ಶಾಂತಿವನದ ವೀಡಿಯೋಗೂ ನನಗೂ ಸಂಬಂಧ ಇಲ್ಲ
ಮೈಸೂರು

ಶಾಂತಿವನದ ವೀಡಿಯೋಗೂ ನನಗೂ ಸಂಬಂಧ ಇಲ್ಲ

June 30, 2018
  •  ಪ್ರಕರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆಯುವ ಯತ್ನ
  • ಯಾರೋ ಕಿಡಿಗೇಡಿಗಳ ಕೃತ್ಯ, ನಾನು ಸರ್ಕಾರದ ವಿರುದ್ಧ ಇಲ್ಲ

ಬೆಂಗಳೂರು: ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಹೇಳಿಕೆ ನೀಡಿದ್ದ ‘ವಿಡಿಯೋಗೂ ನನಗೂ ಸಂಬಂಧ ಇಲ್ಲ’ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ನಡೆದ ಮುಖಂಡರ ಸಭೆಯಲ್ಲಿ ಭಾಗ ವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ‘ನಾನು ಸರ್ಕಾರದ ವಿರುದ್ಧ ಇದ್ದೇನೆ ಎನ್ನುವುದು ಸುಳ್ಳು. ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ನಾನು ಯಾವ ಸಂದರ್ಭದಲ್ಲಿ ಮಾತನಾಡಿ ದ್ದೇನೋ ಗೊತ್ತಿಲ್ಲ. ಸಹಜವಾಗಿ ಮಾತನಾಡು ವಾಗ ರೆಕಾರ್ಡ್ ಮಾಡಿದ್ದಾರೆ’ ಎಂದರು.

‘ಮೈತ್ರಿ ಸರ್ಕಾರ ಸುಗಮವಾಗಿದೆ. ಯಾವುದೇ ಗೊಂದಲ ವಿಲ್ಲ. ಕೋಮುವಾದಿ ಬಿಜೆಪಿ ಯನ್ನು ಅಧಿ ಕಾರದಿಂದ ದೂರವಿರಿಸಲು ಸರ್ಕಾರ ರಚಿ ಸಿದ್ದೇವೆ’ ಎಂದರು. ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಊಹಾ ಪೋಹ ಗಳಿಗೆ ನನ್ನಿಂದ ಉತ್ತರವಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿ ರುತ್ತೇನೆ. ಸಭೆಗೂ ಮುನ್ನ ಟ್ವೀಟ್ ಮೂಲಕ ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ನಂತರ ರಾಜ ಕೀಯದಲ್ಲಿ ಇನ್ನಷ್ಟು ಕ್ರಿಯಾಶೀಲ ವಾಗಿ ತೊಡಗಿಸಿಕೊಳ್ಳಲು ದೇಹ ಮತ್ತು ಮನಸ್ಸು ಸಜ್ಜಾಗಿದೆ’ ಎಂದಿದ್ದಾರೆ. ‘ಉಜಿರೆ ಪ್ರಕೃತಿ ಚಿಕಿತ್ಸಾ ಕೇಂದ್ರ ಹನ್ನೆರಡು ದಿನ ನನ್ನ ಮನೆಯಾಗಿತ್ತು. ಡಾ. ಪ್ರಶಾಂತ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ತಮ್ಮ ಕುಟುಂಬದ ಸದಸ್ಯರಂತೆ ನನ್ನ ಪಾಲನೆ ಮಾಡಿದ್ದಾರೆ. ಅವರ ಸೇವಾ ಬದ್ಧತೆ ಮತ್ತು ತೋರಿಸಿದ ಕಾಳಜಿಗೆ ತುಂಬು ಹೃದಯದ ಕೃತಜ್ಞತೆಗಳು. ಎಲ್ಲರಿಗೂ ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

Translate »