ಫೆ.1ರಂದು ಮೈಸೂರಿನಲ್ಲಿ ಮಡಿವಾಳ ಮಾಚಿದೇವರ ಜಯಂತಿ
ಮೈಸೂರು

ಫೆ.1ರಂದು ಮೈಸೂರಿನಲ್ಲಿ ಮಡಿವಾಳ ಮಾಚಿದೇವರ ಜಯಂತಿ

January 21, 2020

ಮೈಸೂರು, ಜ.20(ಪಿಎಂ)- ಮೈಸೂರು ಜಿಲ್ಲಾ ಮಡಿವಾಳರ ಸಂಘ, ಮೈಸೂರು ತಾಲೂಕು ವೀರ ಮಡಿವಾಳರ ಸಂಘ, ಮೈಸೂರು ನಗರ ಮಡಿಕಟ್ಟೆಗಳು ಮತ್ತು ಯುವ ಸಂಘಟನೆಗಳು, ಮಹಿಳಾ ಸಂಘ ಗಳು, ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು, ಜಿಲ್ಲಾಡ ಳಿತದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂ ತ್ಯೋತ್ಸವವನ್ನು ಫೆ.1ರಂದು ಆಯೋಜಿಸಲಾಗಿದೆ ಎಂದು ಮೈಸೂರು ಮಡಿವಾಳ ಯೂತ್ ಆರ್ಗನೈಜೇಷನ್ ಅಧ್ಯಕ್ಷ ರವಿನಂದನ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆರವರಣದಿಂದ ಮಡಿವಾಳರ ಬೃಹತ್ ಮೆರವಣಿಗೆ ನಡೆಯಲಿದೆ. ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವರ ಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಮಾಚಿದೇವರ ಉತ್ಸವ ರಥಕ್ಕೆ ಶಾಸಕ ಜಿ.ಟಿ.ದೇವೆಗೌಡ ಪುಷ್ಪಾರ್ಚನೆ ಮಾಡಲಿದ್ದಾರೆ. ನಂದಿಕಂಬ ಪೂಜೆಯನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದು, ಶಾಸಕ ಎಸ್.ಎ.ರಾಮದಾಸ್ ಸಾಂಸ್ಕøತಿಕ ಕಲಾತಂಡದ ಉದ್ಘಾಟಿಸಲಿದ್ದಾರೆ ಎಂದರು.

ಕಲಾಮಂದಿರದಲ್ಲಿ ವೇದಿಕೆ ಕಾಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಉದ್ಘಾಟಿಸಲಿದ್ದರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಅನಾವರಣ ಮಾಡಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಎ.ರವಿ ಕುಮಾರ್, ನಾಗೇಶ್, ಪುರುಷೋತ್ತಮ್, ದೀಪಕ್, ತಿಲಕ್ ಗೋಷ್ಠಿಯಲ್ಲಿದ್ದರು.

Translate »