ಮಂಡಲಾಧ್ಯಕ್ಷರಾಗಿ ಮಲ್ಲೇಶ್ ನೇಮಕ
ಚಾಮರಾಜನಗರ

ಮಂಡಲಾಧ್ಯಕ್ಷರಾಗಿ ಮಲ್ಲೇಶ್ ನೇಮಕ

July 31, 2018

ಗುಂಡ್ಲುಪೇಟೆ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನೂತನ ಮಂಡಲಾಧ್ಯಕ್ಷರಾಗಿ ಹಿರಿಯ ಮುಖಂಡ ಎನ್.ಮಲ್ಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಹಿರಿಯ ಮುಖಂಡ ಹಾಗೂ ಜಿಲ್ಲಾ ವಾಲ್ಮೀಕಿ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಮಲ್ಲೇಶ್ ಅವರನ್ನು ನೂತನವಾಗಿ ಮಂಡಲಾಧ್ಯಕ್ಷರನ್ನಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ನೇಮಕ ಮಾಡಿದ್ದಾರೆ.

ಈ ವೇಳೆ ಮಂಡಲಾಧ್ಯಕ್ಷ ಎನ್.ಮಲ್ಲೇಶ್ ಮಾತನಾಡಿ, ತಾಲೂಕು ಬಿಜೆಪಿ ಘಟಕದಿಂದ ಆ. 1ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಸಿಎಂಎಸ್ ಕಲಾ ಮಂದಿರದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನೂತನ ಬಿಜೆಪಿ ಶಾಸಕರ ಸನ್ಮಾನ ಹಾಗೂ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕೊಡಸೋಗೆ ಸಿದ್ದರಾಮಪ್ಪ, ಸಿ.ಹುಚ್ಚೇಗೌಡ, ಮುಖಂಡರಾದ ಮಹದೇವಪ್ರಸಾದ್, ಕೆ.ಆರ್.ಲೋಕೇಶ್, ಆಲತ್ತೂರು ರಾಜೇಶ್, ಬಸವಣ್ಣ, ಮಹದೇವಶೆಟ್ಟಿ, ಮಹೇಶ್ ಇದ್ದರು.

Translate »