ಚಾಮರಾಜನಗರ: ತಾಲೂಕಿನ ಬೆಂಡರ ವಾಡಿ ಗ್ರಾಮದ ಕೆರೆ ಬಳಿ ಬೈಕ್‍ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಇಬ್ಬರು ಗುತ್ತಿಗೆದಾರರು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ, ಮೈಸೂರು ಜಿಲ್ಲಾ ವಿದ್ಯುತ್ ಗುತ್ತಿಗೆದಾರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಗಿರೀಶ್‍ಬಾಬು ಹಾಗೂ ಕುವೆಂಪುನಗರದ ಕುಮಾರ್ ಮೃತಪಟ್ಟವರು. ಎಂ.ಎಸ್.ಗಿರೀಶ್‍ಬಾಬು ಮತ್ತು ಕುಮಾರ್ ಬೈಕ್‍ನಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದರು. ಬೊಲೆರೊ ವಾಹನ ಚಾಮರಾಜನಗದಿಂದ ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ಬೆಂಡರವಾಡಿ ಕೆರೆ ಬಳಿ ಈ ಎರಡು ವಾಹನಗಳಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿತು. ಇದರಿಂದ ಗಿರೀಶ್ ಬಾಬು ಸ್ಥಳದಲ್ಲಿಯೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ಅವರಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿ ಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸಂಚಾರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಕೆ.ದೀಪಕ್ ತಿಳಿಸಿದ್ದಾರೆ. ಅಪಘಾತದ ನಂತರ ಬೊಲೆರೊ ಚಾಲಕ ಪರಾರಿ ಆಗಲು ಯತ್ನಿಸಿದ್ದನು. ಈ ವೇಳೆ ಬೊಲೆರೊ ವಾಹನದ ಕನ್ನಡಿ ದೊರೆತ ಹಿನ್ನೆಲೆಯಲ್ಲಿ ಸಾರ್ವ ಜನಿಕರ ಮಾಹಿತಿ ಮೇರೆಗೆ ಬೊಲೆರೊ ಚಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.