ಮೈಸೂರಲ್ಲಿ ಮಂಡ್ಯ ಒಕ್ಕೂಟ ಅಸ್ತಿತ್ವಕ್ಕೆ
ಮೈಸೂರು

ಮೈಸೂರಲ್ಲಿ ಮಂಡ್ಯ ಒಕ್ಕೂಟ ಅಸ್ತಿತ್ವಕ್ಕೆ

June 7, 2019

ಮೈಸೂರು: ಮೈಸೂರಿನಲ್ಲಿ `ಮಂಡ್ಯ ಒಕ್ಕೂಟ’ ಸ್ಥಾಪಿಸಲಾಗಿದೆ.ಮಂಡ್ಯ ಒಕ್ಕೂಟವನ್ನು ಜಿಲ್ಲಾ ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಲಾಗಿದ್ದು, ಅಸ್ತಿತ್ವಕ್ಕೆ ಬಂದಿರುವ ಅಡ್ಯಾಕ್ ಕಮಿಟಿಯಲ್ಲಿ ಎಸ್.ಎ.ನರಸಿಂಹೇಗೌಡ ಗೌರವಾಧ್ಯಕ್ಷ ರಾಗಿ, ಸಿ.ಎನ್.ಕೃಷ್ಣೇಗೌಡ ಅಧ್ಯಕ್ಷರಾಗಿ, ಆರ್.ಜೆ.ಗುರುದೇವ್ ಉಪಾಧ್ಯಕ್ಷರಾಗಿ, ಸಿ.ಎ.ದೇವರಾಜು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹೆಚ್.ಎಂ. ಸಿದ್ದಯ್ಯ ಖಜಾಂಚಿ ಯಾಗಿ ನಿಯೋಜಿತಗೊಂಡಿದ್ದಾರೆ. ಪ್ರಕಾಶ ಚಿಕ್ಕಪಾಳ್ಯ, ಎಂ.ರಮೇಶ, ಎಸ್.ಟಿ.ರವಿ ಕುಮಾರ್, ಎನ್.ಎಂ.ಶಿವಪ್ರಕಾಶ್, ಪಿ.ಎಸ್.ವಿಶ್ವನಾಥ, ಎ.ಎಲ್.ಉಮೇಶ, ಎಂ.ಎನ್. ಶಿವಕುಮಾರ್, ಮಹದೇವು ಹಾಗೂ ಲೋಕೇಶ ಮಂಡ್ಯ ಒಕ್ಕೂಟದ ನಿರ್ದೇಶಕರಾಗಿದ್ದಾರೆ.

ಬುಧವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಒಕ್ಕೂಟದ ಮೊದಲ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಒಕ್ಕೂಟಕ್ಕೆ ಸದಸ್ಯತ್ವ ಪಡೆಯುವುದು, ಉದ್ಘಾಟನೆ ಹಾಗೂ ರೂಪು-ರೇಷೆಗಳ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಸಿ.ಎ.ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »