ಶುಚಿತ್ವ ಕಾಯ್ದುಕೊಳ್ಳದ ಮಾಂಸದಂಗಡಿಗಳಿಗೆ ಬೀಗಮುದ್ರೆ
ಮೈಸೂರು

ಶುಚಿತ್ವ ಕಾಯ್ದುಕೊಳ್ಳದ ಮಾಂಸದಂಗಡಿಗಳಿಗೆ ಬೀಗಮುದ್ರೆ

February 13, 2020

ಮೈಸೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿ ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್‍ಗೆ ಚೀನಾದ ಮಾಂಸ ಮಾರು ಕಟ್ಟೆಯೇ ಮೂಲ ಎಂಬ ಶಂಕೆ ಹಿನ್ನೆಲೆಯಲ್ಲಿ ಮುನ್ನೆ ಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಮಾಂಸ ಮಾರಾಟ ಸ್ಥಳಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಯ್ದುಕೊಳ್ಳು ವಂತೆ ಸೂಚಿಸಬೇಕು. ಸೂಚನೆ ಪಾಲಿಸದ ಮಾಂಸ ದಂಗಡಿಗಳಿಗೆ ಬೀಗಮುದ್ರೆ ಹಾಕುವಂತೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಮೈಸೂರಿನ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಸಿ. ಪರಿಮಳಾ ಶ್ಯಾಮ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ, ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಮಾಂಸ ದಂಗಡಿಗಳು ಶುಚಿತ್ವ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಶುಚಿ ಇಲ್ಲದ ಮಾಂಸದಂಗಡಿಗೆ ಬೀಗ ಮುದ್ರೆ ಹಾಕಬೇಕು ಎಂದು ಜಿಪಂ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ, ಕೃಷಿ- ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟ ಸ್ವಾಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್ ಸೂಚನೆ ನೀಡಿದರು.

ಎಲ್ಲೆಂದರಲ್ಲಿ ಮಾಂಸ ಕತ್ತರಿಸುತ್ತಾರೆ. ಮಾಂಸ ವನ್ನು ನೊಣ ಮುತ್ತುವಂತೆ ತೆರೆದೇ ಇಡುತ್ತಾರೆ. ತಾಲೂಕುಗಳಲ್ಲಿ ಮಾಂಸ ಮಾರಾಟಗಾರರು ಸಂಬಂ ಧಿಸಿದ ಇಲಾಖೆಯಿಂದ ಮಾಂಸದ ಗುಣಮಟ್ಟ ಖಾತ ರಿಗೆ ಮುದ್ರೆ ಹಾಕಿಸಿಯೇ ಮಾರಾಟ ಮಾಡಬೇಕಿದೆ. ಆದರೆ ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಕಿಡಿಕಾರಿದರು.

ಜಿಲ್ಲೆಯಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕ ಟೇಶ್, ರಾಜ್ಯದಲ್ಲಿ ಕೊರೋನಾ ವೈರಸ್ ಕಾಣಿಸಿಲ್ಲ. ಆದರೂ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ವಹಿಸ ಲಾಗಿದೆ. ಬಸ್, ರೈಲು ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಂಡಕಳ್ಳಿ ಬಳಿಯ ವಿಮಾನ ನಿಲ್ದಾಣದಲ್ಲೂ ಆರೋಗ್ಯ ತಪಾಸಣೆ ಕೌಂಟರ್ ತೆರೆದು ಪ್ರಯಾಣಿಕರ ಆರೋಗ್ಯ ಪರಿ ಶೀಲಿಸಲಾಗುತ್ತಿದೆ ಎಂದು ವಿವರಿಸಿದರು.

ಕೇರಳ ಮಾರ್ಗದಲ್ಲಿ ಹೆಚ್‍ಡಿ ಕೋಟೆ ತಾಲೂಕಿನ ಬಾವಲಿ ಗ್ರಾಮದ ಗಡಿಭಾಗದಲ್ಲೂ ತಪಾಸಣಾ ತಂಡ ನಿಯೋಜಿಸಿದ್ದು, ಶಂಕಿತರನ್ನು ತಪಾಸಣೆಗೆ ಒಳಪಡಿಸ ಲಾಗುತ್ತಿದೆ. ಮೈಸೂರು ವಿವಿಯ ಕುಲಸಚಿವರೊಂ ದಿಗೆ ಸಭೆ ನಡೆಸಿ ಅಲ್ಲಿರುವ 200 ಚೀನಿ ವಿದ್ಯಾರ್ಥಿಗಳು ಚೀನಾಗೆ ಹೋಗದಂತೆ ಮಾರ್ಗದರ್ಶನ ನೀಡಲಾ ಗಿದೆ. ಅಷ್ಟರಲ್ಲಾಗಲೇ 18 ಚೀನಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ತೆರಳಿದ್ದು, ಅವರನ್ನು ಸದ್ಯಕ್ಕೆ ವಾಪಸಾಗದÀಂತೆ ಸೂಚನೆ ನೀಡಲಾಗಿದೆ. ಚೀನಾದಿಂದ ಇತ್ತೀಚೆಗೆ ಮೈಸೂರಿಗೆ ಮರಳಿದ 6 ಮಂದಿಯನ್ನು ಪರಿ ಶೀಲನೆಗೊಳಪಡಿಸಿದ್ದು, ಅವರ್ಯಾರಿಗೂ ಸೋಂಕು ಇಲ್ಲ ಎಂಬುದು ಖಚಿತವಾಗಿದೆ. ಹಾಗಿದ್ದೂ ಅವರತ್ತ ನಿಗಾ ಇಡಲಾಗಿದೆ ಎಂದು ವಿವರಿಸಿದರು.

ಆಸ್ಪತ್ರೆಯಲ್ಲಿ ಅಶುಚಿತ್ವ: ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆಯಲ್ಲಿ ಕೊಳಕು ತಾಂಡವವಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ 6 ತಿಂಗ ಳಾದರೂ ಕ್ರಮ ಕೈಗೊಂಡಿಲ್ಲ. ಹೊಸ ಆಸ್ಪತ್ರೆ ಉದ್ಘಾ ಟನೆಗೊಂಡಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ ಎಂದು ಕೃಷಿ-ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಡಿಹೆಚ್‍ಓ ಡಾ.ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಓ, ಆಸ್ಪತ್ರೆ ದುರಸ್ತಿ ಕಾರ್ಯ ದಿಂದಾಗಿ ಆವರಣದಲ್ಲಿ ನಿರುಪಯುಕ್ತ ವಸ್ತುಗಳು ಕಾಣ ಸಿಗುತ್ತವೆ. ಅಶುಚಿ ಸ್ವಲ್ಪಮಟ್ಟಿಗಿದೆ ಎಂದು ಒಪ್ಪಿಕೊಂಡರು. ಹೊಸ ಹೆರಿಗೆ ಆಸ್ಪತ್ರೆ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಆ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಚಿಕಿತ್ಸೆ ನೀಡು ವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕೊರತೆ ನೀಗಿಸಿ: ವೈದ್ಯರು, ಸಿಬ್ಬಂದಿ ಕೊರತೆ ನೀಗಿ ಸಲು ಡಿಬಿ ಕುಪ್ಪೆ ಹಾಗೂ ಹೆಡಿಯಾಲದ ಆರೋಗ್ಯ ಕೇಂದ್ರಗಳನ್ನು ಉದ್ಭವ ಸಂಸ್ಥೆಗೆ ನಿರ್ವಹಿಸಲು ವಹಿಸ ಲಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯ ಅಂತರಸಂತೆ, ಮಿರ್ಲೆ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿ ಸುವಂತೆ ಡಿಹೆಚ್‍ಓ ಅವರಿಗೆ ವೆಂಕಟಸ್ವಾಮಿ ಹೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ ಡಿಹೆಚ್‍ಓ, ಸಿಬ್ಬಂದಿಗೆ ಸರ್ಕಾರವೇ ವೇತನ ಕೊಡಬೇಕು. ಅವರು ನಿರ್ವ ಹಣೆಯನ್ನಷ್ಟೇ ಮಾಡುತ್ತಾರೆ ಎಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ವೆಂಕಟಸ್ವಾಮಿ, ಸಂಬಳ ತಡವಾದರೂ ಎಲ್ಲಾ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡಲೆಂದು ಖಾಸಗಿಗೆ ವಹಿಸಿಕೊಡು ವುದು. ಅವರೇ ಸಿಬ್ಬಂದಿ ಹಾಕಿಕೊಂಡು ಕೆಲಸ ಮಾಡು ತ್ತಿದ್ದಾರೆ. ಕಾಡಂಚಿನ ಗ್ರಾಮದಲ್ಲಿ ಹೋಗಿ ಅವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನೀಗಿಸಿ ವೈದ್ಯಕೀಯ ಸೇವೆ ಸಕಾಲದಲ್ಲಿ ದೊರೆ ಯಲು ಇದು ಸೂಕ್ತ ಮಾರ್ಗ. ಮೊದಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಜಿಪಂ ಉಪಾಧ್ಯಕ್ಷೆ ಎಂ.ವಿ.ಗೌರಮ್ಮ ಸೋಮಶೇಖರ್, ಸಿಇಓ ಕೆ.ಜ್ಯೋತಿ, ಮುಖ್ಯ ಯೋಜನಾಧಿಕಾರಿ ಎಂ.ಬಿ.ಪದ್ಮಶೇಖರ ಪಾಂಡೆ ಮತ್ತಿತರರು ಸಭೆಯಲ್ಲಿದ್ದರು.

Translate »