ಲೋಕಸಭಾ ಚುನಾವಣೆ 2019: ಜಿಲ್ಲಾದ್ಯಂತ ಮತದಾನ ಜಾಗೃತಿ
ಹಾಸನ

ಲೋಕಸಭಾ ಚುನಾವಣೆ 2019: ಜಿಲ್ಲಾದ್ಯಂತ ಮತದಾನ ಜಾಗೃತಿ

March 22, 2019

ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ, ಕರಪತ್ರ ಹಂಚಿಕೆ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ
ಹಾಸನ: ಏಪ್ರಿಲ್ 18ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಆಡಳಿತ ಚುನಾವಣಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾ ಗಿದ್ದು, ಗುರುವಾರ ಜಿಲ್ಲಾದ್ಯಂತ ಜಾಗೃತಿ ಜಾಥಾ, ಕರಪತ್ರ ಹಂಚಿಕೆ, ಬೀದಿ ನಾಟಕ ಮೂಲಕ ಮತದಾನದ ಬಗ್ಗೆ ಸಾರ್ವ ಜನಿಕರಲ್ಲಿ ಅರಿವು ಮೂಡಿಸಲಾಯಿತು.

ಮತದಾನ ಜಾಗೃತಿಗೆ ಚುನಾವಣಾ ವೀಕ್ಷಕರಿಂದ ಚಾಲನೆ: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಹಾಸನ ನಗರಸಭೆ ಯಿಂದ ಏರ್ಪಡಿಸಲಾಗಿದ್ದ ವಿಶೇಷ ಮತ ದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿ ಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂಪಾಷ, ಲೋಕಸಭಾ ಚುನಾವಣೆ ವೆಚ್ಚ ವೀಕ್ಷಕರಾದ ವಿವೇಕ್‍ಗುಪ್ತ ಮತ್ತು ರಾಜೀವ್ ಮಾಗೋ ಚಾಲನೆ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿ ಅಕ್ರಂಪಾಷ ಮಾತನಾಡಿ, ಲೋಕಸಭಾ ಚುನಾವಣೆ ಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶ ದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನು ಬಲಪಡಿಸಬೇಕು ಎಂದರು.
ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ನಗರಸಭೆಯಿಂದ ವಿಶೇಷ ಜಾಗೃತಿ ಅಭಿ ಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊ ಬ್ಬರೂ ಜಾಗೃತರಾಗಿ ಮತದಾನ ಮಾಡ ಬೇಕು. ಎಲ್ಲರನ್ನು ಮತ ಹಾಕುವಂತೆ ಪ್ರೇರೇಪಿಸಬೇಕು. ಆ ಮೂಲಕ ಚುನಾ ವಣಾ ಆಯೋಗದ ಆಶಯಗಳಿಗೆ ಶಕ್ತಿ ತುಂಬಬೇಕು ಎಂದರು.

ಯುವ ಮತದಾರರು ಹೆಚ್ಚಿನ ಆಸಕ್ತಿ ಯಿಂದ ಮತ ಚಲಾಯಿಸಬೇಕು ಮತ್ತು ನಗರ ವ್ಯಾಪ್ತಿಯಲ್ಲಿ ನಡೆಯುವ ಮತ ದಾರರ ಜಾಗೃತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ರಾದ ಪರಮೇಶ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ವಿನೋದ್ ಚಂದ್ರ ಹಾಜರಿದ್ದರು.

ಗುಂಡುರಾಜ್ ಮತ್ತು ತಂಡದವರಿಂದ ಮತದಾರರ ಜಾಗೃತಿಗಳ ಆಕರ್ಷಕ ಗೊಂಬೆಯಾಟ ಪ್ರದರ್ಶನ ನಡೆಯಿತು. ಅಲ್ಲದೇ ಬಿ.ಟಿ. ಮಾನವ ಮತ್ತು ತಂಡ ದವರಿಂದ ಬೀದಿ ನಾಟಕ ಹಾಗೂ ಜಾನ ಪದ ಕಲಾ ತಂಡಗಳಿಂದ ಪ್ರದರ್ಶನ ಕೂಡ ನಡೆಯಿತು. ವೆಚ್ಚ ವೀಕ್ಷಕರು ವಿಶೇಷ ವಾದ ಗೊಂಬೆಯಾಟವನ್ನು ಬಳಸಿ ಚುನಾವಣಾ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆಯ ಎಲ್ಲಾ ವಾರ್ಡ್‍ಗಳಲ್ಲಿ ಮತದಾರರ ಜಾಗೃತಿಗಾಗಿ ಬೀದಿನಾಟಕ, ಸಂಗೀತ, ತೊಗಲುಗೊಂಬೆ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಗರಸಭೆ ಆಯುಕ್ತ ಬಿ.ಎ.ಪರಮೇಶ್ ತಿಳಿಸಿದರು.

ಅರಸೀಕೆರೆ ವರದಿ: ತಾಲೂಕು ಆಡಳಿ ತದ ವಿವಿಧ ಇಲಾಖೆಗಳು ಮತ್ತು ಅಧಿ ಕಾರಿಗಳಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ತಹಸೀಲ್ದಾರ್ ಸಂತೋಷ್‍ಕುಮಾರ ಮಾತನಾಡಿ, 18 ವರ್ಷ ತುಂಬಿದ ಪ್ರತಿ ಯೊಬ್ಬ ವ್ಯಕ್ತಿಯು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಈಗಾಗಲೇ ಚುನಾವಣಾ ಆಯೋಗವು ಗುರುತಿನ ಚೀಟಿ ಅಥವಾ ಸೂಚಿಸಿರುವ ಆಧಾರ್ ಚೀಟಿ ಸೇರಿದಂತೆ ಇತರೇ ದೃಢೀಕರಣ ಚೀಟಿ ಯನ್ನು ತೋರಿಸಿ ಮತದಾನ ಮಾಡುವ ಅವಕಾಶ ಹೊಂದಿದ್ದು ಪ್ರತಿಯೊಬ್ಬ ಮತ ದಾರ ಕಡ್ಡಾಯವಾಗಿ ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಮತದಾನದ ಮೂಲಕ ನೀಡಬೇಕು ಎಂದು ಮನವಿ ಮಾಡಿದರು.

ಡಿವೈಎಸ್‍ಪಿ ಸದಾನಂದ್ ತಿಪ್ಪಣ್ಣನವರ್ ಮಾತನಾಡಿ, ಸಾರ್ವತ್ರಿಕ ಚುನಾವಣೆ ಯಲ್ಲಿ ಮತದಾನ ಮಾಡುವುದು ಪ್ರತಿ ಯೊಬ್ಬ ಭಾರತೀಯನ ಹಕ್ಕಾಗಿದೆ. ಸಂವಿ ಧಾನವು ಭಾರತದ ಪ್ರತಿಯೊಬ್ಬ ಪ್ರಜೆಯು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ಜನನಾಯಕನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಆದರೆ, ಕೆಲವು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವುದು ದೇಶದ ಪ್ರಗತಿಯ ದೃಷ್ಟಿ ಯಿಂದ ಪೂರಕ ಬೆಳವಣಿಗೆಯಾಗುವು ದಿಲ್ಲ. ಆ ನಿಟ್ಟಿನಲ್ಲಿ ಪ್ರಬುದ್ಧ ಮತದಾರರೆ ಲ್ಲರೂ ಲೋಕಸಭಾ ಚುನಾವಣೆಯಲ್ಲಿ ಭಾಗಿ ಯಾಗಿ ಮತವನ್ನು ಚಲಾಯಿಸಿ ಮಾದರಿ ಯಾಗಬೇಕು ಎಂದು ಕರೆ ನೀಡಿದರು.

ನಗರ ಠಾಣೆಯ ವೃತ್ತ ನಿರೀಕ್ಷಕ ರಂಗ ಸ್ವಾಮಿ ಮಾತನಾಡಿ, ನ್ಯಾಯ ಸಮ್ಮತ ಹಾಗೂ ನಿರ್ಭೀತಿಯಿಂದ ಮತ ಚಲಾ ಯಿಸಲು ಪ್ರತಿಯೊಬ್ಬ ಮತದಾರರಿಗೂ ಚುನಾವಣೆ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರು ತಮ್ಮ ವ್ಯಾಪ್ತಿಗೆ ಬರುವ ಮತ ಗಟ್ಟೆ ಕೇಂದ್ರಕ್ಕೆ ಬಂದು ಮತ ಚಲಾಯಿಸ ಬೇಕು. ಇದಕ್ಕೆ ಚುನಾವಣೆ ಆಯೋಗದ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಕ್ಷೇತ್ರ ದಲ್ಲಿ ಯಾವುದೇ ಸೂಕ್ಷ ಮತದಾನ ಕೇಂದ್ರ ಗಳಿದ್ದರೂ ಮತದಾರರು ಭಯ ಪಡದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿದರು. ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ಸರ್ಕಾರಿ ನೌಕರರು ಮತದಾನದ ಮಹತ್ವ ಹೇಳುವ ಭಿತ್ತಿಪತ್ರಗಳನ್ನು ಹಿಡಿದು ರೋಡ್ ಶೋ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

Translate »