ಚಿರತೆ ದಾಳಿಗೆ ಕರು ಬಲಿ;  ಜನತೆಯಲ್ಲಿ ಆತಂಕ
ಚಾಮರಾಜನಗರ

ಚಿರತೆ ದಾಳಿಗೆ ಕರು ಬಲಿ; ಜನತೆಯಲ್ಲಿ ಆತಂಕ

February 5, 2019

ಗುಂಡ್ಲುಪೇಟೆ: ಪಟ್ಟಣದ ಜನನಿಬಿಡ ಬಡಾವಣೆಯಲ್ಲಿ ಚಿರತೆಯೊಂದು ಕರುವನ್ನು ತಿಂದು ಹಾಕಿರುವ ಘಟನೆ ನಡೆದಿದೆ.

ಪಟ್ಟಣದ ಜೆಎಸ್‍ಎಸ್ ಕಾಲೇಜು ಪಕ್ಕದ ಅಶ್ವಿನಿ ಬಡಾವಣೆ ಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಕರುವಿನ ಕಳೇಬರ ನೋಡಿ ಬಡಾವಣೆ ನಿವಾಸಿ ಗಳು ಭಯಬೀತರಾಗಿದ್ದಾರೆ. ಬಡಾವಣೆಯಲ್ಲಿರುವ ಬಸವಣ್ಣ ಎಂಬುವರ ಮನೆಯ ಸಮೀಪ ಅರೆಬರೆ ತಿಂದು ಹಾಕಿದ್ದ ಕರುವಿನ ಕಳೇಬರ ಪತ್ತೆಯಾಗಿದ್ದು, ಅದರ ಪಕ್ಕದಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡು ಬಂದಿದೆ.

ಇದರಿಂದ ಆತಂಕಕ್ಕೊಳಗಾದ ನಿವಾಸಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಹೆಜ್ಜೆಗುರುತುಗಳನ್ನು ಖಚಿತ ಪಡಿಸಿದರು. ಇದರಿಂದ ಬಡಾವಣೆಯ ನಿವಾಸಿಗಳು ಮತ್ತಷ್ಟು ಭೀತಿಗೊಳಗಾಗಿದ್ದು ಚಿರತೆಯನ್ನು ಸೆರೆ ಹಿಡಿ ಯಲು ಒತ್ತಾಯಿಸಿದ್ದಾರೆ. ಬಡಾವಣೆಯ ಸಮೀಪದಲ್ಲಿ ರುವ ಶ್ರೀರಾಮದೇವರ ಗುಡ್ಡದ ಸಮೀಪದಿಂದ ಚಿರತೆಯು ಆಹಾರ ಅರಸಿ ಬಂದಿರಬಹುದೆಂದು ಶಂಕಿಸಲಾಗಿದ್ದು, ಚಿರತೆಯ ಹೆಜ್ಜೆಗುರುತುಗಳ ಆಧಾರದ ಮೇಲೆ ಈ ಭಾಗದಲ್ಲಿ ಬೋನು ಇರಿಸಲಾಗುವುದು ಎಂದು ಭರ್ಗಿ ವಲಯದ ಆರ್‍ಫ್‍ಓ ರಾಜೇಶ್ ತಿಳಿಸಿದ್ದಾರೆ.

Translate »