ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ಆರೋಪ
ಚಾಮರಾಜನಗರ

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ಆರೋಪ

September 7, 2018

ಬೂದಂಬಳ್ಳಿ ಮೋಳೆ ಗ್ರಾಮಸ್ಥರ ಪ್ರತಿಭಟನೆ
ಸಂತೇಮರಹಳ್ಳಿ:  ಸಮೀಪದ ಬೂದಂಬಳ್ಳಿ ಮೋಳೆ ಗ್ರಾಮದಲ್ಲಿರುವ ಹಾಲು ಉತ್ಪಾಕರ ಮಹಿಳಾ ಸಹಕಾರ ಸಂಘ ದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು, ಗ್ರಾಮ ಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿರುವ ಅಧ್ಯಕ್ಷರು ಒಮ್ಮೆಯೂ ಸಂಘದ ಕಚೇರಿಗೆ ಬಂದಿಲ್ಲ. ಒಟ್ಟು 7 ಜನ ನಿರ್ದೇ ಶಕರಿದ್ದಾರೆ. ಇದರಲ್ಲಿ ಐವರು ಹಾಲು ಉತ್ಪಾದಕರೇ ಅಲ್ಲ. ಇವರ ಬಳಿ ಯಾವುದೇ ರಾಸುಗಳಿಲ್ಲ. ಸಂಘ ಅಸ್ತಿತ್ವಕ್ಕೆ ಬಂದು 11 ವರ್ಷ ಕಳೆದಿವೆ. ಇದುವರೆವಿಗೂ ಒಂದು ಸಾಮಾನ್ಯ ಮಹಾಸಭೆಯೂ ನಡೆದಿಲ್ಲ. ಚುನಾವಣೆಗಳು ನಡೆದಿದ್ದರೂ ಒಮ್ಮೆಯೂ ಚುನಾವಣಾ ನೋಟಿಸ್ ನೀಡಿಲ್ಲ. ಕಾರ್ಯ ದರ್ಶಿ ಮೀನಾರವರ ಪತಿ ರಾಜ್‍ಕುಮಾರ್ ಎಂಬುವರೇ ಇಲ್ಲಿನ ಆಡಳಿತ ನೋಡಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧ್ಯಕ್ಷೆ ಚಂದ್ರಮ್ಮ ಅವರಿಗೆ ದೂರು ಸಲ್ಲಿಸಿದ್ದರೂ ಕ್ರಮ ವಹಿ ಸಿಲ್ಲ ಎಂದು ಗ್ರಾಮಸ್ಥರ ದೂರಿದ್ದಾರೆ.

ಸಂಘ ಅಸ್ತಿತ್ವಕ್ಕೆ ಬಂದು 11 ವರ್ಷ ಗಳಾದರೂ ಈ ವರೆಗೆ ಯಾವ ಹೈನು ಗಾರರಿಗೂ ಬೋನಸ್ ನೀಡಿಲ್ಲ. ಪ್ರತಿನಿತ್ಯ ಇಲ್ಲಿ ನೂರಾರು ಲೀಟರ್ ಹಾಲು ಉತ್ಪಾ ದನೆಯಾಗುತ್ತಿದ್ದು, ಅಳತೆಯಲ್ಲೂ ಮೋಸ ಮಾಡಲಾಗುತ್ತಿದೆ. ಅಲ್ಲದೆ ಗುಣಮಟ್ಟದ ಹಾಲು ನೀಡುತ್ತಿಲ್ಲ ಎಂದು ಬೆಲೆಯನ್ನೂ ಕಡಿತಗೊಳಿಸಲಾಗುತ್ತಿದೆ. ಗ್ರಾಮದಲ್ಲಿ ಬಡ ಜನರೇ ಹೆಚ್ಚಾಗಿದ್ದಾರೆ. ಹೈನುಗಾರಿಕೆ ಯನ್ನು ನೆಚ್ಚಿಕೊಂಡೇ ಜೀವನ ಸಾಗಿಸುತ್ತಿ ದ್ದಾರೆ. ಗ್ರಾಮದ 150ಕ್ಕೂ ಹೆಚ್ಚು ಹೈನು ಗಾರರು ಇಲ್ಲಿಗೆ ಹಾಲನ್ನು ಪೂರೈಕೆ ಮಾಡು ತ್ತಾರೆ.

ಇವರಿಗೆ ಇಲಾಖೆಯ ವತಿಯಿಂದ ಬರುವ ಯಾವ ಸೌಲಭ್ಯವೂ ಲಭಿಸುತ್ತಿಲ್ಲ ಎಂದು ಗ್ರಾಮದ ಮಹಾದೇವಶೆಟ್ಟಿ, ಪುಟ್ಟ ಸಿದ್ದಮ್ಮ, ಮಹಾದೇವಮ್ಮ, ರತ್ನಮ್ಮ ಆರೋಪಿಸಿದರು. ಈ ಬಗ್ಗೆ ಸಹಕಾರ ಸಂಘ ಗಳ ಸಹಾಯಕ ನಿಬಂಧಕರಿಗೆ ಒಂದು ತಿಂಗಳ ಹಿಂದೆ ದೂರು ಸಲ್ಲಿಸಿದ್ದರೂ ಇದುವರೆವಿಗೂ ಯಾವುದೇ ಕ್ರಮ ವಹಿ ಸಿಲ್ಲ. ಇವರೂ ಕೂಡ ಇಂತಹ ಅಕ್ರಮ ದಲ್ಲಿ ಶಾಮೀಲಾಗಿರುವ ಬಗ್ಗೆ ಗುಮಾನಿ ಇದೆ ಎಂದು ಗ್ರಾಮಸ್ಥರು ಆರೋಪಿಸಿ ದರು. ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಿಬಂಧಕ ರಮೇಶ್ ಅವರಿಗೆ ಘೇರಾವ್ ಹಾಕಿ ಧಿಕ್ಕಾರಗಳನ್ನು ಕೂಗಿದರು.

ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕು. ತಕ್ಷಣ ಇರುವ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಯನ್ನು ಬದಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತ ಸಂಘದ ಕಾರ್ಯಕರ್ತರು ಎಚ್ಚರಿಸಿದರು.

Translate »