ಬೇಲೂರು, ಜು.3- ಪಟ್ಟಣದಲ್ಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಪೂರ್ಣ ನಿಷೇಧಿಸಲಾಗಿದೆ. ಮಾರಾಟ ಮಾಡಿದ ವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದ ಪ್ಲಾಸ್ಟಿಕ್ ತಟ್ಟೆ ಲೋಟ ಪ್ಲಾಸ್ಟಿಕ್ ಹಾಳೆ ಅಂಟಿಸಿದ ಎಲೆ ಹಾಗೂ ಥರ್ಮೋಕೋಲ್ ತಟ್ಟೆಗಳನ್ನು ಪುರಸಭೆ ಮುಂಭಾಗ ಹರಿದುಹಾಕಿ ನಾಶಪಡಿಸಲಾಯಿತು.
ಪುರಸಭೆಯಿಂದ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಪ್ಲಾಸ್ಟಿಕ್ ಮಾರಾಟ ನಡೆಯುತ್ತಲೇ ಇದೆ. ಮಂಗಳವಾರ ಪುರಸಭೆ ಸಿಬ್ಬಂದಿ ಮತ್ತು ಅಂಗಡಿ ಮಾಲೀಕರ ನಡುವೆ ಹೊಡೆದಾಟವಾಗಿ ಗಾಯಾಳುಗಳು ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವ ಕಾರಣಕ್ಕೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಕೂಡದು ಎಂದು ಮಂಜುನಾಥ್ ಕಟ್ಟುನಿಟ್ಟು ಆದೇಶ ಹೊರಡಿಸಿದರು.
ಪುರಸಭೆ ಸಿಬ್ಬಂದಿ ಮಂಗಳವಾರ ಸಂಜೆ ಭಾರತ್ ಸ್ಟೋರ್ ಮೇಲೆ ದಾಳಿ ನಡೆಸಿದಾಗ ಮಾಲೀಕ ವಾಗ್ವಾದ ನಡೆಸಿ ಜಗಳ ಆರಂಭಿಸಿದ. ಹೊಡೆದಾಟದಲ್ಲಿ ಎರಡೂ ಕಡೆಯವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು