ಬೆಂಗಳೂರು,ಜು.27- ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ತಮ್ಮನ್ನು ಖಳನಾಯಕನನ್ನಾಗಿ ಮಾಡ ಲಾಯಿತು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವು ಜೈನ, ಬೌದ್ಧ ಧರ್ಮ ಗಳಂತೆಯೇ ಸ್ವತಂತ್ರವಾದದ್ದು. ಇದು ತಮ್ಮ ವೈಯ ಕ್ತಿಕ ಅಭಿಪ್ರಾಯ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಆರಂಭವಾದಾಗ ಅವರೇ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿದ್ದರು. ಈ ವಿಚಾರ ವಾಗಿ ತಮ್ಮದೇನೂ ತಪ್ಪಿಲ್ಲ. ಆದರೆ, ತಮ್ಮನ್ನೇ ಖಳನಾಯಕನನ್ನಾಗಿ ಮಾಡಲಾಯಿತು ಎಂದರು. ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡ ಬೇಕೆಂಬ ಪ್ರಸ್ತಾಪ ಬಂದಿತ್ತು. ಅದರಲ್ಲಿ ದ್ವಂದ್ವ ಮತ್ತು ಗೊಂದಲ ಇದ್ದಿದ್ದರಿಂದ ಎಲ್ಲರೂ ಒಟ್ಟಾಗಿ ಬನ್ನಿ, ಕುಳಿತು ಚರ್ಚಿಸಿ ತೀರ್ಮಾನಿಸೋಣ ಎಂದಿದ್ದೆ. ಆದರೆ, ಕೊನೆಗೂ ಎಲ್ಲರೂ ಒಟ್ಟಾಗಿ ಬರಲೇ ಇಲ್ಲ. ನಾನೇ ಒಂದು ಸಮಿತಿ ರಚಿಸಿ ವರದಿ ತರಿಸಿಕೊಂಡೆ. ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಕಳು ಹಿಸಿದೆ. ಮುಂದಿನದು ಏನೆಲ್ಲ ರಾಜಕೀಯ ಗಳು ನಡೆದವು ನಿಮಗೆಲ್ಲ ಗೊತ್ತೇ ಇದೆ’ ಎಂದರು. ಸಮಿತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಇರಿಸಿ ಚರ್ಚಿಸಲಾಯಿತು. ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. ಆ ನಿರ್ಣಯದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕೇಂದ್ರಕ್ಕೆ ಕಳುಹಿಸಿ ದ್ದೆವು. ಇಷ್ಟೆಲ್ಲ ಆದ ಮೇಲೆಯೂ ನನ್ನನ್ನು ಖಳ ನಾಯಕನ್ನಾಗಿ ಮಾಡಿದರು. ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎಂದರು. ‘ಲಿಂಗಾಯತ ಧರ್ಮ ಹೋರಾಟ ಕ್ಕೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ’ ಇದೊಂದು ಸ್ವತಂತ್ರ ಧರ್ಮ. ಜೈನ, ಬೌದ್ಧ ಧರ್ಮಗಳಂತೆಯೇ ಬಸವ ಧರ್ಮವೂ ಪ್ರತ್ಯೇಕವಾದದ್ದು. ಲಿಂಗಾಯತ ಧರ್ಮ ಹಿಂದುತ್ವದ ಒಳಗೂ ಇಲ್ಲ, ಹೊರಗೂ ಇಲ್ಲ. ಅದೊಂದು ಸ್ವತಂತ್ರ ಧರ್ಮ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹಿಂದುತ್ವದ ಬಗ್ಗೆ ನಾನು ಮಾತನಾಡುವು ದಿಲ್ಲ. ಮಾತನಾಡಿದರೆ ಅದರ ದಿಕ್ಕು ಬದಲಾಗುತ್ತದೆ’ ಎಂದರು. ಇದು ಜನರದ್ದಲ್ಲ, ಕುದುರೆ ವ್ಯಾಪಾರದ ವಿಜಯ, ಇದು ಸಂವಿಧಾನ ಬದ್ಧ ಸರ್ಕಾರವಲ್ಲ. ಬಹುಮತ ಹೇಗೆ ಸಾಬೀತು ಪಡಿಸುತ್ತಾರೆ? ಅವರಲ್ಲಿ ಬಹುಮತವಿಲ್ಲ. 221 ಸದಸ್ಯರಲ್ಲಿ ಅವರ ಬಳಿ ಇರುವುದು 105 ಜನ. ಸರಳ ಬಹು ಮತಕ್ಕೆ ಬೇಕಿರುವುದು 111 ಸದಸ್ಯರು. ಆ ಮ್ಯಾಜಿಕ್ ನಂಬರ್ ಎಲ್ಲಿದೆ? 111 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಎಲ್ಲಿ ನೀಡಿದ್ದಾರೆ? ಇದರಲ್ಲಿ ಅತೃಪ್ತ ಶಾಸಕರ ಹೆಸರನ್ನು ಸೇರಿಸಲು ಬರುವುದಿಲ್ಲ. ಬಹುಮತ ಇಲ್ಲದೆಯೇ ಪ್ರಮಾಣವಚನ ಸ್ವೀಕ ರಿಸುತ್ತಿದ್ದಾರೆ. ಕುದುರೆ ವ್ಯಾಪಾರ ಮಾಡಿ ಜನರಿಂದ ಸಿಕ್ಕ ಜಯ ಎನ್ನುತ್ತಿ ದ್ದಾರೆ. ಇದು ಜನರ ವಿಜಯ ಅಲ್ಲ, ಕುದುರೆ ವ್ಯಾಪಾರದ ವಿಜಯ’ ಎಂದು ಟೀಕಿಸಿದರು.
