು ಸಾರ್ವ ಜನಿಕರಿಗೆ ಸಲಹೆ ನೀಡಿದರು. ಕಾರ್ಯ ಕ್ರಮದಲ್ಲಿ ತೋಟಗಾರಿಕೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಎಂ.ರಾಮು, ತೋಟ ಗಾರಿಕೆ ನಿರ್ದೇಶಕ ಡಾ.ಕೆ.ರಾಮ ಕೃಷ್ಣ, ಕೆ.ಎಸ್.ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

Translate »