ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಶಾಸಕ
ಚಾಮರಾಜನಗರ

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಶಾಸಕ

July 23, 2018

ಗುಂಡ್ಲುಪೇಟೆ:  ‘ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯಿಟ್ಟು ಸತತ ಸಾಧನೆ ಮಾಡಿದರೆ ಉನ್ನತ ಸ್ಥಾನಗಳಿ ಸಲು ಸಾಧ್ಯವಾಗುತ್ತದೆ’ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಮೇರು ವಿದ್ಯಾ ಸಂಸ್ಥೆ ಹಾಗೂ ಸಂಕಲ್ಪ ಶಿಕ್ಷಕರ ವೇದಿಕೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಂಪನ್ಮೂಲವಿಲ್ಲದ ತಾಲೂ ಕಿನ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ದೊಡ್ಡ ಕನಸನ್ನು ಕಾಣುವ ಮೂಲಕ ಉನ್ನತ ಗುರಿ ತಲುಪಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಅಪಾರ ಅವಕಾಶ ಗಳಿದ್ದರೂ ಸೀಮಿತ ತಿಳುವಳಿಕೆಯಿಂದ ಬಹುತೇಕ ವಿದ್ಯಾರ್ಥಿಗಳು ಗುರಿ ಸಾಧಿ ಸಲು ಸಾಧ್ಯವಾಗುತ್ತಿಲ್ಲ ಎಂದರು.

ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕ್, ಪಿಎಸ್‍ಐ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಸಾಕಷ್ಟು ಸಿದ್ಧತೆಗಳೊಂದಿಗೆ ಎದುರಿಸಲು ಹಾಗೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ಸೃಷ್ಟಿಸಲು ವಿವಿಧ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಹಾಗೂ ತರಬೇತಿಗಳನ್ನು ನೀಡಲು ಮುಂದಾಗುತ್ತಿವೆ ಎಂದು ತಿಳಿಸಿದರು.

ಪಟ್ಟಣದ ಮದ್ದಾನೇಶ್ವರ ಮಹಾ ಮನೆಯಯಲ್ಲಿ ಸಂಕಲ್ಪ ಶಿಕ್ಷಕರ ವೇದಿ ಕೆಯು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಗಳಿಗೆ ಉಚಿತ ತರಬೇತಿಯನ್ನು ನೀಡು ತ್ತಿವೆ. ಯುವಜನತೆ ಇವುಗಳ ಸದುಪಯೋಗ ಪಡೆದು ಉನ್ನತ ಸ್ಥಾನಕ್ಕೇರಿ ಉತ್ತಮ ಪ್ರಜೆ ಗಳಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕೃ.ಪಾ.ಗಣೇಶ್, ಮಂಜುನಾಥ್, ಮರಿಗೌಡ, ಬಿ.ಟಿ.ರುದ್ರೇಶ್, ಪ್ರಸಾದ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

 

Translate »