ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2020-21ನೇ ಸಾಲಿನ ಮುಂಗಡ ಪತ್ರವನ್ನು ಸಂಸತ್ತಿನಲ್ಲಿ ಶನಿವಾರ ಬೆಳಿಗ್ಗೆ ಮಂಡಿಸಿ ದರು. ಬೆಳಿಗ್ಗೆ 11.01ಕ್ಕೆ ಆರಂಭಗೊಂಡ ಬಜೆಟ್ ಭಾಷಣ, ಮಧ್ಯಾಹ್ನ 1.41 ಗಂಟೆಗೆ ಮುಕ್ತಾಯಗೊಂಡಿತು. 2.40 ನಿಮಿಷಗಳ ಕಾಲ, ಮಧ್ಯೆ ಎಲ್ಲೂ ವಿರಾಮ ತೆಗೆದು ಕೊಳ್ಳದೇ ಮುಂಗಡಪತ್ರ ಓದಿದ ನಿರ್ಮಲಾ ಸೀತಾ ರಾಮನ್, ಆಡಳಿತ ಪಕ್ಷದ ಸದಸ್ಯರಿಂದ ಸೈ ಎನಿಸಿಕೊಂಡರು.
ಮಹತ್ವದ ಯೋಜನೆಗಳನ್ನು ಪ್ರಕಟಿಸಿದಾಗ, ಸಾಧ ನೆಯ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ಸದಸ್ಯರೆ ಲ್ಲರೂ ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಪ್ರತಿಪಕ್ಷಗಳು ಸಣ್ಣದಾಗಿ ಗದ್ದಲ ಎಬ್ಬಿಸಿ ವಿರೋಧ ವ್ಯಕ್ತಪಡಿಸಿದವು. ಸುದೀರ್ಘ ಬಜೆಟ್ ಮಂಡನೆ ಮಾಡಿದರೂ ಇನ್ನೂ 2 ಪುಟ ಓದುವುದಿತ್ತು. ಆದರೆ ಸಚಿವೆ ತುಸು ಬಳಲಿದಂತೆ ಕಂಡುಬಂದರು. ಹಾಗಾಗಿ ಅಷ್ಟಕ್ಕೇ ಬಜೆಟ್ ಮಂಡನೆ ಮುಗಿಸಿದರು. ನಿರ್ಮಲಾ ಅವರು ಕಳೆದ ಬಾರಿ 137 ನಿಮಿಷದಲ್ಲಿ ಬಜೆಟ್ ಪ್ರತಿ ಓದಿದ್ದರು. ಈ ಬಾರಿ ಅವರದ್ದೇ ದಾಖಲೆ ಮುರಿದು 160 ನಿಮಿಷ ಬಜೆಟ್ ಓದಿದರು. ಬಜೆಟ್ ಮಂಡನೆ ದೀರ್ಘವಾಗಿದ್ದರಿಂದಲೇನೋ ನಿರ್ಮಲಾ ಸೀತಾರಾಮನ್ ಅವರು ತುಸು ಬಳಲಿದಂತೆ ಕಂಡು ಬಂದರು. ಆಗ ಅವರಿಗೆ ಕುಡಿಯಲು ನೀರು ನೀಡ ಲಾಯಿತು. ಮಧುಮೇಹದ ಪರಿಣಾಮವೇನೊ ಎಂದುಕೊಂಡು ಸಚಿವ ನಿತಿನ್ ಗಡ್ಕರಿ ಚಾಕೊಲೇಟ್ ಕೊಟ್ಟರು. ಆ ಬಳಿಕವೂ ಸ್ವಲ್ಪ ಹೊತ್ತು ಬಜೆಟ್ ಭಾಷಣ ಮುಂದುವರಿಸಿದರು.
ಈ ಮಧ್ಯೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಷಾ ಅವರು ನಿರ್ಮಲಾ ಸೀತಾ ರಾಮನ್ ಕುಶಲ ವಿಚಾರಿಸಿದರು. ಬಜೆಟ್ ಓದು ಮುಂದುವರಿಸಲು ಆಗುತ್ತಿಲ್ಲ ಎಂದು ಸಚಿವೆ ಸ್ಪೀಕರ್ಗೆ ಮನವಿ ಮಾಡಿ ಬಜೆಟ್ ಭಾಷಣ ಮುಕ್ತಾಯ ಗೊಳಿಸಿದರು. ಬಳಿಕ ಸದನದ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಅವರು ಮುಂದೂಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎದ್ದು ನಿರ್ಮಲಾ ಸೀತಾರಾಮನ್ ಅವರ ಆಸನದ ಬಳಿ ಬಂದು ಕುಶಲ ವಿಚಾರಿಸಿ ಶುಭ ಕೋರಿದರು. ಸಚಿವರಾದ ಪಿಯೂಷ್ ಗೋಯೆಲ್, ಸ್ಮೃತಿ ಇರಾನಿ ಸೇರಿದಂತೆ ಹಲವು ಸಚಿ ವರು, ಕಾಂಗ್ರೆಸ್ ಸಂಸದರು ಬಳಿ ಬಂದು ನಿರ್ಮಲಾ ಸೀತಾರಾಮನ್ ಅವರ ಆರೋಗ್ಯ ವಿಚಾರಿಸಿದರು.
ಇನ್ನು 2003ರಲ್ಲಿ ಎನ್ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು 2 ಗಂಟೆ 15 ನಿಮಿಷ ಬಜೆಟ್ ಓದಿದ್ದರು. ಭಾರತದ ಇತಿಹಾಸದಲ್ಲಿ ಕೆಲವೇ ನಿಮಿಷಗಳಲ್ಲೇ ಬಜೆಟ್ ಭಾಷಣ ಮುಗಿಸಿದ್ದ ಕೀರ್ತಿ ಎಚ್.ಎಂ.ಪಾಟೀಲ್ ಅವರಿಗೆ ಸಲ್ಲುತ್ತದೆ. 1977ರಲ್ಲಿ ಪಾಟೀಲ್ ಅವರು 800 ಪದಗಳಲ್ಲೇ ತಮ್ಮ ಭಾಷಣ ಮುಗಿಸಿದ್ದರು.
ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ 2024ರ ವೇಳೆಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ವಿಸ್ತರಣೆ
ಬೆಂಗಳೂರು,ಫೆ.1- ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು 2024ರ ವೇಳೆಗೆ ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಷ್ಟ್ರದಲ್ಲಿ ಈಗ 6 ಸಾವಿರ ಜನೌಷಧಿ ಕೇಂದ್ರ ಗಳು ಇವೆ. 2024ರ ವೇಳೆಗೆ ಈ ಕೇಂದ್ರಗಳನ್ನು ರಾಷ್ಟ್ರದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕೇಂದ್ರಗಳಲ್ಲಿ ವಿವಿಧ ಬಗೆಯ 2 ಸಾವಿರ ಔಷಧಿಗಳು ಲಭ್ಯ ಇದೆ. ಕೇಂದ್ರಗಳಲ್ಲಿ ಗುಣಮಟ್ಟದ ಔಷಧಿಗಳು ಕೈಗೆಟಕುವ ದರದಲ್ಲಿ ದೊರೆಯುತ್ತವೆ. ಹೀಗಾಗಿ ಈ ಕೇಂದ್ರಗಳು ಬಡವರಿಗೆ ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು.
ಎಸ್ಸಿ-ಒಬಿಸಿ ಅಭಿವೃದ್ಧಿಗೆ 85 ಸಾವಿರ ಕೋಟಿ, ಎಸ್ಟಿ ಕಲ್ಯಾಣಕ್ಕೆ 53,700 ಕೋಟಿ
ನವದೆಹಲಿ,ಫೆ.1- 2020ರಲ್ಲಿ ಪರಿಶಿಷ್ಟ ಜಾತಿ ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 85 ಸಾವಿರ ಕೋಟಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ 53 ಸಾವಿರದ 700 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ವರ್ಗದವರ ಅಭಿವೃದ್ಧಿಗೆ 2020-21ಕ್ಕೆ 85 ಸಾವಿರ ಕೋಟಿ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 53 ಸಾವಿರದ 700 ಕೋಟಿ ಮೀಸಲಿಡಲಾಗಿದೆ ಎಂದರು. ಆಕಾಂಕ್ಷೆಯ ಭಾರತ ಅಂದರೆ ಗುಣಮಟ್ಟದ ಬದುಕಿಗೆ ಆದ್ಯತೆ, ಪ್ರತಿ ಯೊಂದು ವರ್ಗಗಳ ಆರ್ಥಿಕ ಅಭಿವೃದ್ದಿ, ಸಮಾಜದ ಮಾನವೀಯತೆ ಮತ್ತು ಸಹಾನುಭೂತಿಯ ಏಳಿಗೆಗೆ ಒತ್ತು ಕೊಡುವುದು ಕೇಂದ್ರ ಸರ್ಕಾರದ ಆದ್ಯತೆಯಾ ಗಿದ್ದು, 2ನೇ ಅಂಶ ಆರ್ಥಿಕ ಬೆಳವಣಿಗೆ ಮತ್ತು 3ನೇ ಅಂಶ ಸಾಮಾಜಿಕ ಕಾಳಜಿ, ಕಳಕಳಿಯ ಆಧಾರದ ಮೇಲೆ ಈ ಬಾರಿಯ ಬಜೆಟ್ ಸಿದ್ಧಪಡಿಸಲಾಗಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಲಕ್ಷ ಗ್ರಾಮ ಪಂಚಾಯಿತಿಗಳಿಗೆ `ಭಾರತ್ ನೆಟ್’
ನವದೆಹಲಿ, ಫೆ.1-ಬಜೆಟ್ನಲ್ಲಿ 1 ಲಕ್ಷ ಗ್ರಾಮ ಪಂಚಾ ಯಿತಿಗಳಿಗೆ ಇಂಟರ್ನೆಟ್ ಸೇವೆ ಕಲ್ಪಿಸುವ `ಭಾರತ್ ನೆಟ್’ ಯೋಜನೆ ಘೋಷಣೆ ಮಾಡಲಾಗಿದೆ.
ಹೊಸ ಆರ್ಥಿಕ ವ್ಯವಸ್ಥೆ ಬರುತ್ತಿರುವುದರಿಂದ ಸಾಂಪ್ರ ದಾಯಿಕ ವ್ಯವಸ್ಥೆ ಅಲುಗಾಡುತ್ತಿದೆ. ದತ್ತಾಂಶ ವಿಶ್ಲೇಷಣೆ ಮತ್ತು ಇಂಟರ್ನೆಟ್ ಬಳಕೆ ನಮ್ಮ ಬದುಕುಗಳನ್ನು ಬದಲಿಸುತ್ತಿದೆ. ಖಾಸಗಿ ಕ್ಷೇತ್ರಗಳು ದೇಶದಾದ್ಯಂತ ಡೇಟಾ ಸೆಂಟರ್ ಪಾರ್ಕ್ ರೂಪಿಸಲು ನೀತಿಯೊಂ ದನ್ನು ರೂಪಿಸುತ್ತೇವೆ ಎಂದು ಹೇಳಿದರು.
ಅಂತೆಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಚೆ ಕಚೇರಿಯಿಂದ ಪೆÇಲೀಸ್ ವ್ಯವಸ್ಥೆಯವರೆಗೆ ಎಲ್ಲ ಸೇವೆ ಗಳು ಡಿಜಿಟಲೀಕರಣಗೊಳ್ಳಲಿದೆ. ದೇಶದ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭಾರತ್ ನೆಟ್ ಕಾರ್ಯ ಕ್ರಮದ ಮೂಲಕ ಒಎಫ್ಸಿ ಸಂಪರ್ಕ ಒದಗಿಸಲಾ ಗುವುದು. ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗಾಗಿ 8,000 ಕೋಟಿ ರೂ ಮೀಸಲಿಡುವುದಾಗಿ ಮತ್ತು ಅಂಗನ ವಾಡಿಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.
ಹೆಚ್ಚು ಮಾಲಿನ್ಯ ಉಂಟುಮಾಡುವ ಪವರ್ ಪ್ಲಾಂಟ್ಗಳಿಗೆ ಬೀಗ
ನವದೆಹಲಿ, ಫೆ.1- ನಿಗದಿತ ಮಾನದಂಡಗಳ ಪ್ರಕಾರ ನಿಶ್ಚಿತ ಮಿತಿಗಿಂತ ಹೆಚ್ಚು ಮಾಲಿನ್ಯ ಉಂಟು ಮಾಡುವ ಪವರ್ಪ್ಲಾಂಟ್ಗಳನ್ನು ಮುಚ್ಚಲು ಆದೇಶಿ ಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. ಈ ವಿಚಾರವನ್ನು ಈ ಸಲದ ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ತಡೆಯಲು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಭಾರತ ಬದ್ಧವಾಗಿದೆ. ಇದರಂತೆ, ಪ್ಯಾರಿಸ್ ಒಪ್ಪಂದದ ಅಂಶಗಳನ್ನು ಅನುಸರಿಸಲು ಸಜ್ಜಾಗಿದೆ. 2021ರ ಜನ ವರಿ 1ರಿಂದ ಈ ಒಪ್ಪಂದದ ಅಂಶ ಜಾರಿಗೆ ಬರಲಿದೆ ಎಂದಿದ್ದಾರೆ. ವಾಯುಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರ ಈ ಹಣಕಾಸು ವರ್ಷದಲ್ಲಿ 4,400 ಕೋಟಿ ರೂಪಾಯಿ ಹಂಚಿಕೆ ಮಾಡಲಿದೆ. ಇದಲ್ಲದೆ, ಪರ್ಯಾಯ ವಿದ್ಯುತ್ ಯೋಜನೆ ಪ್ರಕಾರ, ದೇಶದ 20 ಲಕ್ಷ ರೈತರಿಗೆ ಪಿಎಂ ಕುಸುಮ್ ಸ್ಕೀಮ್ ಮೂಲಕ ಸೋಲಾರ್ ಪಂಪ್ ಸ್ಥಾಪಿಸಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಬಜೆಟ್ ಭಾಷಣದಲ್ಲಿ ಕವಿ ಕಾಳಿದಾಸ, ಸಿಂಧು ನಾಗರಿಕತೆ ಉಲ್ಲೇಖ
ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಬರೋಬ್ಬರಿ ಎರಡೂವರೆ ತಾಸುಗಳ ಸುದೀರ್ಘ ಬಜೆಟ್ ಭಾಷಣ ಮಾಡಿ ದಾಖಲೆ ನಿರ್ಮಿಸಿದರು. ಕಾಶ್ಮೀರಿ ಪದ್ಯಗಳು, ತಮಿಳು ಕವಿಗಳ ಕೋಟ್ಗಳು, ಸರಸ್ವತಿ-ಸಿಂಧು ನಾಗರಿಕತೆಗಳನ್ನು ಬಜೆಟ್ ಮಂಡನೆಯ ಭಾಷಣದಲ್ಲಿ ಉಲ್ಲೇಖ ಮಾಡಿದ್ದು ವಿಶೇಷವಾಗಿತ್ತು. ಅಷ್ಟು ಸುದೀರ್ಘವಾಗಿ ಬಜೆಟ್ ಮಂಡನೆ ಮಾಡಿದರೂ ಇನ್ನೂ 2 ಪೇಜ್ಗಳಷ್ಟನ್ನು ಓದುವುದು ಬಾಕಿ ಇತ್ತು. ಆದರೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಅಸ್ವಸ್ಥರಾದಂತೆ ಕಂಡುಬಂದರು. ಹಾಗಾಗಿ ಮಧ್ಯ ದಲ್ಲಿಯೇ ಮುಗಿಸಿದರು. ನಿರ್ಮಲಾ ಸೀತಾರಾಮನ್ ಕಾಶ್ಮೀರಿ, ಹಿಂದಿ ಪದ್ಯಗಳೊಂದಿಗೆ ತಿರುವಳ್ಳುವರ್ ಮತ್ತು ಕವಿ ಕಾಳಿದಾಸನ ಕವಿತೆಗಳನ್ನೂ ಹೇಳಿದರು.
ಜನರ ಕೈನಲ್ಲಿ ಹಣವಿಡಲು ಸರ್ಕಾರ ಬಯಸುತ್ತಿದೆ
ನವದೆಹಲಿ,ಫೆ.1- ಜನರ ಕೈನಲ್ಲಿ ಹಣವನ್ನಿಡಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಮಂಡನೆ ಬಳಿಕ ಮಾತನಾಡಿದ ಅವರು ಜನರ ಜೇಬಿಗೆ ಹೆಚ್ಚಿನ ಹಣ ಹಾಕಲು ನಾವು ಬಯಸುತ್ತೇವೆ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳ ವರ್ಗದವರ ಕೈನಲ್ಲಿ ಹಣ ಉಳಿಯಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.
ತೆರಿಗೆ ಪಾವತಿ ವಿಧಾನಗಳನ್ನು ಸರಳಗೊಳಿಸಿದ್ದೇವೆ. ಜನರು ಹಳೆಯ ಅಥವಾ ಹೊಸ ಮಾದರಿಯಲ್ಲೂ ಆಯ್ಕೆ ಮಾಡಿಕೊಂಡು ತೆರಿಗೆಯನ್ನು ಪಾವತಿ ಮಾಡಬಹುದು ಎಂದರು. ಬಜೆಟ್ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೆಚ್ಚುವರಿ ಬಂಡವಾಳ ವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ಯುವ ಜನರಿಗೆ ಉದ್ಯೋಗ ನೀಡುವ ಯೋಜನೆಗಳ ಕುರಿತಾಗಿಯೂ ಗಮನಹರಿಸಿದ್ದೇವೆ ಎಂದಿದ್ದಾರೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದವರು ಪಾನ್ ಕಾರ್ಡ್ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಆಧಾರ್ ಕಾರ್ಡ್ ಮೂಲಕ ಪಾನ್ ಕಾರ್ಡ್ ಪಡೆಯುವ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಇಂದ್ರಧನುಷ್ ಯೋಜನೆ ವಿಸ್ತರಣೆ
ನವದೆಹಲಿ, ಫೆ.1- ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಆರೋಗ್ಯ ವಲಯಕ್ಕೆ ಸಂಬಂಧಿಸಿದ ಯೋಜನೆಗಳ ವಿವರ ನೀಡಿ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜ ನೆಯ ಮೂಲಕ ತಾಲೂಕು ಮತ್ತು ಹೋಬಳಿ ಹಂತದ ಆಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ವಾಯುಮಾಲಿನ್ಯ ಕಡಿತಕ್ಕೆ 4,400 ಕೋಟಿ ರೂ ಮೀಸಲು: ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತೇವೆ. ಮಾಲಿನ್ಯಕಾರಿ ಹಳೆಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ ಗಳನ್ನು ಮುಚ್ಚಲು ಸೂಚಿಸುತ್ತೇವೆ. 10 ಲಕ್ಷಕ್ಕೂ ಹೆಚ್ಚು ಜನರಿರುವ ನಗರಗಳಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಪ್ರಸ್ತಾವ ಕೊಟ್ಟರೆ ಅನುದಾನ ಕೊಡುತ್ತೇವೆ. ಇದಕ್ಕಾಗಿ 4,400 ಕೋಟಿ ರೂ ಮೀಸಲಿಡುವುದಾಗಿ ಹೇಳಿದರು.
ಜಲಜೀವನ ಯೋಜನೆಗೆ 3.60 ಲಕ್ಷ ಕೋಟಿ ರೂ: ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಘೋಷಣೆ. ಇದಕ್ಕಾಗಿ 3.60 ಲಕ್ಷ ಕೋಟಿ ರೂ ಘೋಷಣೆ. ಸ್ಥಳೀಯ ಕುಡಿಯುವ ನೀರು ಶುದ್ಧೀಕರಣ ಬಳಕೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಿಗೆ ಈ ಯೋಜನೆಯನ್ನು ಇದೇ ವರ್ಷ ಅನುಷ್ಠಾನಕ್ಕೆ ತರಲು ಸೂಚಿಸುತ್ತೇವೆ ಎಂದು ನಿರ್ಮಲಾ ಹೇಳಿದರು.
2025ರ ವೇಳೆಗೆ ಭಾರತ ಕ್ಷಯರೋಗ ಮುಕ್ತ: ವಿಶೇಷ ಅಭಿಯಾನ
ನವದೆಹಲಿ, ಫೆ.1- 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತವಾಗಿಸುವ ಅಭಿಯಾನವನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಜನರಿಗೆ ಸುಲಭ ಬೆಲೆಯಲ್ಲಿ ಔಷಧಿ ದೊರಕುವಂತಾಗಲು ಜನೌಷಧಿ ಕೇಂದ್ರಗಳನ್ನು ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ವೈದ್ಯಕೀಯ ಸಾಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯವನ್ನು ಆಸ್ಪತ್ರೆಗಳ ಸ್ಥಾಪನೆಗೆ ಬಳಸಲಾಗುತ್ತದೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಮತ್ತು ಕೃಷಿ ಉತ್ಪನ್ನ ಗಳಿಗೆ ಗೋದಾಮುಗಳನ್ನು ಸ್ಥಾಪಿಸಲು ಒತ್ತು ನೀಡಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಗಾಗಿ ಸರ್ಕಾರ 1.23 ಲಕ್ಷ ಕೋಟಿ ರೂ., ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ 1.6 ಲಕ್ಷ ಕೋಟಿ ರೂ.ಒದಗಿಸುವುದಾಗಿ ಸಚಿವೆ ಮಾಹಿತಿ ನೀಡಿದ್ದಾರೆ. ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯ ವ್ಯಾಪ್ತಿಯನ್ನು ಶೇ.30ರಿಂದ 70ಕ್ಕೆ ವಿಸ್ತರಿಸಲು ಸರ್ಕಾರ ಯೋಜಿಸಿದೆ, 2022ರ ವೇಳೆಗೆ ಮೀನು ಉತ್ಪಾದನೆಯನ್ನು 200 ಲಕ್ಷ ಟನ್ಗೆ ಹೆಚ್ಚಿಸಲಾಗುವುದು ಎಂದರು.
ಜಲ ಜೀವನ್ ಮಿಷನ್ಗೆ 11,500 ಕೋಟಿ
ಬೆಂಗಳೂರು, ಫೆ.1- ಬಜೆಟ್ನಲ್ಲಿ ಜಲ ಜೀವನ್ ಮಿಷನ್ಗೆ 2020-21ರ ಸಾಲಿಗೆ 11,500 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆ ಯಲ್ಲಿ ನಡೆದ ಜಲ ಜೀವನ್ ಮಿಷನ್ ಕಾರ್ಯಕ್ರಮದಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಘೋಷಣೆ ಮಾಡಿದ್ದರು. ಘೋಷಣೆಯನ್ನು ಅಧಿಕೃತ ವಾಗಿ ಜಾರಿಗೆ ತರಲು 2020-21ರ ಸಾಲಿನಲ್ಲಿ ಯೋಜನೆಗೆ 11,500 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಈ ಯೋಜನೆಗೆ 3.60 ಲಕ್ಷ ಕೋಟಿ ರೂಪಾ ಯಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಯೋಜನೆ ಸ್ಥಳೀಯವಾಗಿ ನೀರಿನ ಮೂಲಗಳನ್ನು ಹೆಚ್ಚಿಸಲು ಹಾಗೂ ಜಲ ಮರುಪೂರಣ ಮಾಡಲು ಒತ್ತು ನೀಡುತ್ತದೆ. ಈ ವರ್ಷ 1 ದಶ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರ ಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಕೇಂದ್ರ ಮಾಹಿತಿ ಆಯೋಗ, ಮಾಹಿತಿ ಹಕ್ಕು ಕಾಯ್ದೆಗೆ 9.90 ಕೋಟಿ ರೂ. ಮೀಸಲು
ಬೆಂಗಳೂರು, ಫೆ.1- ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಗೆ ಬಜೆಟ್ನಲ್ಲಿ ಸರ್ಕಾರ 9.90 ಕೋಟಿ ರೂಪಾಯಿ ಮೀಸಲಿಟ್ಟಿದೆ. 2019-20ರ ಬಜೆಟ್ನಲ್ಲಿ ಸಿಐಸಿ ಹಾಗೂ ಆರ್ಟಿಐಗೆ 5.5 ಕೋಟಿ ರೂ. ಮೀಸಲಿ ಡಲಾಗಿತ್ತು. ಈ ಬಾರಿ 9.90 ಕೋಟಿ ರೂ ಮೀಸಲಿಡಲಾಗಿದೆ ಎಂದು ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಕಳೆದ ಬಜೆಟ್ಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.80ರಷ್ಟು ಹಣ ಅಧಿಕವಾಗಿ ಮೀಸಲಿಡಲಾಗಿದೆ. ಕೇಂದ್ರ ಮಾಹಿತಿ ಆಯೋಗದ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಆರ್ಟಿಐ ಕಾಯ್ದೆಯ ಪ್ರಚಾರಕ್ಕೆ ಈ ಹಣ ಬಳಕೆ ಮಾಡಲಾಗು ವುದು ಎಂದರು. ಸಾರ್ವಜನಿಕ ಉದ್ಯಮ ಗಳ ಆಯ್ಕೆ ಮಂಡಳಿ (ಪಿಇಎಸ್ಬಿ) ಮತ್ತು ಕೇಂದ್ರ ಮಾಹಿತಿ ಆಯೋಗದ ಸ್ಥಾಪನೆಯ ವೆಚ್ಚಕ್ಕೆ ಕೂಡ ಹಣ ನೀಡಲಾಗಿದೆ ಎಂದರು.
5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಗೆ ಸ್ವಚ್ಛ, ಸಮೃದ್ಧ ಆರ್ಥಿಕ ವ್ಯವಸ್ಥೆ ಅವಶ್ಯ
ನವದೆಹಲಿ, ಫೆ.1- ನಮ್ಮ ದೇಶದ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್ನ ಆರ್ಥಿ ಕತೆ ಆಗಬೇಕಾದರೆ ಸ್ವಚ್ಛ, ಸಮೃದ್ಧ ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿ ದ್ದಾರೆ. ಎಲ್ಲಾ ವಾಣಿಜ್ಯ ಬ್ಯಾಂಕುಗಳ ಆರೋ ಗ್ಯದ ಮೇಲೆ ನಿಗಾ ವಹಿಸಲು ಪರಿಣಾಮ ಕಾರಿ ವ್ಯವಸ್ಥೆ ಚಾಲ್ತಿಗೆ ಬಂದಿದೆ. ಇದು ಬ್ಯಾಂಕುಗಳ ಆರೋಗ್ಯ ಅಷ್ಟೇ ಅಲ್ಲ, ಠೇವಣಿ ದಾರರ ಹಣವನ್ನೂ ಜೋಪಾನ ಮಾಡು ತ್ತದೆ ಎಂದರು. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳಿಗೆ 3.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಸೇರಿಸಲಾಗಿದೆ. ಬ್ಯಾಂಕುಗಳಲ್ಲಿ ಖಾಸಗಿ ಬಂಡವಾಳ ಹೆಚ್ಚಿರಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಪೆನ್ಶನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾ ರಿಟಿ (ಪಿಎಫ್ಆರ್ಡಿಎ)ಯಿಂದ ಸರ್ಕಾರಿ ಪೆನ್ಶನ್ ಟ್ರಸ್ಟ್ ಅನ್ನು ಪ್ರತ್ಯೇಕಿಸುವ ವಿಚಾರ ವನ್ನೂ ಪ್ರಕಟಿಸಿದರು. ಇದೇ ರೀತಿ, ಐಡಿ ಬಿಐ ಬ್ಯಾಂಕ್ನ ಷೇರುಗಳನ್ನು ಖಾಸಗಿ ಯವರಿಗೆ ಹಸ್ತಾಂತರಿಸುವುದನ್ನೂ ಹೇಳಿದರು.