ಅಂಗವಿಕಲರಿಗೆ ಸೌಲಭ್ಯ ತಲುಪಿಸಲು ಸಲಹೆ
ಚಾಮರಾಜನಗರ

ಅಂಗವಿಕಲರಿಗೆ ಸೌಲಭ್ಯ ತಲುಪಿಸಲು ಸಲಹೆ

July 23, 2018

ಚಾಮರಾಜನಗರ:  ‘ಸೇವಾ ಸಂಸ್ಥೆಗಳು ಸಂವಿಧಾನದ ಉದೇಶಗಳನ್ನು ಈಡೇರಿಸುವ ಜೊತೆಗೆ, ಸರ್ಕಾರದ ಸೌಲ ಭ್ಯವನ್ನು ಅಂಗವಿಕಲರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿ.ಬಸವರಾಜು ಸಲಹೆ ನೀಡಿದರು.

ನಗರದ ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರ ಹಾಗೂ ಜಿಲ್ಲಾ ವಕಿಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಾರ್ಗದರ್ಶಿ ಸೇವಾ ಸಂಸ್ಥೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಹಕ್ಕುಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾ ಸಂಸ್ಥೆಗಳು ಜಿಲ್ಲೆಯ ರಾಮ ಪುರ, ಹನೂರು, ಮಹದೇಶ್ವರಬೆಟ್ಟ ಸೇರಿ ದಂತೆ ಹಲವು ಹಿಂದುಳಿದ ಪ್ರದೇಶದಲ್ಲಿನ ಜನರಿಗೆ ಸರ್ಕಾರದ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಅವರಿಗೆ ಸೌಲಭ್ಯ ತಲುಪಿ ಸಬೇಕು. ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಯಾವುದೇ ಸಮುದಾಯದ ಜನರೇ ಆಗಿರಲಿ ಅನ್ಯಾಯ ವಾದಾಗ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬೇಕು ಎಂದರು.

ಜಿಲ್ಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜೆ.ವಿಶಾಲಾಕ್ಷಿ ಮಾತ ನಾಡಿ, ಅಂಗವಿಕಲ ಮಕ್ಕಳ ಅಭಿವೃ ದ್ಧಿಗೆ ಪ್ರಮುಖವಾಗಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ಪೋಷಕರು ಅಂಗವಿಕಲ ಮಕ್ಕಳನ್ನು ಆಟವಾಡಲು ಬಿಡಬೇಕು. ಇದ ರಿಂದ ಅಂತಹ ಮಕ್ಕಳ ಮನಸ್ಸಿನಲ್ಲಿ ಬುದ್ದಿ ಚುರುಕಾಗುತ್ತದೆ. ಕೆಲವು ಕಡೆ ಅಂಗವಿಕಲ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುವುದಿಲ್ಲ. ಇಂತಹ ಮಕ್ಕಳಿಗೆ ಪೋಷಕರೇ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದರು.

ಅಂಗವಿಕಲತೆ ಶಾಪವಲ್ಲ. ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದರೆ ಅವರು ಸಮಾಜ ದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದರು. ಕಾರ್ಯಕ್ರಮದಲ್ಲಿ ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕ ಮಹದೇವಪ್ಪ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಾ ಧಿಕಾರಿ ದೊಡ್ಡಪ್ಪ ಎನ್.ಮೂಲಿಮನಿ, ಸೇವಾಭಾರತಿ ಸಂಸ್ಥೆಯ ಎಂ.ಪಿ.ಮಂಜು ನಾಥ್, ಮಾರ್ಗದರ್ಶಿ ಸೇವಾ ಸಂಸ್ಥೆಯ ವಿರೇಂದ್ರಪ್ರಸಾದ್, ನಾಗರಾಜು, ಲೀನಾಕುಮಾರಿ, ವಿದ್ಯಾರಾಣಿ, ರಂಜಿತಾ ಹಾಜರಿದ್ದರು.

Translate »