ಪ್ರಬಂಧ ಬರೆಯುವುದಕ್ಕಿಂತ ಚರ್ಚೆ ಮಾಡುವುದರಲ್ಲಿ ಹೆಚ್ಚಿನ ಜ್ಞಾನಾರ್ಜನೆ
ಮೈಸೂರು

ಪ್ರಬಂಧ ಬರೆಯುವುದಕ್ಕಿಂತ ಚರ್ಚೆ ಮಾಡುವುದರಲ್ಲಿ ಹೆಚ್ಚಿನ ಜ್ಞಾನಾರ್ಜನೆ

June 25, 2019

ಮೈಸೂರು:  ಪ್ರಬಂಧ ಬರೆಯುವುದಕ್ಕಿಂತ ಚರ್ಚೆ ಮಾಡುವುದ ರಲ್ಲಿ ಹೆಚ್ಚಿನ ಜ್ಞಾನ ವೃದ್ಧಿಯಾಗುವುದರ ಜತೆಗೆ ಸಂವಹನ ಕೌಶಲ್ಯತೆ ಬೆಳೆಯುತ್ತದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಅಭಿಪ್ರಾಯಿಸಿದರು.

ಕುವೆಂಪುನಗರದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜ್ಞಾನಪೀಠ ಪುರಸ್ಕøತ ಗಿರೀಶ್ ಕಾರ್ನಾಡ್ ಹಾಗೂ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ಸ್ಮರಣಾರ್ಥ ‘ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ, ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಬ್ಬರು ಪ್ರಗತಿಪರ ಚಿಂತಕರಾದ ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್ ಹಾಗೂ ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ ಅವರು, ಜಾತಿ ವ್ಯವಸ್ಥೆಯಲ್ಲಿ ಶೋಷ ಣೆಗೆ ಒಳಗಾಗಿದ್ದವರ ಜತೆಯಲ್ಲೇ ಇದ್ದು, ಅವರ ಸಮಸ್ಯೆಗಳಿಗಾಗಿ ಹೋರಾಡಿದ್ದಾರೆ. ಅವರಲ್ಲಿ ಸಂಕುಚಿತ ಮನೋಭಾವನೆ ಇರ ಲಿಲ್ಲ. ಜ್ಞಾನಪೀಠ ಪುರಸ್ಕøತರಾದ ಗಿರೀಶ್ ಕಾರ್ನಾಡ್ ಅವರು ತಮ್ಮ ಬರವಣಿಗೆಯ ಮೂಲಕ ಹಿಂದುಳಿದ ಹಾಗೂ ಅಲ್ಪಸಂಖ್ಯಾ ತರ ಧ್ವನಿಯಾಗಿದ್ದರು ಎಂದು ಹೇಳಿದರು.

ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ ಇಬ್ಬರೂ ಮಹಾನ್ ಪ್ರಗತಿಪರ ಚಿಂತಕರ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನದಲ್ಲಿ ಆಯೋಜಿಸಿ ರುವುದು ಶ್ಲಾಘನೀಯವಾದುದು. ಸಾಮಾನ್ಯ ವಾಗಿ ಪ್ರಬಂಧ ಬರೆಯುವುದು ಸುಲಭ. ಆದರೆ, ಚರ್ಚೆಯಲ್ಲಿ ಭಾಗವಹಿಸಬೇಕಾ ದರೆ ಸಾಕಷ್ಟು ಜ್ಞಾನದೊಂದಿಗೆ ಭಾಷೆಯ ಹಿಡಿತವಿರಬೇಕು. ಚರ್ಚೆಗಳಿಂದ ವಿಚಾರ ವಿನಿಮಯವಾಗುತ್ತದೆ. ನಾನು ಸಹ ರಾಜ ಕೀಯಕ್ಕೆ ಬರುವ ಮುನ್ನಾ ಮಾತನಾಡು ವುದು ತುಂಬಾ ವಿರಳವಾಗಿತ್ತು ಎಂದರು.

ಬಹುಮಾನ ವಿತರಣೆ: ಇದೇ ವೇಳೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿ ಸಿದರು. ಮಹಾತ್ಮಗಾಂಧಿ ಬಿ.ಇಡಿ ಕಾಲೇ ಜಿನ ಎಂ.ಆರ್.ಸಿದ್ದವೀರಪ್ಪ ಪ್ರಥಮ ಸ್ಥಾನ ಪಡೆದರೆ, ಶ್ರೀ ಕಾಗಿನೆಲೆ ಬಿ.ಇಡಿ ಕಾಲೇ ಜಿನ ಟಿ.ಬಾಲಾಜಿ ದ್ವಿತೀಯ ಹಾಗೂ ಮೌಲಾನ ಅಜಾದ್ ಬಿ.ಇಡಿ ಕಾಲೇಜಿನ ಷಂಷಾದ್ ಉನ್ನೀಸ ತೃತೀಯ ಸ್ಥಾನವನ್ನು ಪಡೆದು ಕೊಂಡರು. ಕಾರ್ಯಕ್ರಮದಲ್ಲಿ ಶ್ರೀ ಕಾಗಿ ನೆಲೆ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯ ದರ್ಶಿ ಎಂ.ಪುಟ್ಟಬಸವೇಗೌಡ, ಪ್ರಾಂಶು ಪಾಲೆ ಡಾ.ಕೆ.ಕೆ.ವಿಶಾಲಾಕ್ಷಿ, ನಿವೃತ್ತ ಪ್ರಾಧ್ಯಾ ಪಕ ಪ್ರೊ.ವೆಂಕಟರಮಣ ಶೆಟ್ಟಿ, ಡಾ. ಶಿಂಡೇನಹಳ್ಳಿ ಎಸ್.ಎಂ.ಶರತ್‍ಕುಮಾರ್, ಹಾಸ್ಯ ಕಲಾವಿದ ಬೆಮಲ್ ಕಂಪಣ್ಣಪ್ಪ, ಮತ್ತಿತರರು ಉಪಸ್ಥಿತರಿದ್ದರು.

Translate »