ಜಿಲ್ಲಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮ
ಚಾಮರಾಜನಗರ

ಜಿಲ್ಲಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮ

October 25, 2018
  • ಎಸ್‍ಟಿಗೆ ತಳವಾರ, ಪರಿವಾರ: ಗೊಂದಲ ನಿವಾರಣೆಗೆ ಪ್ರಯತ್ನ
  • ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಂಸದ ಧ್ರುವನಾರಾಯಣ್ ಭರವಸೆ

ಚಾಮರಾಜನಗರ: ನಾಯಕ ಸಮಾಜದ ತಳವಾರ ಮತ್ತು ಪರಿವಾರವನ್ನು ಎಸ್‍ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿ ಗೊಂದಲವನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಂಸದ ಆರ್.ಧ್ರುವನಾರಾಯಣ್ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರ ಯದಲ್ಲಿ ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ನಾಯಕ ಸಮುದಾಯವನ್ನು ತಳವಾರ ಮತ್ತು ಪರಿವಾರ ಎಂದೂ ಸಹ ಕರೆಯ ಲಾಗುತ್ತದೆ. ಇವರನ್ನು ಎಸ್‍ಟಿ ವರ್ಗಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದು ಪಾರ್ಲಿಮೆಂಟ್‍ನಲ್ಲಿ ಅನುಮೋದನೆ ಆಗ ಬೇಕಾಗಿದೆ. ಇದನ್ನು ಅನುಮೋದಿಸುವಂತೆ ನಾನು ಮತ್ತು ನಾಯಕ ಸಮಾಜದ ಮುಖಂಡರ ಜೊತೆಗೂಡಿ ಕೇಂದ್ರ ಬುಡ ಕಟ್ಟು ಸಚಿವರನ್ನು ನಾಲ್ಕು ಬಾರಿ ಭೇಟಿ ಮಾಡಿದ್ದೇನೆ. ಇತ್ತೀಚೆಗೆ ನಡೆದ ಮಳೆ ಗಾಲದ ಅಧಿವೇಶನದಲ್ಲಿ ಇದು ಚರ್ಚೆಗೆ ಬರಲಿಲ್ಲ. ಮುಂದಿನ ತಿಂಗಳು ನಡೆಯ ಲಿರುವ ಚಳಿಗಾಲದ ಅಧಿವೇಶನದಲ್ಲಿ ನಾನು ಈ ಬಗ್ಗೆ ಮಾತನಾಡುತ್ತೇನೆ. ಈಗಿರುವ ಗೊಂದಲ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಧ್ರುವನಾರಾಯಣ್ ಹೇಳಿದರು.

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾ ಯಣ ದೇಶದ ಅತಿದೊಡ್ಡ ಮಹಾಕಾವ್ಯ ವಾಗಿದೆ. ಈ ಮಹಾಕಾವ್ಯದಲ್ಲಿ ಭಾರತ ದೇಶದ ಜೀವನ ಚರಿತ್ರೆ, ಸಂಸ್ಕøತಿ ಅಡ ಗಿದೆ. ವಾಲ್ಮೀಕಿ ಅವರು ತಪಸ್ಸಿನ ಶಕ್ತಿ ಯಿಂದ ಮಹಾಕಾವ್ಯ ನಮೂದಿಸಿ ದ್ದಾರೆ. ರಾಮಾಯಣ ಪ್ರಪಂಚದಲ್ಲಿಯೇ ಶ್ರೇಷ್ಠ ಕಾವ್ಯ ಆಗಿದೆ ಎಂದು ಧ್ರುವನಾರಾಯಣ್ ಪ್ರಶಂಸಿಸಿದರು.

ಹಿಂದೂ ಧರ್ಮದ ಪವಿತ್ರ ಗ್ರಂಥಗಳು ರಾಮಾಯಣ ಮತ್ತು ಮಹಾಭಾರತ, ಇಂತಹ ಪವಿತ್ರ ಗ್ರಂಥಗಳನ್ನು ಬರೆದ ಮಹಾನ್ ಪುರುಷರ ಜಯಂತಿಗಳನ್ನು ಒಂದೇ ಸಮಾಜದ ಜನಾಂಗದವರು ಆಚರಿಸುವಂತಾಗಿರುವುದು ದುರಂತ. ಹಿಂದೂ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂ ಡಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ. ಅಂಬೇಡ್ಕರ್ ಜಯಂತಿಯನ್ನು ದಲಿತರು, ಬಸವ ಜಯಂತಿಯನ್ನು ಲಿಂಗಾಯಿತರು, ಭಗೀರಥ ಜಯಂತಿಯನ್ನು ಉಪ್ಪಾರರು, ವಾಲ್ಮೀಕಿ ಜಯಂತಿಯನ್ನು ನಾಯಕರು, ಕನಕ ಜಯಂತಿಯನ್ನು ಬರೀ ಕುರುಬ ಸಮಾಜದವರು ಆಚರಿಸುವಂತಾಗಿರು ವುದು ದೇಶದ ದೊಡ್ಡ ದುರಂತ. ನಮ್ಮ ದೇಶದಲ್ಲಿ ಜಾತಿ ಎನ್ನುವ ಒಂದು ದೊಡ್ಡ ಕಾಯಿಲೆ ಬೇರೂರಿದೆ. ಜಾತಿ ಪದ್ಧತಿ, ಮೌಢ್ಯತೆ, ಕಂದಾಚಾರ ತುಂಬಿ ತುಳುಕು ತ್ತಿದೆ. ಇದು ದೇಶದ ಹಾಗೂ ನಾಗರಿಕ ಸಮಾಜದ ಬೆಳವಣಿಗೆಗೆ ಮಾರಕ ಎಂದು ಸಂಸದರು ಖೇದ ವ್ಯಕ್ತಪಡಿಸಿದರು.

ಶಿಕ್ಷಣಕ್ಕೆ ಆದ್ಯತೆ ನೀಡಿ: ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ರಾಮಾಯಣ ಎಂಬ ಶ್ರೇಷ್ಟ ಕಾವ್ಯ ರಚಿಸಿದ ಮಹಾಕವಿ ಮಹರ್ಷಿ ಶ್ರೀ ವಾಲ್ಮೀಕಿ ಎಂದರು.

ಯಾವುದೇ ದೇಶ, ಸಮಾಜ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಾಲ್ಯ ವಿವಾಹ ಪದ್ಧತಿಗೆ ಕಡಿವಾಣ ಹಾಕಬೇಕು. ಈ ಮೂಲಕ ಜನಾಂ ಗದ ಮೇಲೆ ಇರುವ ಕಳಂಕವನ್ನು ತೊಡೆದು ಹಾಕುವಂತೆ ಕರೆ ನೀಡಿದರು.

ರಾಮರಾಜ್ಯದ ಪರಿಕಲ್ಪನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಇತಿಹಾಸ ಸ್ನಾತಕೋ ತ್ತರ ಮತ್ತು ಪದವಿ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಪ್ರಧಾನ ಭಾಷಣ ಮಾಡಿ, ರಾಮನಿಗೆ ಜೀವಕೊಟ್ಟು ರಾಷ್ಟ್ರಕ್ಕೆ ರಾಮಾಯಣದ ಮೂಲಕ ಪರಿಚಯಿಸಿ ರಾಮರಾಜ್ಯದ ಪರಿಕಲ್ಪನೆ ನೀಡಿದವರು ಮಹರ್ಷಿ ಶ್ರೀ ವಾಲ್ಮೀಕಿ ಅವರು ಎಂದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್, ಸದಸ್ಯರಾದ ಎನ್.ಉಮಾ ವತಿ, ಕೆ.ಪಿ.ಸದಾಶಿವಮೂರ್ತಿ, ಆರ್.ಬಾಲ ರಾಜು, ಚೆನ್ನಪ್ಪ, ಶಶಿಕಲಾ, ಸೋಮ ಲಿಂಗಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಸಿಇಓ ಡಾ.ಕೆ.ಹರೀಶ್ ಕುಮಾರ್, ಎಸ್ಪಿ ಧರ್ಮೆಂಧರ್ ಕುಮಾರ್ ಮೀನಾ, ಜಿಪಂ ಮಾಜಿ ಅಧ್ಯಕ್ಷೆ ಎಂ.ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಶಂಕರ ಮೂರ್ತಿ, ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ಪು.ಶ್ರೀನಿ ವಾಸನಾಯ್ಕ, ಮಹದೇವನಾಯ್ಕ, ಸುರೇಶ್ ನಾಯ್ಕ, ಹೆಚ್.ವಿ.ಚಂದ್ರು, ಚಂಗುಮಣಿ, ಸೋಮ ನಾಯಕ, ಕುಮಾರನಾಯ್ಕ, ಕೃಷ್ಣನಾಯ್ಕ, ಪ್ರಕಾಶ್, ಅರಕಲವಾಡಿ ನಾಗೇಂದ್ರ, ಶಿವರಾಜು, ಚಂದ್ರಶೇಖರ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾ ಣಾಧಿಕಾರಿ ಎಸ್.ಕೃಷ್ಣಪ್ಪ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸುರೇಶ್‍ನಾಗ್ ಮತ್ತು ತಂಡದವರಿಂದ ಜನಪದ ಮತ್ತು ಭಕ್ತಿಗೀತೆಗಳ ಗಾಯನ ನಡೆಯಿತು.

Translate »