ವಿರಾಜಪೇಟೆಯಲ್ಲಿ ಶ್ರೀ ಗುರು ಪೂಜಾ ಉತ್ಸವ
ಕೊಡಗು

ವಿರಾಜಪೇಟೆಯಲ್ಲಿ ಶ್ರೀ ಗುರು ಪೂಜಾ ಉತ್ಸವ

July 23, 2018

ವಿರಾಜಪೇಟೆ:  ದೇಶದಲ್ಲಿ ಲಕ್ಷದ ಅರವತ್ತು ಸಾವಿರ ಸೇವಾ ಚಟು ವಟಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಸ್ವಯಂಸೇವಕ ಸಂಘಗಳು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿವೆ. ಹಿಂದೂಗಳು ನಾವೆಲ್ಲರೂ ಒಂದು ರಾಷ್ಟ್ರದ ಮಕ್ಕಳೆಂಬ ನಂಬಿಕೆಯಿಂದ ಬದುಕು ನಡೆಸುವಂತಾಗಬೇಕು ಎಂದು ಬೆಂಗಳೂರು ಸಂಸ್ಕೃತ ಭಾರತಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ದತ್ತಾ ತ್ರೇಯ ವಜ್ರಳ್ಳಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರಾಜಪೇಟೆ ಶಾಖೆ ವತಿಯಿಂದ ಸ್ಥಳಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಶ್ರೀ ಗುರು ಪೂಜಾ ಉತ್ಸವ” ಸಭಾ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದ ದತ್ತಾತ್ರೇಯ ವಜ್ರಳ್ಳಿ ಅವರು, ತಮ್ಮ ಬೌಧ್ವಿಕ್‍ನಲ್ಲಿ ಹಕ್ಕಿಗಾಗಿ ಹೋರಾಟ ಮಾಡುವುದಕ್ಕಿಂತ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ಮಾಡಿದಲ್ಲಿ ಹಕ್ಕು ತನಾಗಿಯೇ ಬರುತ್ತದೆ. ಸಮಾಜ ದಲ್ಲಿ ಪ್ರತಿ ವ್ಯಕ್ತಿಯು ಪ್ರಧಾನರು ಸಂಘದ ತತ್ವಗಳಿಗೆ ಬದ್ದರಾಗಿರಬೇಕು. ಪ್ರತಿಯೊ ಬ್ಬರು ಈ ದೇಶ ನಮ್ಮದು ಎಂಬ ಪರಂ ಪರೆಯನ್ನು ಬೆಳಸಿಕೊಂಡು ಸಮಾಜದ ಹಿತಕ್ಕಾಗಿ ಶ್ರೇಷ್ಟವಾದ ಬದುಕನ್ನು ನಡೆಸುವಂತಾಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಹಿರಿಯ ವಕೀಲ ಎಸ್.ಆರ್.ಜಗ ದೀಶ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಯುವ ಜನಾಂಗ ಹಾಗೂ ಸಂಘಗಳಿಂದ ಸಾಧ್ಯ. ಭಾರತ ದೇಶದ ಹಿಂದೂ ಧರ್ಮವನ್ನು ಪ್ರತಿಯೊಬ್ಬರು ಪಾಲಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೆರ ಮನು ಕಾವೇರಪ್ಪ, ವಿರಾಜಪೇಟೆ ತಾಲೂಕು ಸಂಘಚಾಲಕ್ ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ನಗರ ಕಾರ್ಯ ವಹ ಬಿ.ಎಲ್.ಪುರುಷೋತ್ತಮ ಸ್ವಾಗತಿಸಿ ದರು. ಸಂಪರ್ಕ ಪ್ರಮುಖ ಬಿ.ವಿ.ಹೇಮಂತ್, ಸಿತರಾಂ ಕದಿಲಯ ನಿರೂಪಿಸಿದರೆ. ನಗರ ಸೇವಾ ಸತೀಶ್ ವಂದಿಸಿದರು. ಕಾರ್ಯ ಕ್ರಮಕ್ಕೆ ನಗರ ಮತ್ತು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Translate »