ಕಾಂಗ್ರೆಸ್ ಪ್ರಣಾಳಿಕೆ: ಮಹಿಳೆಯರ ಅಭಿಪ್ರಾಯ ಸಂಗ್ರಹ
ಮೈಸೂರು

ಕಾಂಗ್ರೆಸ್ ಪ್ರಣಾಳಿಕೆ: ಮಹಿಳೆಯರ ಅಭಿಪ್ರಾಯ ಸಂಗ್ರಹ

December 10, 2018

ಮೈಸೂರು:  ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಮಹಿಳಾಪರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಟ ಅಮರನಾಥ್ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿದರು.

ಮಹಿಳೆಯರಿಗೆ ಉನ್ನತ ಶಿಕ್ಷಣ, ಉದ್ಯೋಗ ಸೃಷ್ಟಿ, ಮಹಿಳೆಯರ ಸಬಲೀಕರಣ, ಸಮಾನ ರಾಜಕೀಯ ಸ್ಥಾನಮಾನ, ಸಮಾನ ಕೆಲಸಕ್ಕೆ ಸಮಾನ ವೇತನ, ಹೆರಿಗೆ ರಜೆಯ ಅವಧಿ ವಿಸ್ತರಣೆ, ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆ, ಕಾನೂನು ಅರಿವು ಕಾರ್ಯಕ್ರಮ ಸೇರಿದಂತೆ ಹಲವು ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

ಪ್ರಣಾಳಿಕೆ ಸಮಿತಿ ಸಂಯೋಜಕ ರಾಜೀವ್ ಗೌಡ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ದೇಶನದಂತೆ ಮಹಿಳೆಯರ ಮನವಿ ಆಲಿಸುವ `ಜನ ಧ್ವನಿ’ ವಿಶೇಷ ಕಾರ್ಯಕ್ರಮದಡಿ ಕಾಂಗ್ರೆಸ್ ಮುಖಂಡರು ದೇಶದ ವಿವಿಧ ಭಾಗಗಳಿಗೆ ತೆರಳಿ ಎಲ್ಲ ವರ್ಗದ ಮಹಿಳೆಯರನ್ನು ಭೇಟಿಯಾಗಿ ಅವರ ಸಮಸ್ಯೆ, ಮನವಿಗಳನ್ನು ಸ್ವೀಕರಿಸಿ ನಂತರ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಿದ್ದಾರೆ ಎಂದು ಹೇಳಿದರು. ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮೀತಾ ದೇವ್, ಮೇಯರ್ ಪುಷ್ಟಲತಾ ಜಗನ್ನಾಥ್ ಉಪಸ್ಥಿತರಿದ್ದರು.

Translate »