ಪೊನ್ನಂಪೇಟೆ: ಕೊಡಗಿನ ನಿಜವಾದ ಸಾಂಸ್ಕೃತಿಕ ಕೇಂದ್ರ ಪೊನ್ನಂ ಪೇಟೆ. ಇಲ್ಲಿ ಅನೇಕ ವರ್ಷಗಳಿಂದ ನಾಟಕ, ಸಂಗೀತ, ಸಂಸ್ಕೃತಿ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಇಲ್ಲಿ ಅನೇಕ ಕಲಾವಿದರು ಹುಟ್ಟಿ ಬಂದಿದ್ದಾರೆ. ಈ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರೆಸುತ್ತಿ ರುವವರು ಕೊಡಗಿನ ರಂಗಕಲಾವಿದ ರಾದ ಅಡ್ಡಂಡಕಾರ್ಯಪ್ಪ ದಂಪತಿಗಳು. ಹೀಗೆ ಪ್ರಶಂಸಿಸಿದವರು ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ.
ಪೊನ್ನಂಪೇಟೆ ರಂಗಭೂಮಿ ಪ್ರತಿಷ್ಠಾನ ರಂಗಭೂಮಿ ವಠಾರದಲ್ಲಿ ನಡೆಸಿದ ವಾರ್ಷಿಕ ಕಾರ್ಯಕ್ರಮ ‘ಮುತ್ತ್ ಕಾವ್ಯ ಲಹರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಕೊಡಗಿನ ಸಾಹಿತಿ ಡಾ.ಐ.ಮಾ ಮುತ್ತಣ್ಣ ನವರ ಕಾವ್ಯ-ಸಾಹಿತ್ಯವನ್ನು ನೆನೆಪಿಸುವ ಕಾರ್ಯ ಅರ್ಥಪೂರ್ಣವಾಗಿದೆ ಎಂದರು. ಮುತ್ತಣ್ಣ ಅಪ್ಪಚ್ಚಕವಿಯಂತೆ ಒಬ್ಬ ದುರಂತ ಕವಿ, ಆದರೆ ಈ ಕವಿಗೆ ಕೊಡಗಿನಲ್ಲಿ ನಮ್ಮ ಜನ ಆರಾಧಿಸದಿದ್ದರೂ, ಕೊಡಗಿನ ಹೊರಗೆ ಮುತ್ತಣ್ಣರಿಗೆ ಅಪಾರ ಗೌರವವಿತ್ತು. ಅವರ ಸಾಹಿತ್ಯದ ವಿದ್ವತ್ತು ಕನ್ನಡ ನಾಡಿನ ಶ್ರೇಷ್ಠ ಕವಿಗಳಿಗೆ ಅರ್ಥವಾಗಿತ್ತು. ಇದನ್ನು ಕಾರ್ಯಪ್ಪ ಕೊಡಗಿನ ಸಾಹಿತ್ಯಾಭಿಮಾ ನಿಗಳಿಗೆ ಅರ್ಥಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಅತಿಥಿ ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿಯ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ ಮಾತನಾಡಿ, ಸಾಹಿತ್ಯ-ಸಂಸ್ಕೃತಿಯ ಕೆಲಸ ಮಾಡುವುದು, ಅದನ್ನು ನಿರಂತರ ವಾಗಿ ಮುಂದುವರೆಸಿಕೊಂಡು ಹೋಗು ವುದು ಸುಲಭದ ಕೆಲಸವಲ್ಲ, ಇದನ್ನು ಸೃಷ್ಟಿ ತಂಡ, ಅದರ ಇನ್ನೊಂದು ಸಂಸ್ಥೆ ರಂಗಭೂಮಿ ಪ್ರತಿಷ್ಠಾನ ಮಾಡುತ್ತಾ ಬಂದಿದ್ದು, ಕಾರ್ಯಪ್ಪ-ಅನಿತಾ ಈ ನಾಡಿನ ಶ್ರೇಷ್ಠ ಸಾಂಸ್ಕೃತಿಕ ರಾಯಭಾರಿ ಗಳು ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ನಮ್ಮ ನಾಡಿನ ಜನಕ್ಕೆ ಸಾಂಸ್ಕೃತಿಕವಾಗಿ ಶೂನ್ಯರು ಎಂಬ ಅಪ ವಾದ ಬರಬಾರದು, ನಮ್ಮ ನಾಡು ಸಾಂಸ್ಕೃತಿಕ ಬರಡು ಜಾಗ ಎಂದು ಯಾರು ಮೂಗು ಮುರಿಯಬಾರದು. ಅದಕ್ಕಾಗಿ ನಾವು ನಿರಂ ತರ ಶ್ರಮಿಸುತ್ತಿದ್ದೇವೆ. ಈ ನಾಡಿನ ಸಾಹಿತ್ಯ, ರಂಗಭೂಮಿ, ಸಂಗೀ ತದ ಎರಡು ಕಣ್ಣುಗಳು. ಹರದಾಸ ಅಪ್ಪಚ್ಚಕವಿ ಮತ್ತು ಡಾ. ಐ.ಮಾ. ಮುತ್ತಣ್ಣ. ಮುತ್ತಣ್ಣ ಶ್ರೇಷ್ಠರಲ್ಲಿ ಶ್ರೇಷ್ಠ ಸಾಹಿತಿಗಳು ಇವರನ್ನು ಕೊಡಗು ಮರೆ ಯಬಾರದು. ನಮ್ಮ ಸಂಸ್ಥೆ ಪ್ರತೀ ವರ್ಷ ನಡೆಸುವ ಕಾರ್ಯಕ್ರಮ ಸಾಹಿತ್ಯ, ರಂಗ ಭೂಮಿ ಅಭಿರುಚಿ ಹುಟ್ಟಿಸುವ ಉದ್ದೇಶ ಹೊಂದಿದೆ ಎಂದರು. ಸಂಸ್ಕೃತಿ ಚಿಂತಕಿ ಪಾಲಿಬೆಟ್ಟದ ಶ್ರೀಮತಿ ಕುಪ್ಪಂಡ ರೋಶ್ನಿ ಚಿಣ್ಣಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಮುತ್ತಣ್ಣರ ಕಾವ್ಯಗಳನ್ನು ಆಧರಿಸಿದ ‘ಮುತ್ತ್ ಕಾವ್ಯ ಲಹರಿ’ ಎಂಬ ಕಾವ್ಯ-ಸಂಗೀತ ನಿರೂ ಪಣಾ ಕಾರ್ಯಕ್ರಮ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ಭಾವ ಲಹರಿಯಲ್ಲಿ ತೇಲಿಸಿತು. ಗಾನ ಕೋಗಿಲೆ ಚೇಂದಿರ ನಿರ್ಮಲಾ ಬೋಪಣ್ಣ, ಅಡ್ಡಂಡ ಕಾರ್ಯಪ್ಪ, ಮದ್ರಿರ ಸಂಜು, ಆಂಗಿರ ಕುಸುಮ್ ಮಾದಪ್ಪ, ಶ್ರೀನಿವಾಸ್, ಚಂದ್ರು ಈ ಕಾರ್ಯ ಕ್ರಮ ನಡೆಸಿಕೊಟ್ಟರು. ನಿನಾದ ಸಂಸ್ಥೆಯ ವಿದ್ಯಾರ್ಥಿಗಳು ಮುತ್ತಣ್ಣ ರ ಕಾವ್ಯಕ್ಕೆ ನೃತ್ಯ ಮಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ರಂಗಭೂಮಿ ಪ್ರತಿ ಷ್ಠಾನ, ಪೆÇನ್ನಂಪೇಟೆ ಕಾವೇರಿ ಕೊಡವ ಕೂಟದ ಅಣ್ಣಳಮಾಡ ದೇವಯ್ಯ, ಅಪ್ಪೇಂಗಡ ಸೋಮಯ್ಯ, ಕರ್ತಮಾಡ ಕಾರ್ಯಪ್ಪ, ತಾಣಚ್ಚಿರ ಪೂಣಚ್ಚ, ಬಾಚ ಮಾಡ ಚಿಣ್ಣಪ್ಪ ಇವರನ್ನು ಅವರ ಸೇವಾ ಕಾರ್ಯಕ್ಕೆ ಶ್ಲಾಘಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಡ್ಡಂಡ ಅನಿತಾ ಕಾರ್ಯಪ್ಪ ಸ್ವಾಗತಿಸಿ, ನಿರ್ಮಲಾ ಪ್ರಾರ್ಥಿ ಸಿದರು. ಆಂಗಿರ ಕುಸುಮ್ ಕಾರ್ಯ ಕ್ರಮವನ್ನು ನಿರೂಪಿಸಿ, ಕೆ.ಜಿ. ಪದ್ಮನಾಭ ವಂದಿಸಿದರು.