ಸಚಿವ ರಹೀಂ ಖಾನ್, ಶಾಸಕ ರೋಷನ್ ಬೇಗ್ ರಾಜೀನಾಮೆಗೆ ಘೋಷಣೆ
ಮೈಸೂರು

ಸಚಿವ ರಹೀಂ ಖಾನ್, ಶಾಸಕ ರೋಷನ್ ಬೇಗ್ ರಾಜೀನಾಮೆಗೆ ಘೋಷಣೆ

July 8, 2019

ಬೆಂಗಳೂರು: ಶಾಸಕಾಂಗ ನಾಯಕ ಸಿದ್ದ ರಾಮಯ್ಯ ಅವರ ನಡವಳಿಕೆಯಿಂದ ಬೇಸರ ಗೊಂಡಿ ರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಮತ್ತು ತಮ್ಮ ಇಲಾಖೆಗೆ ಅನುದಾನ ಕಡಿಮೆ ನೀಡಲಾಗಿದೆ ಎಂದು ಅಸಮಾ ಧಾನಗೊಂಡಿರುವ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ತಮ್ಮ ಇಲಾಖೆಗೆ ಕೇವಲ 5 ಕೋಟಿ ಅನುದಾನ ನೀಡಲಾಗಿದೆ. ಈ ಅನು ದಾನದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸಚಿವ ರಹೀಂ ಖಾನ್, ತಾವೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಖುದ್ದು ಸ್ಪಷ್ಟಪಡಿಸಿರುವ ರೋಷನ್ ಬೇಗ್, ಸೋಮವಾರ ಅಥವಾ ಮಂಗಳವಾರ ರಾಜೀ ನಾಮೆ ಕೊಡುವುದಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ತಮ್ಮ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರಾಗಿದ್ದು, ಅವರ ನಡವಳಿಕೆ ಪಕ್ಷದಲ್ಲಿ ಬಹಳಷ್ಟು ಮಂದಿಗೆ ಬೇಸರ ತಂದಿದೆ. ತಮ್ಮ ಕ್ಷೇತ್ರದ ಜನತೆ ಲೋಕಸಭಾ ಚುನಾ ವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದರೂ ನಮ್ಮನ್ನು ದೂಷಿಸಲಾಗಿದೆ. ಪಕ್ಷದಿಂದ ತಮ್ಮನ್ನು ಅಮಾನತು ಮಾಡಿದ್ದಾರೆ. ಆದರೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಅವರು ಏಕೆ ಕ್ರಮಕೈಗೊಳ್ಳ ಲಿಲ್ಲ ಎಂದು ಪ್ರಶ್ನಿಸಿದರು.

ನಾನು ರಾಜ್ಯ ಹಜ್ ಕಮಿಟಿ ಅಧ್ಯಕ್ಷ. ಹಾಗಾಗಿ ಹಜ್ ಯಾತ್ರೆಗೆ ತೆರಳುವವರನ್ನು ಸುರಕ್ಷಿತವಾಗಿ ಕಳುಹಿಸುವುದು ನನ್ನ ಮೊದಲ ಜವಾ ಬ್ದಾರಿ. ಇಂದು ರಾತ್ರಿ ಎಲ್ಲಾ ಹಜ್ ಯಾತ್ರಿಗಳು ಹಜ್ ಯಾತ್ರೆಗೆ ತೆರಳಲಿದ್ದಾರೆ. ಇನ್ನೈದು ದಿನಗಳಲ್ಲಿ ನನ್ನ ಕೆಲಸ ಮುಗಿಯಲಿದೆ. ಆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ನಾನು ರಾಜೀನಾಮೆ ನೀಡಿದರೆ ಯಾವ ತಪ್ಪಿಲ್ಲ. ಸಮನ್ವಯತೆ ಚೆನ್ನಾಗಿದ್ದಿದ್ದರೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಇದಾಗಲೇ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದು ಒಂದು ವೇಳೆ ಅವರು ರಾಜೀನಾಮೆ ಸಲ್ಲಿಸಿದ್ದ ಪಕ್ಷದಲ್ಲಿ ಅದು ಅನುಮೋದನೆಯಾಗುತ್ತದೆಯೆ ಎನ್ನುವುದನ್ನು ಕಾದು ನೋಡಬೇಕಿದೆ.

Translate »