ಸಾಹಿತಿ ಎಂ.ಎನ್.ವ್ಯಾಸರಾವ್‍ಗೆ ನುಡಿನಮನ
ಚಾಮರಾಜನಗರ

ಸಾಹಿತಿ ಎಂ.ಎನ್.ವ್ಯಾಸರಾವ್‍ಗೆ ನುಡಿನಮನ

July 23, 2018

ಯಳಂದೂರು:  ‘ಎಂ.ಎನ್.ವ್ಯಾಸರಾವ್ ಅವರು ತಮ್ಮ ದೈನಂ ದಿನ ಬರವಣಿಗೆ ಮತ್ತು ಕಥೆ, ಕವಿತೆ, ಸಾಹಿತ್ಯ ರಚನೆ ಮೂಲಕ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸಿ ಯುವ ಪೀಳಿಗೆಯನ್ನು ಪ್ರೆರೇಪಿ ಸುವ ಕೆಲಸ ಮಾಡುತ್ತಿದ್ದರು. ಅವರ ನಿಧನ ಸಾಹಿತ್ಯ, ಸಿನಿಮಾ ಕ್ಷೇತ್ರಕ್ಕೆ ಅಪಾರ ನಷ್ಟವುಂಟು ಮಾಡಿದೆ’ ಎಂದು ತಾಲೂಕು ಕಸಾಪ ಅಧ್ಯಕ್ಷ ಮದ್ದೂರು ವಿರೂಪಾಕ್ಷ ಹೇಳಿದರು.

ಪಟ್ಟಣದ ಲಯನ್ಸ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿಪ ್ರಸಮಾಜ ದಿಂದ ನಡೆದ ಚಿತ್ರರಂಗ ಗೀತಾ ರಚನಾ ಕಾರ ಹಾಗೂ ಸಾಹಿತಿ ಎಂ.ಎನ್.ವ್ಯಾಸರಾವ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಸರಾವ್ ಯಳಂದೂರಿನಲ್ಲಿ ಜನಿಸಿ, ಮೈಸೂ ರಿನಲ್ಲಿ ಶಿಕ್ಷಣ ಪಡೆದರು. ಇವರು ವಿದ್ಯಾರ್ಥಿ ಯಾಗಿದ್ದಾಗಲ್ಲೇ ಕಾವ್ಯ ರಚನೆ, ಕಥೆ ಬರೆಯು ವುದು, ಚಚೆರ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿ ಪ್ರಶಂಸೆಗಳಿಸಿದರು. ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದರು. ಗೋಪಾಲ ಕೃಷ್ಣ ಅಡಿಗರ ಸಾಕ್ಷಿ ಪತ್ರಿಕೆಗೆ ಕವನ, ಕಥೆಗಳನ್ನು ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡರು ಎಂದರು. ಶುಭಮಂಗಳ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ಗೀತಾ ರಚನೆ ಮಾಡಿದರು.

‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು’ ಗೀತೆಯ ಮೂಲಕ ಜನಪ್ರಿಯರಾದರು. ಪತ್ತೆ ದಾರಿ ಕಾದಂಬರಿಗಳಾದ ‘ಅಖಿಲಾ ಮೈಡಾ ರ್ಲಿಂಗ್’ ‘ಕತ್ತಲಲ್ಲಿ ಬಂದವನು’ ಕಾದಂ ಬರಿ ರಚನೆ ಮಾಡಿದರು. 2011ರಲ್ಲಿ ಯಳಂ ದೂರಿನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾದ ಸರ್ವಧ್ಯಕ್ಷರಾಗಿದ್ದ ವ್ಯಾಸರಾವ್ ಅವರು ಸುಮಾರು 107 ಸಿನಿಮಾಗಳಿಗೆ 300ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದರು ಎಂದರು.

ಸಾಹಿತಿ ಪಿ.ನಾಗೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಪ್ರ ಸಮಾಜ ಅಧ್ಯಕ್ಷ ರಂಗನಾಥರಾವ್, ಪ್ರಧಾನ ಕಾರ್ಯದರ್ಶಿ ವೈ.ಆರ್.ಫಣಿಶ್, ಬಿ.ರಂಗನ ಬೆಟ್ಟದ ಮಾಜಿ ಧರ್ಮದರ್ಶಿ ದೂರೆಸ್ವಾಮಿ, ಮುಖಂಡರಾದ ಗುಂಬಳ್ಳಿ ಬಸವರಾಜು, ಬಳೇಪೇಟೆ ಪ್ರಕಾಶ್, ನಾಗೇಂದ್ರಮೌರ್ಯ, ಡಾ.ಮಹೇಶ್, ಪೇಪರ್ ಶ್ರೀನಿವಾಸ್, ರಾಧಕೃಷ್ಣ, ಎಂ.ಎನ್.ನರ ಸಿಂಹಯ್ಯ, ಚಂದ್ರಮೌಳಿ, ಶಿವಕುಮಾರ್, ನಾಗರಾಜು, ಮಂಜುನಾಥ್, ಜಯತಿರ್ಥ ಚಾರ್, ಗಣೇಶ್, ನಾಗಸುಂದ್ರ ಹಾಜರಿದ್ದರು.

Translate »