ಅಪ್ರಾಪ್ತ ಬಾಲಕಿ ಹತ್ಯೆ: ಆರೋಪಿಗೆ ಶಿಕ್ಷೆ
ಚಾಮರಾಜನಗರ

ಅಪ್ರಾಪ್ತ ಬಾಲಕಿ ಹತ್ಯೆ: ಆರೋಪಿಗೆ ಶಿಕ್ಷೆ

February 28, 2019

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಕಾರಾಗೃಹ ಮತ್ತು 25 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಕೇರಳ ರಾಜ್ಯದ ವೈನಾಡು ಜಿಲ್ಲೆಯ ಅಬ್ದುಲ್ ರೆಹಮಾನ್ ಶಿಕ್ಷೆಗೆ ಒಳಗಾದವನು. ಅಬ್ದುಲ್
ರೆಹಮಾನ್ ವೈನಾಡಿನ ಅಪ್ರಾಪ್ತ ಬಾಲಕಿಯನ್ನು ಕಾಲೇಜಿನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸು ತ್ತಿದ್ದನು. 2014 ಫೆಬ್ರವರಿ 14ರಂದು ಯುವ ತಿಯ ಹುಟ್ಟುಹಬ್ಬ ಇತ್ತು. ಅದೇ ದಿನ ಪ್ರೇಮಿಗಳ ದಿನಾಚರಣೆ ಇತ್ತು. ಹೀಗಾಗಿ ಹೊರ ಗಡೆ ಹೋಗಿ ಹುಟ್ಟುಹಬ್ಬ ಆಚರಿ ಸೋಣ ಎಂದು ಯುವತಿ ಯನ್ನು ನಂಬಿಸಿ ಬೇರಂಬಾಡಿ ಕೆರೆಗೆ ಕರೆದುಕೊಂಡು ಬಂದಿ ದ್ದನು. ಕೆರೆಗೆ ಇಳಿದ ಅಬ್ದುಲ್ ರೆಹಮಾನ್ ನಂತರ ಯುವತಿ ಯನ್ನು ಬಲವಂತವಾಗಿ ಕೆರೆಗೆ ಇಳಿಸಿ ಲೈಂಗಿಕ ಕ್ರಿಯೆಗೆ ಸಹಕರಿಸು ವಂತೆ ಒತ್ತಾಯಿಸಿ ದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಅಬ್ದುಲ್ ರೆಹಮಾನ್ ಯುವತಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾ ಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಿ ಅಬ್ದುಲ್ ರೆಹಮಾನ್ ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಜಿ.ಬಸವರಾಜ ಅವರು 5 ವರ್ಷಗಳ ಕಠಿಣ ಕಾರಾಗೃಹ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ದಂಡ ಕಟ್ಟಲು ತಪ್ಪಿದಲ್ಲಿ ಒಂದು ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ನಾಗರಾಜು ಪ್ರಕರಣದ ವಿಚಾರಣೆ ನಡೆಸಿದ್ದರು. ಸರ್ಕಾರಿ ಅಭಿಯೋಜಕಿ ಟಿ.ಹೆಚ್.ಮೋಲಾಕ್ಷೆ ವಾದ ಮಂಡಿಸಿದ್ದರು.

Translate »