ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭ ಕೈಬಿಡಿ
ಮೈಸೂರು

ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭ ಕೈಬಿಡಿ

March 25, 2019

ಮೈಸೂರು: ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬದಲಿಗೆ ಇಂಗ್ಲಿಷ್ ಭಾಷೆ ಯನ್ನೇ ಪರಿಣಾಮಕಾರಿಯಾಗಿ ಕಲಿಸ ಬೇಕು. ರಾಜ್ಯಪಾಲರು ವಾಪಸ್ ಕಳುಹಿ ಸಿರುವ ಆದೇಶವನ್ನು ರಾಜ್ಯ ಸರ್ಕಾರ ಮತ್ತೇ ಕಳುಹಿಸಬೇಕು ಎಂಬ ಎರಡು ನಿರ್ಣಯಗಳನ್ನು ಭಾನುವಾರ ಮೈಸೂರಿ ನಲ್ಲಿ ನಡೆದ ಕನ್ನಡ ಕ್ರಿಯಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಯಿತು.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆ ಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರದ ಕ್ರಮ ವಿರೋಧಿಸಿ, ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಪ್ರಮುಖರು ಭಾಗವಹಿ ಸಿದ್ದ ಸಭೆಯಲ್ಲಿ ಈ ನಿರ್ಣಯ ಅಂಗೀ ಕರಿಸಲಾಯಿತು. ನಿರ್ಣಯದ ಪ್ರತಿ ಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಕನ್ನಡ ಪರ ಸಂಘಟನೆಗಳು, ಸಾಹಿತಿ, ಚಿಂತ ಕರಿಗೆ ಕಳುಹಿಸಲು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಪ.ಮಲ್ಲೇಶ್, ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭದ ವಿರುದ್ಧ ಎಲ್ಲಾ ಜಿಲ್ಲೆಗಳ ಸಮಾನ ಮನಸ್ಕ ರನ್ನು ಒಳಗೊಂಡ ಸಂಘಟನೆ ರಚಿಸಿ, ಅದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ. ನಾವ್ಯಾರೂ ಇಂಗ್ಲಿಷ್ ಕಲಿಕೆಗೆ ವಿರುದ್ಧವಲ್ಲ. ಆದರೆ ಅದನ್ನು ಮಾಧ್ಯಮ ವಾಗಿ ಮಾಡುವುದನ್ನು ಬಿಟ್ಟು ಭಾಷೆಯಾಗಿ ಕಲಿಸಲಿ ಎಂದು ಸಲಹೆ ನೀಡಿದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಇಂದು ಎಲ್ಲಾ ಹಳ್ಳಿಗಳಲ್ಲೂ ಕಾನ್ವೆಂಟ್‍ಗಳಿವೆ. ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಸರ್ವೋಚ್ಛ ನ್ಯಾಯಾಲಯ ಭಾಷೆ ಆಯ್ಕೆಯನ್ನು ಪೋಷಕರಿಗೆ ಬಿಟ್ಟಿದೆ. ಈ ಸಮಸ್ಯೆ ಎದುರಿಸುವುದು ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ, ಪದಾಧಿ ಕಾರಿಗಳಾದ ಸಂಸ್ಕøತಿ ಸುಬ್ರಹ್ಮಣ್ಯ, ಕೊ.ಸು.ನರಸಿಂಹಮೂರ್ತಿ, ಎಂ.ಬಿ.ವಿಶ್ವ ನಾಥ್, ಸಾಹಿತಿ ಕೃಷ್ಣಮೂರ್ತಿ ಹನೂರು, ಹೊರೆಯಾಲ ದೊರೆಸ್ವಾಮಿ, ಪ್ರೊ.ಕೆ. ಎಸ್.ಭಗವಾನ್, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಸಿ.ಪಿ.ಸಿದ್ದಾಶ್ರಮ, ಪ್ರೊ. ಎನ್.ಎಂ.ತಳವಾರ, ಜಿ.ಪಿ.ಬಸವರಾಜು, ಡಾ.ಸಿ.ಜಿ.ಉಷಾದೇವಿ, ಹೆಚ್.ಎಸ್. ವಸಂತಮ್ಮ, ಚ.ನಂ.ಮಹದೇವಸ್ವಾಮಿ, ಡಿ.ಎನ್.ಪುರುಷೋತ್ತಮರಾವ್, ಎಸ್.ಬಾಲಕೃಷ್ಣ, ಕೃಷ್ಣ ಜನಮನ, ಡಾ.ಹೆಚ್.ಟಿ.ಶೈಲಜಾ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.

Translate »