ಮೈಸೂರು: ಕರ್ನಾ ಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟ ಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಆರು ಮಂದಿ ಮಹಿಳೆಯರಿಗೆ `ಮಹಾರಾಣಿ ಕೆಂಪನಂಜಮ್ಮಣ್ಣಿ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂ ಡಿದ್ದ ಸಮಾರಂಭದಲ್ಲಿ ಸ್ತ್ರೀ ರೋಗ ತಜ್ಞ ವೈದ್ಯೆ ಡಾ.ಕೆ.ವಿ.ಲಕ್ಷ್ಮೀದೇವಿ, ಸರ್ಕಾರಿ ಮಹಾರಾಜ ಸಂಸ್ಕøತ ಪಾಠ ಶಾಲೆ ಪ್ರಾಧ್ಯಾ ಪಕಿ ಪ್ರೊ.ಎಸ್.ಎ.ಕಮಲಾಜೈನ್, ಲೇಖಕಿ ಎ.ಪುಷ್ಪಾ ಅಯ್ಯಂಗಾರ್, ಪುರೋಹಿತ ರಾದ ಡಾ.ಪಿ.ಭ್ರಮರಾಂಬ ಮಹೇಶ್ವರಿ, ಆಟೋಮೊಬೈಲ್ ಉದ್ಯಮಿ ಎನ್. ಸಂಗೀತಾ, ಗಾಯಕಿ ಸಿ.ವಿ.ಅಪೂರ್ವ ಜೈನ್ ಅವರಿಗೆ ಕೆಂಪನಂಜಮ್ಮಣ್ಣಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭ ಉದ್ಘಾಟಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮೈಸೂರು ನಗರ ದೇಶದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ದೇಶದ ಇತರೆ ನಗರಗಳಿಗೆ ಭೇಟಿ ನೀಡಿದಾಗ ಮೈಸೂರಿನ ವೈಶಿಷ್ಟ್ಯಗಳು ಸ್ಪಷ್ಟವಾಗಿ ಅರಿ ವಿಗೆ ಬರುತ್ತವೆ. ಮೈಸೂರಿನ ಈ ಹಿರಿಮೆ ಗಳಿಗೆ ಕಾರಣ ಮೈಸೂರು ಮಹಾರಾಜರ ನೀಡಿದ ಕೊಡುಗೆ ಎಂದು ಸ್ಮರಿಸಿದರು.
ಅಂದಿನ ಮೈಸೂರು ಸಂಸ್ಥಾನದ ಪ್ರಗ ತಿಗೆ ಕೆಂಪನಂಜಮ್ಮಣ್ಣಿ (ವಾಣಿವಿಲಾಸ ಸನ್ನಿ ಧಾನ) ಅವರ ಕೊಡುಗೆ ಅಪಾರವಾಗಿದೆ. ಆಧುನಿಕ ಮೈಸೂರು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಜನ್ಮ ನೀಡಿ, ಸಮರ್ಥ ಆಡಳಿತಗಾರನಾಗಿ ರೂಪಿಸಿದ ಕೀರ್ತಿ ಕೆಂಪನಂಜಮ್ಮಣ್ಣಿ ಅವರಿಗೆ ಸಲ್ಲು ತ್ತದೆ ಎಂದು ತಿಳಿಸಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದಾಗ್ಯೂ ಮಹಿಳೆಯರು ಉನ್ನತ ಶಿಕ್ಷ ಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಸರ್ಕಾ ರವೂ ಮಹಿಳೆಯರ ಶಿಕ್ಷಣಕ್ಕೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದು, ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಅಧಿ ಕಾರಿಯಾಗಿ ಸೇವೆ ಸಲ್ಲಿಸಲು ಮಹಿಳೆಯರು ಮುಂದೆ ಬರಬೇಕಿದ್ದು, ಇದಕ್ಕಾಗಿ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಲು ಮುಂದಾ ಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ನಟರಾಜ ಮಹಿಳಾ ಕಾಲೇ ಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಹಾರಾಣಿ ಕೆಂಪನಂಜ ಮ್ಮಣ್ಣಿ ಕುರಿತು ಮಹಾರಾಣಿ ಮಹಿಳಾ ಕಲಾ ಕಾಲೇಜು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್.ಅನಿತಾ ಮಾತ ನಾಡಿದರು. ಕುಟುಂಬ ರಕ್ಷಣಾ ವೇದಿಕೆ ಅಧ್ಯಕ್ಷೆ ಡಾ.ಮಂಜುಳಾ ಉಮೇಶ್, ಕರ್ನಾ ಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ ಮತ್ತಿತರರು ಹಾಜರಿದ್ದರು.