ಎಂಸಿಡಿಸಿಸಿ ಬ್ಯಾಂಕ್‍ನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್‍ನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ

February 4, 2020

ಮೈಸೂರು, ಫೆ.3- ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ವತಿಯಿಂದ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗು ವಂತೆ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಸೋಮವಾರ ಮೈಸೂರು ಕೇಂದ್ರ ಶಾಖೆ ಯಲ್ಲಿ ಚಾಲನೆ ನೀಡಲಾಯಿತು.

ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ಮಾತನಾಡಿ, ಬ್ಯಾಂಕಿನ ಗ್ರಾಹಕರಿಗೆ ಆರ್ಥಿಕವಾಗಿ ಮತ್ತು ಸಾಮಾ ಜಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶ ದಿಂದ 20ಕ್ಕೂ ಹೆಚ್ಚು ಸೇವೆಗಳನ್ನು ಅಳವಡಿ ಸಿರುವ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿದ್ದು, ಪ್ರತಿದಿನಕ್ಕೆ 2ಲಕ್ಷ ರೂ.ವರೆಗೆ ವ್ಯವಹರಿಸಬಹುದು ಎಂದು ತಿಳಿಸಿದರು.

ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬ್ಯಾಂಕಿನ ಷೇರು ಬಂಡ ವಾಳ 5136.17 ಲಕ್ಷ ರೂ. ಇತ್ತು. ಪ್ರಸ್ತುತ 5351.27 ಲಕ್ಷ ರೂ. ಆಗಿದೆ. ಒಟ್ಟು 215. 10 ಲಕ್ಷ ರೂ. ಪ್ರಗತಿ ಸಾಧಿಸಲಾಗಿದೆ. ಬ್ಯಾಂಕಿನ ನಿಧಿಯಲ್ಲಿ ಪ್ರಸ್ತುತ 9307.63 ಲಕ್ಷ ರೂ. ಇದ್ದು, 479.49 ಲಕ್ಷ ರೂ. ಗಳಿಸ ಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ಠೇವಣಿಯಲ್ಲಿ 48871.05 ಲಕ್ಷ ರೂ. ಇದ್ದು, ಈ ಪೈಕಿ ಕಾಸಾ ಠೇವಣಿ 17342.73, ಎಫ್.ಡಿ. ಬಾಬ್ತು 31528.32 ಇದೆ. ಒಟ್ಟಾರೆ 11153.56 ಪ್ರಗತಿ ಸಾಧಿಸ ಲಾಗಿದೆ. ರಾಜ್ಯದ ರೈತರಿಗೆ ನೆರವಾಗಲೆಂದು ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲಗಳನ್ನು ನೀಡುತ್ತಿದ್ದು, ಪ್ರಸ್ತುತ 67068.69 ಲಕ್ಷ ರೂ. ರಷ್ಟಿದೆ. ಕೃಷಿಯೇತರ ಸಾಲಗಳು 11615.42 ಲಕ್ಷ ರೂ. ಗಳಷ್ಟಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದಿಂದ ಬರುವ ಅನೇಕ ಸೌಲಭ್ಯ ಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿ ಸುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಗ್ರಾಹಕರ ಜೊತೆ ನಂಬಿಕಾರ್ಹವಾಗಿ ವ್ಯವಹರಿ ಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿ ದ್ದೇವೆ ಎಂದರು. ರಾಜ್ಯದಲ್ಲಿ 271 ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಶೀಘ್ರದಲ್ಲಿ ಸಭೆ ಸೇರಿ ಬ್ಯಾಂಕಿನ ವಹಿವಾಟುಗಳಲ್ಲಿ ಅವ್ಯವ ಹಾರ ತಡೆಗಟ್ಟುವ ಉದ್ದೇಶದಿಂದ ಸಾಫ್ಟ್ ವೇರ್ ಮುಖಾಂತರ ವ್ಯವಹರಿಸಲು ನಿರ್ಧರಿಸ ಲಾಗುತ್ತದೆ. ಅಲ್ಲದೆ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬೇಕೆಂದು ಸರ್ಕಾರ ವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.

ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ಮುನ್ನ ನಡೆದ ಬ್ಯಾಂಕಿನ ವ್ಯವ ಹಾರಗಳ ದುರುಪಯೋಗಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಕಾನೂನು ಕ್ರಮ ಕೈಗೊಳ್ಳ ಲಾಗಿದೆ. ಪ್ರಸ್ತುತ ಬ್ಯಾಂಕ್ ಸದೃಢವಾಗಿದ್ದು, ಪ್ರಗತಿಪಥದತ್ತ ದಾಪುಗಾಲು ಹಾಕುತ್ತಿದೆ. ಇದಲ್ಲದೆ ಮತ್ತಷ್ಟು ಗ್ರಾಹಕರನ್ನು ಸೆಳೆ ಯಲು ಅನೇಕ ವಿನೂತನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.  ಎಂಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಬಿ.ಲಿಂಗಣ್ಣಯ್ಯ, ಪ್ರಧಾನ ವ್ಯವಸ್ಥಾಪಕ ವಿನೋದ್‍ಕುಮಾರ್, ನಬಾರ್ಡ್ ವ್ಯವಸ್ಥಾಪಕ ಮಣಿಕಂಠನ್, ಸಿಬ್ಬಂದಿ ಸತೀಶ್, ಪಾಲಯ್ಯ, ಶ್ರೀಧರ್, ಚಂದ್ರ ಶೇಖರ್ ಇತರರು ಉಪಸ್ಥಿತರಿದ್ದರು.

 

 

Translate »