ಮೈಸೂರು, ಜು.29(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಮೀಕ್ಷೆ ಆರಂಭಗೊಂಡಿದ್ದು, ಪಾಲಿಕೆ ವಲಯ ಕಚೇರಿ ವಾರು ಆ.6ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ.
ಸೋಮವಾರ ವಲಯ ಕಚೇರಿ-2ರಲ್ಲಿ ಸಮೀಕ್ಷೆ ನಡೆಸ ಲಾಗಿದ್ದು, 60ಕ್ಕೂ ಹೆಚ್ಚು ಮಂದಿ ಮ್ಯಾನ್ಯುಯಲ್ ಸ್ಕ್ಯಾವೆಂ ಜಿಂಗ್ ವೃತ್ತಿ ಮಾಡಿರುವುದಾಗಿ ನೋಂದಣಿ ಮಾಡಿಕೊಂಡಿ ದ್ದಾರೆ. ಅದೇ ರೀತಿ ಜು.26ರಂದು ವಲಯ ಕಚೇರಿ 1ರಲ್ಲಿ ನಡೆದ ಸಮೀಕ್ಷಾ ಕಾರ್ಯದಲ್ಲಿ 31 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಗಳ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ (ಎನ್‍ಎಸ್‍ಕೆ ಎಫ್‍ಡಿಸಿ/ ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆ) ಮೂಲಕ ಇಡೀ ದೇಶದಾದ್ಯಂತ ಈ ಸಮೀಕ್ಷೆ ನಡೆಯುತ್ತಿದೆ.
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರಲ್ಲಿ ಇಂದು ಸಮೀಕ್ಷಾ ಕಾರ್ಯದ ವೇಳೆ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಮೈಸೂರು ಜಿಲ್ಲೆಯ ಸಮೀಕ್ಷಾ ಕಾರ್ಯ ಸಂಯೋಜಿಕಿ ಪುಷ್ಪಲತಾ, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಈ ಸಮೀಕ್ಷಾ ಕಾರ್ಯ ನಡೆಸಲು ಮುಂದಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ವೃತ್ತಿಯಲ್ಲಿರುವವರನ್ನು ಅದರಿಂದ ಮುಕ್ತಗೊಳಿಸಿ ಅವ ರನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ನೋಂದಣಿ ಮಾಡಿಕೊಂಡ ಎಲ್ಲಾ ಅರ್ಜಿ ಗಳನ್ನು ಪರಿಶೀಲಿಸಲಾಗುವುದು. ಮ್ಯಾನ್ಯುಯಲ್ ಸ್ಕ್ಯಾವೆಂ ಜಿಂಗ್ ವೃತ್ತಿ ಮಾಡಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಅಂತಹವರನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಎಂದು ಗುರುತಿಸಲಾಗುವುದು. ಆ ಬಳಿಕ ಫಲಾನುಭವಿಗಳಿಗೆ ಸರ್ಕಾ ರದ ಸೌಲಭ್ಯಗಳು ದೊರೆಯಲಿವೆ. ಒಂದೇ ಕಂತಿನಲ್ಲಿ 40 ಸಾವಿರ ರೂ. ಸಹಾಯಧನದೊಂದಿಗೆ ಫಲಾನುಭವಿ ಗಳ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿ ಕೊಳ್ಳಲಿದೆ. ಜೊತೆಗೆ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಹಿನ್ನೆಲೆಯಲ್ಲಿ ಅಗತ್ಯವಿರುವ ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತದೆ. ಮಲ ಹೊರುವವರು ಹಾಗೂ ಕೈಯ್ಯಲ್ಲಿ ಬಾಚುವವರು ಈ ಸಮೀಕ್ಷಾ ವ್ಯಾಪ್ತಿಗೆ ಬರು ತ್ತಾರೆ ಎಂದರು. ರಾಜ್ಯದಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರ, ಗುಲ್ಬರ್ಗ, ಧಾರವಾಡ ಹಾಗೂ ಕೋಲಾರ ಸೇರಿದಂತೆ ಒಟ್ಟು 6 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
1,226 ಮ್ಯಾನ್ಯುಯಲ್ ಸ್ಕ್ಯಾವೆಂಜರ್: ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಳೆದ 2018ರ ಜೂನ್ ನಲ್ಲಿ ನಡೆದ ಸಮೀಕ್ಷಾ ಕಾರ್ಯದಲ್ಲಿ 1,230 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,226 ಮಂದಿ ಯನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಎಂದು ಗುರುತಿಸ ಲಾಗಿದೆ ಎಂದರು. ಅದೇ ರೀತಿ ಇದೇ ಜು.15ರಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗಿದೆ. ಪಿರಿಯಾಪಟ್ಟಣದಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಹುಣಸೂರಿನಲ್ಲಿ 161, ಹೆಚ್‍ಡಿ ಕೋಟೆ ಹಾಗೂ ಸರಗೂರು ಸೇರಿ 82, ನಂಜನಗೂಡಿ ನಲ್ಲಿ 249, ತಿ.ನರಸೀಪುರ ಹಾಗೂ ಬನ್ನೂರು ಸೇರಿ 85 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ವಿಲೇವಾರಿ ಪ್ರಕ್ರಿಯೆ ಬಾಕಿ ಉಳಿದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜು.26 ರಿಂದ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. ಜಿಲ್ಲಾ ಸಮೀಕ್ಷಾ ಕಾರ್ಯದ ಮೊಬಿಲೈಜರ್‍ಗಳಾದ ನಂಜುಂಡಮೌರ್ಯ, ಗೌರಿ ಮತ್ತಿತರರು ಹಾಜರಿದ್ದರು.