ವಿಮಾನಯಾನ ಸಚಿವರೊಂದಿಗೆ  ಸಂಸದ ಪ್ರತಾಪ್ ಸಿಂಹ ಚರ್ಚೆ
ಮೈಸೂರು

ವಿಮಾನಯಾನ ಸಚಿವರೊಂದಿಗೆ ಸಂಸದ ಪ್ರತಾಪ್ ಸಿಂಹ ಚರ್ಚೆ

February 14, 2019

ಮೈಸೂರು: ಕೇಂದ್ರ ಸರ್ಕಾರದ `ಉಡಾನ್’ ಯೋಜನೆಯಡಿ ಮೈಸೂರಿನಲ್ಲಿ ಹೆಚ್ಚಿನ ವಿಮಾನ ಹಾರಾಟ ಪ್ರಾರಂಭಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಉಡಾನ್-3 ಯೋಜನೆಯ 3ನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿಮಾನಯಾನ ಸಂಪರ್ಕ ಕಲ್ಪಿಸಲು ಮೈಸೂರು-ಬೆಳಗಾಂ, ಮೈಸೂರು -ಹೈದರಾಬಾದ್, ಮೈಸೂರು-ಹೈದರಾಬಾದ್, ಮೈಸೂರು-ಗೋವಾ, ಮೈಸೂರು-ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು-ಬೆಂಗಳೂರು ವಿಮಾನಗಳ ಹಾರಾಟಕ್ಕೆ ಈಗಾಗಲೇ ವಿಮಾನಯಾನ ಸಚಿವಾಲಯವು ಅನುಮೋದನೆ ನೀಡಿದ್ದು, ಅದನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಇಂದು ನವದೆಹಲಿಯಲ್ಲಿ ಸಂಸದರು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ಸಚಿವಾಲಯದ ಕಾರ್ಯದರ್ಶಿ ಉಷಾಪಾದಿ, ಅಲೈಯನ್ಸ್ ಏರ್ ಮುಖ್ಯಸ್ಥ ಸುಬ್ಬಯ್ಯ, ಇಂಡಿಗೋ ಏರ್‍ಲೈನ್ಸ್ ಮುಖ್ಯ ಯೋಜನಾಧಿಕಾರಿ ಮೈಕಲ್ ಅಂಥೋಣಿ ಮತ್ತು ಟ್ರೂಜೆಟ್ ಏರ್‍ಲೈನ್ಸ್ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಉಮೇಶ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಟ್ರೂಜೆಟ್ ಏರ್‍ಲೈನ್ಸ್ ಸಂಸ್ಥೆಯು ಮೈಸೂರಿನಿಂದ ಚೆನ್ನೈಗೆ ಬೆಳಗಿನ ವೇಳೆ ವಿಮಾನ ಹಾರಾಟ ವನ್ನು ಶೀಘ್ರವೇ ಪ್ರಾರಂಭಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Translate »