ನೀವು ಆರಿಸಿದವರನ್ನೇ ನಾಯಕರನ್ನಾಗಿಸುವೆ ದಲಿತ ಮುಖಂಡರಿಗೆ ಶಾಸಕ ಹೆಚ್.ವಿಶ್ವನಾಥ್ ಭರವಸೆ
ಮೈಸೂರು

ನೀವು ಆರಿಸಿದವರನ್ನೇ ನಾಯಕರನ್ನಾಗಿಸುವೆ ದಲಿತ ಮುಖಂಡರಿಗೆ ಶಾಸಕ ಹೆಚ್.ವಿಶ್ವನಾಥ್ ಭರವಸೆ

December 10, 2018

ಹುಣಸೂರು: ಸಣ್ಣಪುಟ್ಟ 101 ಒಳಪಂಗಡಗಳನ್ನು ಗಮನದಲ್ಲಿಟ್ಟು ಕೊಂಡು ದಲಿತ ಮುಖಂಡರು ಒಟ್ಟು ಗೂಡಿ 10 ಮಂದಿ ಯುವಕರನನ್ನು ಗುರು ತಿಸಿದರೆ ನಾನು ಮುಂದಿನ ದಿನಗಳಲ್ಲಿ ಅವರನ್ನು ಬಲಿಷ್ಠ ನಾಯಕರನ್ನಾಗಿ ಮಾಡು ತ್ತೇನೆ ಎಂದು ಶಾಸಕ ಹೆಚ್.ವಿಶ್ವನಾಥ್ ಭರವಸೆ ನೀಡಿದರು.

ನಗರದ ಅಂಬೇಡ್ಕರ ಭವನದಲ್ಲಿ ದಲಿತ ಮುಖಂಡರಿಂದ ಏರ್ಪಡಿಸಿದ್ದ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ನಾನು ಚುನವಾಣಾ ಅಭ್ಯರ್ಥಿ ಎಂದು ಘೋಷಣೆಯಾದಾಗ ತಾಲೂಕಿನ ದಲಿತ ಸಮೂಹ ನನ್ನನ್ನು ಕರೆದು ನೋಟಿನ ಹಾರ ಹಾಕಿ ಸನ್ಮಾನ ಮಾಡಿ ನನಗೆ ಬೆಂಬಲಿಸುವ ಮೂಲಕ ಶಾಸಕನನ್ನಾಗಿ ಮಾಡಿತು. ಈ ಅಭಿಮಾನಕ್ಕೆ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಾನು ಸಾಮಾಜಿಕ ಕಳಕಳಿಯುಳ್ಳ ಪ್ರಜ್ಞಾವಂತ ಹಾಗೂ ದಲಿತರ ಬಗ್ಗೆ ಹೆಚ್ಚು ಕಾಳಜಿವುಳ್ಳವನಾಗಿದ್ದು, ಅರಸರ ಗರಡಿ ಯಲ್ಲಿ ಬೆಳೆದವನು. ರಾಷ್ಟ್ರದ ಪ್ರತಿಯೊಬ್ಬ ರಿಗೂ ಹಕ್ಕು ಬಾಧ್ಯತೆಗಳಿಗಾಗಿ ಸಂವಿಧಾನ ಬರೆದ ಅಂಬೇಡ್ಕರ್ ಅವರ ಫೋಟೋ ವನ್ನು ಮನೆಯಲ್ಲಿಟ್ಟು ಸ್ಮರಿಸಬೇಕು. ಅಂಬೇಡ್ಕರ್ ಹೆಸರು ಎಂದೂ ದುರು ಪಯೋಗವಾಗದಂತೆ ನಾವು ನಡೆದು ಕೊಳ್ಳಬೇಕು ಎಂದ ವಿಶ್ವನಾಥ್, ನಾನು ನಿಮ್ಮ ಮಾತು ಕೇಳಲು ತಯಾರಿದ್ದೇನೆ. ಸಮಾಜಿಕ ಕಳಕಳಿಯ ಪ್ರಜ್ಞಾವಂತರಾಗಿ ನೀವು ನನಗೆ ಸರಿದಾರಿ ತೋರಿ ನಡೆಸಿ ಎಂದು ಕೋರಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಬಿಳಿಕೆರೆ ರಾಜು ಮಾತನಾಡಿ, ತಾಲೂಕಿನಲ್ಲಿ 4À7 ಸಾವಿರಕ್ಕೂ ಹೆಚ್ಚು ದಲಿತ ಸಮೂಹ ವಿದ್ದು, ಈ ಬಾರಿ ದಲಿತ ಸಮುದಾಯ ಹೆಚ್.ವಿಶ್ವನಾಥ್‍ರನ್ನು ಬೆಂಬಲಿಸಿ ಗೆಲ್ಲಿಸಿದೆ. ಇವರಿಂದ ನಾವು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಅರಸರ ಆದರ್ಶಗಳನ್ನು ರೂಢಿಸಿಕೊಂಡಿ ರುವ ಶಾಸಕ ಹೆಚ್.ವಿಶ್ವನಾಥರ ಮೇಲೆ ಮಾಜಿ ಶಾಸಕರ ಬೆಂಬಲಿಗರು ಸಲ್ಲದ ಆರೋಪ ಮಾಡುತ್ತಿದ್ದು, ಈ ವಿಚಾರ ಗಳಿಗೆ ದಲಿತರು ಕಿವಿ ಕೂಡಬಾರದು ಎಂದು ಸಲಹೆ ನೀಡಿದರು.

ನಗರಸಭಾಧ್ಯಕ್ಷ ಹೆಚ್.ವೈ.ಮಹದೇವು, ದಲಿತ ಮುಖಂಡ ಬನ್ನಿಕುಪ್ಪೆ ಶಿವಶೇಖರ್, ಪುರಸಭೆ ಮಾಜಿ ಸದಸ್ಯ ಹೆಚ್.ಎಸ್. ವರದರಾಜು, ಬೋವಿ ಸಮುದಾಯದ ಮುಖಂಡ ವಿ.ಗಣೇಶ್ ಮಾತನಾಡಿದರು. ದಲಿತ ಮುಖಂಡ ನಾಗೇಶ ಮತ್ತು ಅವರ ತಂಡ ದಲಿತ ಹಿರಿಯ ಮುಖಂಡ ಬಿಳಿಕೆರೆ ರಾಜು ಅವರನ್ನು ನಿಗಮ ಮಂಡಳಿಗೆ ನೇಮಕ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡರಾದ ವಕೀಲ ಪುಟ್ಟರಾಜು, ರವಿ, ಗೋವಿಂದಯ್ಯ, ವಾಸು, ಚೆಲುವರಾಜು, ದಯಾನಂದ, ಕಾಂತ ರಾಜ್, ನಾಗೇಶ್, ಪುರು ಷೋತ್ತಮ್, ಬಸವರಾಜು, ವಿಷಕಂಠಯ್ಯ, ಪ್ರಭಾಕರ್, ವಿಜಯಕುಮಾರ್, ಕಾಳಪ್ಪ, ಅಶೋಕ್, ಅಪ್ಪಣ್ಣ, ವಾಸುರಾಜ್ ಸೇರಿದಂತೆ ಅನೇಕರಿದ್ದರು.

Translate »