ಸಚಿವ ಸಿ.ಎಸ್. ಪುಟ್ಟರಾಜು ಇಂದು ಪಾಂಡವಪುರಕ್ಕೆ
ಮಂಡ್ಯ

ಸಚಿವ ಸಿ.ಎಸ್. ಪುಟ್ಟರಾಜು ಇಂದು ಪಾಂಡವಪುರಕ್ಕೆ

June 25, 2018

ಪಾಂಡವಪುರ: ಜೂ.25 ರಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಕ್ಷೇತ್ರಕ್ಕೆ ಆಗಮಿಸು ತ್ತಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿ ಸಲಾಗುವುದು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಧರ್ಮರಾಜು ತಿಳಿಸಿದರು.

ಪಟ್ಟಣದ ಸಿ.ಎಸ್.ಪುಟ್ಟರಾಜು ನಿವಾಸ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿ.ಎಸ್. ಪುಟ್ಟರಾಜು ಅವರನ್ನು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ಗಡಿಭಾಗ ಪಿಎಸ್‍ಎಸ್‍ಕೆ ಕಾರ್ಖಾನೆ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ನಂತರ ತಾಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ ರ್ಯಾಲಿಯ ಮೂಲಕ ಅವರನ್ನು ಪಾಂಡವ ಪುರಕ್ಕೆ ಕರೆತರಲಾಗುವುದು ಎಂದರು.

ಪಟ್ಟಣದ ಕೃಷ್ಣಾನಗರದ ತಮ್ಮ ನಿವಾಸಕ್ಕೆ ಆಗಮಿಸುವ ಸಿ.ಎಸ್.ಪುಟ್ಟರಾಜು ಅವರು, ಕಾರ್ಯಕರ್ತರ ಸಭೆ ನಡೆಸುವರು. ಬಳಿಕ ಪಟ್ಟಣದ ಪಿಇಎಸ್ ಪದವಿ ಪೂರ್ವ ಕಾಲೇಜಿ ನಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವ ಅವರು, ನಂತರ ಪಟ್ಟಣದ ತಾಪಂನಲ್ಲಿ ಕೆಡಿಪಿ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ. ಸಂಜೆ ಸ್ವಗ್ರಾಮ ತಾಲೂಕಿನ ಚಿನಕುರಳಿ ಗ್ರಾಮಕ್ಕೆ ತೆರಳಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ನಿವಾಸದಲ್ಲಿ ವಾಸ್ತವ್ಯವಿರ ಲಿದ್ದಾರೆ ಎಂದರು.

ಜೂ.26ರಂದು ಬೆಳಿಗ್ಗೆ 9.30ಕ್ಕೆ ಪುಟ್ಟ ರಾಜು ಅವರು ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಂಡ್ಯದ ದುದ್ದ ಹೋಬಳಿಯ ಸಂಬಂಧಿಸಿದಂತೆ ವಿಸಿ ಫಾರಂನಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ ಅವರು, ತಾಲೂಕಿನ ಜೆಡಿಎಸ್ ಕಾರ್ಯ ಕರ್ತರು, ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ, ಕ್ಯಾತನಹಳ್ಳಿ ಚೇತನ್, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಎಲ್.ನಂಜೇಗೌಡ, ಭಾಸ್ಕರ್, ನಾಗರಾಜು ಇದ್ದಾರೆ.

Translate »