ಬಲಿಗೆ ಕಾದಿರುವ ಮ್ಯಾನ್‍ಹೋಲ್
ಮೈಸೂರು

ಬಲಿಗೆ ಕಾದಿರುವ ಮ್ಯಾನ್‍ಹೋಲ್

October 16, 2018

ಮೈಸೂರು:  ಮೈಸೂರಿನ ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‍ಹೋಲ್ ವೊಂದು ಕುಸಿದಿದ್ದು ಅಮಾಯಕರ ಬಲಿಗಾಗಿ ಕಾಯುತ್ತಿದೆ. ಭಾನುವಾರ ಸಂಜೆಯೇ ಮ್ಯಾನ್‍ಹೋಲ್ ಕುಸಿದಿದ್ದರೂ ಇದುವರೆಗೂ ಪಾಲಿಕೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

ನಜರ್‍ಬಾದ್ ವೃತ್ತದಿಂದ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯ ಮೂಲಕ ಹಾದು ಹೋಗುವ ಹೈದರಾಲಿ ರಸ್ತೆಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂ ಗಣದ ಮುಂದೆಯೇ ಮ್ಯಾನ್‍ಹೋಲ್ ಕುಸಿದಿದೆ. ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮಾತ್ರ ವಲ್ಲದೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪಾದಚಾರಿಗಳು, ಕ್ರೀಡಾಂಗಣಕ್ಕೆ ವಿವಿಧ ಕ್ರೀಡಾ ತರ ಬೇತಿ ಪಡೆಯಲು ಬರುವ ಕ್ರೀಡಾಪಟುಗಳು ಮ್ಯಾನ್ ಹೋಲ್‍ಗೆ ಆಯತಪ್ಪಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ಈ ರಸ್ತೆಯಲ್ಲಿ ಸಾವಿನ ಮನೆಯ ಕದ ತಟ್ಟುವ ವಾತಾವರಣವನ್ನು ಕುಸಿ ದಿರುವ ಮ್ಯಾನ್‍ಹೋಲ್ ಸೃಷ್ಟಿಸಿದೆ.

ಗ್ರಾಮಾಂತರ ಬಸ್ ನಿಲ್ದಾಣದಿಂದ ಬನ್ನೂರು, ಮಳವಳ್ಳಿ, ಕನಕಪುರ, ಟಿ.ನರಸೀಪುರ ಸೇರಿದಂತೆ ವಿವಿಧೆಡೆಗೆ ತೆರಳುವ ಕೆಎಸ್‍ಆರ್‍ಟಿಸಿ ಬಸ್‍ಗಳು ಹಾಗೂ ಖಾಸಗಿ ಬಸ್‍ಗಳು ಇದೇ ರಸ್ತೆಯಲ್ಲಿ ಸಂಚರಿ ಸುತ್ತವೆ. ಆದರೆ ಮ್ಯಾನ್‍ಹೋಲ್ ಕುಸಿದು 24 ಗಂಟೆ ಕಳೆದಿದ್ದರೂ ಪಾಲಿಕೆಯ ಸಿಬ್ಬಂದಿ ದುರಸ್ತಿ ಮಾಡದೇ ಇರುವುದು ಪಾಲಿಕೆಯ ಆಡಳಿತದಲ್ಲಿನ ಅವ್ಯವಸ್ಥೆಗೆ ಕೈಗನ್ನಡಿ ಹಿಡಿದಂತಿದೆ.

ದಸರಾ ಕ್ರೀಡಾಕೂಟ: ಚಾಮುಂಡಿವಿಹಾರ ಕ್ರೀಡಾಂ ಗಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ದಸರಾ ಕ್ರೀಡಾಕೂಟ ನಡೆಯುತ್ತಿದೆ. ಸಾವಿರಾರು ಕ್ರೀಡಾಪಟು ಗಳು ಭಾಗವಹಿಸುತ್ತಿದ್ದಾರೆ. ಈ ಮಾರ್ಗದಲ್ಲಿನ ಮ್ಯಾನ್ ಹೋಲ್ ಕುಸಿದಿರುವುದು ಪ್ರವಾಸಿಗರು ಹಾಗೂ ಕ್ರೀಡಾಪಟುಗಳು ಅಸಮಾಧಾನಗೊಳ್ಳುವಂತೆ ಮಾಡಿದೆ.

ಮೂವರು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರು: ರಸ್ತೆಯ ಬದಿಯಲ್ಲಿರುವ ಮ್ಯಾನ್‍ಹೋಲ್ ಕುಸಿದಿರುವುದು ದೂರದಿಂದ ವಾಹನ ಸವಾರರಿಗೆ ಗೋಚರಿಸುವುದಿಲ್ಲ. ಎಸ್‍ಪಿ ಕಚೇರಿ ಕಡೆಯಿಂದ ನಜರ್‍ಬಾದ್ ವೃತ್ತದ ಕಡೆಗೆ ಬರುವ ವಾಹನ ಸವಾರರಿಗೆ ಕುಸಿದಿರುವ ಮ್ಯಾನ್‍ಹೋಲ್ ಅಪಾ ಯಕ್ಕೆ ಎಡೆ ಮಾಡಿಕೊಡುತ್ತಿದೆ. ಭಾನುವಾರ ರಾತ್ರಿ ಮೂವರು ಬೈಕ್ ಸವಾರರು ಮ್ಯಾನ್‍ಹೋಲ್ ಸಮೀಪ ಆಯತಪ್ಪಿ ಬಿದ್ದಿದ್ದಾರೆ.

ಮೈಸೂರು ಮಹಾನಗರಪಾಲಿಕೆಯ ಅಧಿಕಾರಿಗಳು ಕೂಡಲೇ ಮ್ಯಾನ್‍ಹೋಲ್ ದುರಸ್ತಿ ಮಾಡಿಸಿ ರಸ್ತೆ ಸಂಚಾರಿಗಳಿಗೆ ಪ್ರಾಣಾಪಾಯ ಆಗುವುದನ್ನು ತಪ್ಪಿಸ ಬೇಕು. ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮುಜುಗರವಾಗದಂತೆ ಕಟ್ಟೆಚ್ಚರ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Translate »