ಬಿಎಸ್‍ವೈಗೆ ಮಾನ ಇದ್ದರೆ ನನ್ನ ವಿರುದ್ಧ ಮೊಕದ್ದಮೆ ಹೂಡಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು
ಮೈಸೂರು

ಬಿಎಸ್‍ವೈಗೆ ಮಾನ ಇದ್ದರೆ ನನ್ನ ವಿರುದ್ಧ ಮೊಕದ್ದಮೆ ಹೂಡಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು

September 7, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾನ ಇದ್ದರೆ, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಸಮಾರಂಭವೊಂದರ ನಂತರ ಸುದ್ದಿಗಾರರು, ಯಡಿಯೂರಪ್ಪ ನಿಮ್ಮ ವಿರುದ್ಧ ಮಾನನಷ್ಟ ಮೊಕ ದ್ದಮೆ ಹಾಕುತ್ತಾರಂತೆ ಎಂದು ಪ್ರಶ್ನಿಸಿದರು. ಅವರಿಗೆ ಸಂಶಯ ಇದೆಯಂತಾ, ಇದ್ದರೆ, ಏನು ನಷ್ಟ ಆಗಿದೆಯೋ ಅದಕ್ಕೆ ಅರ್ಜಿ ಹಾಕಿಕೊಳ್ಳಲಿ, ಸಮಯ ಬಂದಾಗ ಪೂರಕ ದಾಖಲೆ ಒದಗಿಸುತ್ತೇನೆ.ಅನಗತ್ಯವಾಗಿ ನಾನು ಆರೋಪ ಮಾಡುವುದಿಲ್ಲ, ಇರುವ ಸತ್ಯ ಹೇಳಿದ್ದೇನೆ, ನಾನೇನು ಕದ್ದು ಓಡಿ ಹೋಗುವುದಿಲ್ಲ, ಪಲಾಯನ ಮಾಡುವುದೂ ಇಲ್ಲ, ಅವರಿಗೆ ಅದು ಇದ್ದರೆ, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿಕೊಳ್ಳಲಿ, ನಾನು ಅಲ್ಲಿಯೇ ಸೂಕ್ತ ದಾಖಲೆ ನೀಡುವುದಾಗಿ ತಿಳಿಸಿದರು.

Translate »