ಮೈಸೂರು,ಆ.4(ಎಸ್‍ಪಿಎನ್)-ಗುರು -ಹಿರಿಯರು, ವೃದ್ಧ ತಂದೆ-ತಾಯಿ, ಪವಿತ್ರ ಗೋವು ಹಾಗೂ ಪ್ರಕೃತಿಯ ಮೇಲೆ ಯುವ ಪೀಳಿಗೆ ಗೌರವ ಭಾವನೆ ಉಳಿಸಿಕೊಳ್ಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ಟಿ.ಕೆ.ಬಡಾವಣೆಯ ಶ್ರೀ ಕೃಷ್ಣಧಾಮದಲ್ಲಿ 32ನೇ ಚಾತುರ್ಮಾಸ್ಯ 10ನೇ ದಿನ ಕಾರ್ಯಕ್ರಮದಲ್ಲಿ ಭಾಗ ವಹಿಸಿ, ಮಾತನಾಡಿದ ಶ್ರೀಗಳು, ಗುರು-ಹಿರಿಯರು, ವೃದ್ಧ ತಂದೆ-ತಾಯಿ, ಪವಿತ್ರ ಗೋವು ಹಾಗೂ ಪರಿಸರ ಕಾಳಜಿವುಳ್ಳ ಮೂರು ಕಥೆಗಳ ಮೂಲಕ ಸಭಿಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರು.
ಮಕ್ಕಳನ್ನೇ ಸರ್ವಸ್ವ ಎಂದು ನಂಬುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಕೈ ಬಿಟ್ಟು ಮಕ್ಕಳು, ಹಲವು ಪ್ರಯೋಜನ ಪಡೆದರೂ ಗೋವುಗಳನ್ನು ಕೊನೆಗಾಲ ದಲ್ಲಿ ಕಟುಕರಿಗೆ ಕೊಡುವ ಪ್ರಸಂಗ ಹಾಗೂ ಸಮಾನತೆ, ಸ್ವಾತಂತ್ರ್ಯ ಹೆಸರಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಬಂಧಗಳ ಕೊಂಡಿಯ ಪ್ರಸಂಗಗಳನ್ನು ಕಥೆ ಮೂಲಕ ಶ್ರೀಗಳು ಮನೋಜ್ಞವಾಗಿ ವಿವರಿಸಿದರು.
ವೃದ್ಧಾಪ್ಯದಲ್ಲಿ ತಂದೆ-ತಾಯಿ ನೋಡಿ ಕೊಳ್ಳುವ ಕಥೆ: ಒಂದೂರಿನಲ್ಲಿ ಒಬ್ಬ ರಾಜ ನಿದ್ದ. ಆತನಿಗೆ ತಾನು ಮಹಾತಪಸ್ವಿಯಾಗ ಬೇಕೆಂಬ ಹಂಬಲದಿಂದ ವೃದ್ಧ ತಂದೆ-ತಾಯಿ, ಪತ್ನಿ ಸೇರಿದಂತೆ ರಾಜ ಪರಿವಾರ ವನ್ನು ಬಿಟ್ಟು ಕಾಡಿಗೆ ಹೋಗಿ ಭಗವಂತ ವನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು ಆರಂಭಿಸುತ್ತಾನೆ. ದಿನ ಕಳೆದಂತೆ ಮಳೆಗಾಲ ಆರಂಭವಾಗಿ, ಆತ ತಪಸ್ಸು ಮಾಡುತ್ತಿದ್ದ ಸ್ಥಳದಲ್ಲಿ ಜೋರು ಮಳೆ ಸುರಿದು, ಆ ಸ್ಥಳವೆಲ್ಲಾ ನೀರಿನಿಂದ ಆವೃತಗೊಳ್ಳುತ್ತದೆ. ಜೊತೆಗೆ ಜೋರು ಮಳೆ ಬೇರೆ. ಇದನ್ನು ಅರಿತ ಕೋಣವೊಂದು ತಪಸ್ಸು ಮಾಡು ತ್ತಿದ್ದ ರಾಜನ ಬಳಿ ಬಂದು ತನ್ನ ಶರೀರ ದಿಂದ ರಾಜನನ್ನು ಮಳೆಯಿಂದ ರಕ್ಷಣೆ ನೀಡಿದ ಪ್ರಸಂಗ ಜರುಗುತ್ತದೆ.
ಮಳೆ ನಿಂತ ಮೇಲೆ ರಾಜ ಈ ಪ್ರಾಣಿಗೆ ತಾನು ಯಾವುದೇ ಉಪಕಾರ ಮಾಡ ದಿದ್ದರೂ, ತನಗೆ ಮಳೆಯಿಂದ ರಕ್ಷಣೆ ನೀಡಿದ್ದು, ಅವನ ಮನಸ್ಸಿಗೆ ನಾಟಿತು. ತನ್ನ ವೃದ್ಧ ತಂದೆ-ತಾಯಿಯನ್ನು ಅರ ಮನೆಯಲ್ಲಿ ಬಿಟ್ಟು ಬಂದು ಅನೇಕ ವರ್ಷ ಗಳೇ ಕಳೆದಿವೆ. ಅವರು ತನಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿದ್ದರೂ ಕೊನೆಗಾಲದಲ್ಲಿ ಅವರಿಗೆ ಆಸರೆಯಾಗಿ ನಿಲ್ಲಲಿಲ್ಲ ಎಂಬ ಘಟನೆ ನೆನೆದು ಬೇಸರ ಪಟ್ಟುಕೊಳ್ಳುತ್ತಾನೆ ಎಂದರಲ್ಲದೆ, ಈ ಘಟನೆಯಿಂದ ರಾಜನಿಗೆ ಸಂಧ್ಯಾಕಾಲದಲ್ಲಿರುವ ವೃದ್ಧ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಸಂದೇಶ ಈ ಕಥೆಯಲ್ಲಿದೆ ಎಂದರು.
ತಾಯಿಯ ಮಹತ್ವ ಸಾರುವ ಕಥೆ: ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ಮದುವೆ ಆಗಿ ಎಷ್ಟು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಮಕ್ಕಳು ಪಡೆಯಬೇ ಕೆಂಬ ಹಂಬಲದಿಂದ ಕಾಡಿಗೆ ತೆರಳಿ ಮಹಾತಪಸ್ಸು ಕೈಗೊಳ್ಳುತ್ತಾನೆ. ರಾಜನ ಕಠಿಣ ತಪಸ್ಸಿಗೆ ಭಗವಂತ ಪ್ರತ್ಯಕ್ಷನಾಗಿ ಮಕ್ಕಳಾಗುವ ಮಂತ್ರಾಕ್ಷರಗಳನ್ನು ಬೋಧಿಸುತ್ತಾನೆ. ಭಗವಂತನಿಂದ ವರ ಪಡೆದ ರಾಜ, ಮರಳಿ ರಾಜಕ್ಕೆ ಹಿಂದಿರು ಗುತ್ತಾನೆ. ಮುಂದೆ ರಾಜನಿಗೆ ಮಕ್ಕಳಾಗುತ್ತವೆ.
ಈ ಮಕ್ಕಳೊಂದಿಗೆ ರಾಜ ಸಂತೋಷ ದಿಂದ ರಾಜ್ಯಭಾರ ಮಾಡುವ ಸಂದರ್ಭ ದಲ್ಲಿ ಅನಿವಾರ್ಯ ಕಾರಣಗಳಿಗಾಗಿ ರಾಜ ಮತ್ತೆ ಕಾಡಿಗೆ ತೆರಳುತ್ತಾನೆ. ಈ ಸಂದರ್ಭದಲ್ಲಿ ಈತ ತಾಪಸಿಯಾಗಿ (ಹೆಣ್ಣಾಗಿ) ಪರಿವರ್ತಿತನಾಗುತ್ತಾನೆ. ಈ ರೂಪದಲ್ಲಿ ನಾನು ರಾಜ್ಯಕ್ಕೆ ಹಿಂದಿರುಗು ವುದು ತರವಲ್ಲ ಎಂಬ ನಿರ್ಧಾರಕ್ಕೆ ಬಂದ ರಾಜ, ಕಾಡಿನಲ್ಲೇ ವಾಸಿಸಲು ಶುರು ಮಾಡುತ್ತಾನೆ. ಈ ವೇಳೆ ಓರ್ವ ಋಷಿ ಪರಿಚಯವಾಗಿ, ಈ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ಮದುವೆಯಾಗಿ, ಈ ಇಬ್ಬರಿಗೂ ಮಕ್ಕಳಾಗುತ್ತವೆ.
ಈ ಮಕ್ಕಳನ್ನು ಪೋಷಣೆ ಮಾಡಿ ಕೊಂಡು ಕಾಡಿನಲ್ಲೇ ಜೀವನ ನಡೆಸು ವಾಗ ಹೆಣ್ಣಿನ ರೂಪದಲ್ಲಿ ಪಡೆದ ಮಕ್ಕಳು ದೊಡ್ಡವರಾಗುತ್ತಾರೆ. ನಂತರ ಗಂಡಿನ ರೂಪದಲ್ಲಿ ಪಡೆದ ಮಕ್ಕಳೆಲ್ಲರೂ ದೊಡ್ಡ ವರಾಗಿ ರಾಜ್ಯವಾಳುತ್ತಾರೆ. ಇವೆರಡು ರೂಪದಲ್ಲಿ ಪಡೆದ ಮಕ್ಕಳನ್ನು ಒಟ್ಟು ಗೂಡಿಸಿ, ಅಧಿಕಾರ ಹಂಚಿಕೆ ಮಾಡಿ ಕೊಂಡು ಸುಖವಾಗಿ ರಾಜ್ಯಭಾರ ಮಾಡು ವಂತೆ ಎಲ್ಲರಿಗೂ ನಡೆದ ಘಟನೆ ಬಗ್ಗೆ ವಿವರಿಸಿ ಒಟ್ಟುಗೂಡಿಸುತ್ತಾಳೆ.
ಕಾಲ ಕಳೆದ ನಂತರ ಗಂಡಿನ ರೂಪ ದಲ್ಲಿ ಪಡೆದ ಮಕ್ಕಳು ಯಾರದೋ ಚಾಡಿ ಮಾತು ಕೇಳಿ, ತಾಪಸಿ ಮಕ್ಕಳ ಜೊತೆ ಜಗಳ ಆರಂಭಿಸಿ, ಅಧಿಕಾರದಿಂದ ದೂರ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ಜಗಳ ಯುದ್ಧದಲ್ಲಿ ಕೊನೆಗೊಂಡು ಎಲ್ಲರೂ ಮೃತಪಡುತ್ತಾರೆ. ಈ ಘಟನೆ ಯಿಂದ ಬೇಸತ್ತ ತಾಪಸಿ, ಭಗವಂತನ ಮೊರೆ ಹೋಗುತ್ತಾಳೆ. ಭಗವಂತ ಪ್ರತ್ಯೇಕ್ಷ ನಾಗಿ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಬೇಕಾದ ವರ ಕೇಳು ಎಂದು ಭಗವಂತ ಕೇಳಿದಾಗ, ಆಗ ತಾಪಸಿ, ನನಗೆ ಹೆಣ್ಣಿನ ರೂಪದಲ್ಲಿ ಪಡೆದ ಮಕ್ಕಳನ್ನು ಬದುಕಿಸು ಕೇಳಿ ಕೊಳ್ಳುತ್ತಾಳೆ. ಈಕೆಯ ಮಾತಿಗೆ ಭಗವಂತ ಅಸ್ತು ಎನ್ನುವ ಘಟನೆಯನ್ನು ತಿಳಿಸಿದರು.
ಈ ಕಥೆಯ ಸಾರ ಹೀಗಿದೆ. ಹಿಂದೂ ಧರ್ಮದಲ್ಲಿ ತಾಯಿ ಮಹತ್ವ ತುಂಬಾ ದೊಡ್ಡದು. ತಾಯಿಗೆ ಏನೇ ಕಷ್ಟ ಬರಲಿ ತನ್ನ ಮಕ್ಕಳು ಸುಖವಾಗಿರಲಿ ಎನ್ನುವ ಮನೋಭಾವವೇ ಹಿಂದೂ ಧರ್ಮದ ತಳಹದಿ. ಈ ಕಥೆಯಲ್ಲಿ ಆದದ್ದು ಅದೇ. ಇದರಂತೆ ಗೋವುಗಳ ರಕ್ಷಣೆಯ ಆಗಬೇಕಿದೆ ಎಂದರು.
ವಿಚ್ಚೇದನ ಕಥೆ: ಪಾಶ್ಚಿಮಾತ್ಯ ದೇಶದಲ್ಲಿ ಗಂಡು-ಹೆಣ್ಣು ಮದುವೆಯಾಗುತ್ತಾರೆ. ಕೆಲವು ದಿನ ಸುಖಕರ ಸಂಸಾರ ನಡೆಸು ತ್ತಾರೆ. ನಂತರ ಇಬ್ಬರಲ್ಲೂ ವಿರಸಗೊಂಡು ಇಬ್ಬರು ಬೇರೆಬೇರೆ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಾರೆ. ಮೊದಲನೇ ಮದುವೆ ಯಲ್ಲೂ ಮಕ್ಕಳಾಗುತ್ತವೆ. ಎರಡನೇ ಮದುವೆಯಲ್ಲೂ ಮಕ್ಕಳಾಗುತ್ತವೆ. ನಂತರ ಈ ಮಕ್ಕಳಲ್ಲಿ ಮದುವೆಯಾಗಿ, ಆ ಮಕ್ಕಳು ಇದನ್ನೇ ಅನುಸರಿಸುತ್ತಾರೆ. ಈ ನೀತಿ ಕೊನೆ ಮೊದಲಿಲ್ಲದ ನೀತಿಯಂತಾಗಿ ಲೋಕದಲ್ಲಿ ವಿಚ್ಛೇದನವೇ ಪ್ರಾಮುಖ್ಯತೆ ಪಡೆಯುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ ಈ ಅಸಹಜ ಕ್ರಿಯೆಗೆ ಹೆಣ್ಣು ಅವಕಾಶ ನೀಡಿಲ್ಲ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡ ಲಾಗಿದೆ. ಇದಕ್ಕೆ ಮಹಾಭಾರತದಲ್ಲೂ ಉಲ್ಲೇಖವಿದೆ ಎಂದರು. ಇದಕ್ಕೂ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಪ್ರವಚನ ನೀಡಿದರು.