ಪರಿಸರದೊಂದಿಗೆ ಆತ್ಮ ವಿಶ್ವಾಸದಿಂದ ಬದುಕು ಸಾಗಲಿ…..
ಕೊಡಗು

ಪರಿಸರದೊಂದಿಗೆ ಆತ್ಮ ವಿಶ್ವಾಸದಿಂದ ಬದುಕು ಸಾಗಲಿ…..

October 3, 2018

ಗೋಣಿಕೊಪ್ಪಲು: ಕಳೆದುಕೊಂಡಿ ರುವುದನ್ನು ನೆನೆಸಿಕೊಂಡು ಭವಿಷ್ಯ ಕಳೆದು ಕೊಳ್ಳುವುದಕಿಂತ ಆತ್ಮವಿಶ್ವಾಸದಿಂದ ಕೊಡ ಗಿನ ಪರಿಸರ ಉಳಿಸಿಕೊಂಡು ಬದುಕು ಸಾಗಿಸುವಂತಾಗಬೇಕು ಎಂಬ ಸಂದೇಶ ವನ್ನು ಮ್ಯಾಜಿಕ್ ಮಾಂತ್ರಿಕ ಮೈಸೂರಿನ ರಾಜ್‍ಭಟ್ ಮ್ಯಾಜಿಕ್ ಮೂಲಕ ಅನಾ ವರಣಗೊಳಿಸಿ ಸಂತ್ರಸ್ತ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಿದರು.

ಭೂಕುಸಿತಕ್ಕೆ ಒಳಗಾಗಿ ಬದುಕು ಕಳೆದು ಕೊಂಡು ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆ ಯುತ್ತಿರುವ ಮಕ್ಕಳಿಗೆ ಆತ್ಮ ವಿಶ್ವಾಸ ಮೂಡಿ ಸಲು ಕಕೂನ್ ರೆಸ್ಟೊರೆಂಟ್ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮ್ಯಾಜಿಕ್ ಮೂಲಕ ಅತ್ಮವಿಶ್ವಾಸ ತುಂಬಿಸುವ ಪ್ರಯತ್ನ ಮಾಡಿದರು.

ಕಳೆದುಕೊಂಡಿರುವ ಆಸ್ತಿಯನ್ನು ಮರಳಿ ಪಡೆಯಲು ಆಗದಿದ್ದರೂ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗ ಬೇಕು. ಕೊಡಗಿನ ಪ್ರಕೃತಿ ರಕ್ಷಣೆ ಮುಖ್ಯ, ಅಜ್ಞಾನದಿಂದ ಹೊರ ಬಂದು, ವಿಜ್ಞಾನದ ಮೂಲಕ ಬದುಕು ಸಾಗಿಸುವಂತಾಗಬೇಕು.

ಪರಿಸರದಲ್ಲಿರುವ ಪ್ರತೀ ಜೀವಸಂಕುಲ, ಅರಣ್ಯ, ಇವುಗಳ ಜತೆ ಬದುಕು ಸಾಗಿ¸ ಬೇಕು ಎಂದು ಮ್ಯಾಜಿಕ್ ಮೂಲಕ ಮಾಹಿತಿ ನೀಡಿದರು. ಕಾವೇರಿ ಒಡಲು ಬತ್ತದಂತೆ ನೋಡಿಕೊಳ್ಳಬೇಕಿದೆ ಎಂಬುದನ್ನು ಕಾವೇರಿ ಮಾತೆ ಕಂಕುಳಿನಿಂದ ಬಿಂದಿಗೆ ಮೂಲಕ ನೀರು ಬೀಳುವ ಮ್ಯಾಜಿಕ್ ತೋರಿಸ ಲಾಯಿತು. ಪರಿಸರ ರಕ್ಷಣೆ ಮೂಲಕ ಕಾವೇರಿ ನೀರು ಉಳಿಸಿಕೊಳ್ಳಬೇಕು. ಅದನ್ನು ಕಳೆದುಕೊಳ್ಳುವ ಅಜ್ಞಾನಕ್ಕೆ ಇಳಿಯ ಬಾರದು ಎಂಬ ಸಂದೇಶವನ್ನು ನೀಡಿ ದರು. ಪರಿಸರ ಅಸಮತೋಲನಕ್ಕೆ ಮಾನ ವರ ಅಟ್ಟಹಾಸ, ನೀರಿನ ರಕ್ಷಣೆಗೆ ಯಾವ ರೀತಿ ಪರಿಸರ ಕಾಳಜಿ ಬೇಕು ಎಂಬು ವುದನ್ನು ಮನವರಿಕೆ ಮಾಡಿಕೊಟ್ಟರು. ಆಸ್ತಿ, ಮನೆ, ಮಠಗಳನ್ನು ಕಳೆದುಕೊಂಡಿ ದ್ದರೂ ಕೂಡ ಮರಳಿ ಪಡೆಯಲು ಅವಕಾಶ ವಿದೆ. ಬದುಕು ಉಳಿಸಿಕೊಂಡರೆ, ಮತ್ತೆ ಉತ್ತಮ ಭವಿಷ್ಯ ಕಟ್ಟಲು ಸಾಧ್ಯವಿದೆ ಎಂಬು ದನ್ನು ಮನಮುಟ್ಟುವಂತೆ ಹೇಳಿಕೊಟ್ಟರು.

ಮಕ್ಕಳಿಂದ ಹಾಡು, ಮಿಮಿಕ್ರಿ ಸಂಭ್ರಮ: ಸಂತ್ರಸ್ತ ಮಕ್ಕಳು ಸಾಂಸ್ಕøತಿಕ ಕಾರ್ಯ ಕ್ರಮ ನಡೆಸಿಕೊಡುವ ಮೂಲಕ ನೋವು ಮರೆತರು. ಮೋನಿಕಾ, ಕಾವೇರಪ್ಪ, ವರ್ಷ, ಬೆಳ್ಯಪ್ಪ, ವರುಣ್, ನಾಚಪ್ಪ ಹಾಡು ಹಾಡಿ ರಂಜಿಸಿದರು. ತರುಣ್, ಅಕ್ಷಯ್ ಪೊನ್ನಪ್ಪ, ಗಗನ್, ಪುಲಕೇಶಿ ಇವರುಗಳು ಮಿಮಿಕ್ರಿ ಮೂಲಕ ಸಂಭ್ರಮಿಸಿದರು.

ಸ್ಪರ್ಧಿಗಳಿಗೆ ಕಕೂನ್ ರೆಸ್ಟೋರೆಂಟ್ ಮುಖ್ಯಸ್ಥರುಗಳಾದ ಪೊನ್ನಿಮಾಡ ಸುರೇಶ್, ಪೊನ್ನಿಮಾಡ ಪೊನ್ನಣ್ಣ, ಕರ್ತಮಾಡ ವಿವೇಕ್ ಬಹುಮಾನ ವಿತರಿಸಿದರು. ನಂತರ ಸಹಭೋಜನದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರು. ಸಂತ್ರಸ್ತ ವಿದ್ಯಾ ರ್ಥಿಗಳು ಸೇರಿದಂತೆ ಸಾಯಿಶಂಕರ್ ಶಾಲೆಯ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »