3 ದಶಕಗಳಿಂದ ಮುಚ್ಚಿಹೋಗಿದ್ದ ಐತಿಹಾಸಿಕ ಪಯ್ಯಡ ಮಂದ್ ಪುನರಾರಂಭ
ಕೊಡಗು

3 ದಶಕಗಳಿಂದ ಮುಚ್ಚಿಹೋಗಿದ್ದ ಐತಿಹಾಸಿಕ ಪಯ್ಯಡ ಮಂದ್ ಪುನರಾರಂಭ

November 28, 2018

ಪೊನ್ನಂಪೇಟೆ: ಸುಮಾರು 30 ವರ್ಷಗಳಿಂದ ಕಾರಣಾಂತರದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಹೈಸೊಡ್ಲೂರ್ ಗ್ರಾಮದ ಐತಿಹಾಸಿಕ ಪಯ್ಯಡ ಮಂದ್ ಸಂಭ್ರಮ-ಸಡಗರದೊಂದಿಗೆ ಪುನರಾರಂಭವಾಗಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ ಮತ್ತು ಹೈಸೊಡ್ಲೂರ್ ಗ್ರಾಮದ ಶ್ರೀ ಮಹಾದೇವ ದೇವಸ್ಥಾನ ಸಮಿತಿಯೊಂದಿಗೆ ಗ್ರಾಮದ ತಕ್ಕ ಮುಖ್ಯಸ್ಥರು ಸೇರಿ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು ಮಂದ್‍ನ ಸುತ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಆಡುವ ಮೂಲಕ ಮಂದ್ ಪುನ ರಾರಂಭ ಮಾಡಿದರು.

ಈ ಸಂದರ್ಭ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಊರು ತಕ್ಕ ಬಾನಂಗಡ ಎ. ರಾಜಶೇಖರ್, ಕಾರಣಾಂತರಗಳಿಂದ ಸುಮಾರು 3 ದಶಕ ದಿಂದ ಮುಚ್ಚಿ ಹೋಗಿದ್ದ ಪಯ್ಯಡ ಮಂದ್ ಇದೀಗ ಕೊಡವ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪುನರಾ ರಂಭಗೊಂಡಿರುವುದು ತುಂಬಾ ಸಂತಸದ ವಿಷಯ. ಮುಂದೆಯೂ ಈ ಮಂದ್ ಅನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಗ್ರಾಮದ ಪ್ರತಿಯೊ ಬ್ಬರದ್ದಾಗಿದೆ. ಮುಂದಿನ ವರ್ಷದಿಂದ ಮಂದ್‍ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಾಗಬೇಕು. ಅದಕ್ಕಾಗಿ ಮುಂದಿನ ಪುತ್ತರಿ ಊರ್ ಮಂದ್ ಸಂದರ್ಭ ಮಹಿಳೆಯರ ಉಮ್ಮ ತಾಟ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸ ಬೇಕಾಗಿದೆ ಎಂದರು.

ಹೈಸೊಡ್ಲೂರ್ ಮಹಾದೇವ ದೇವ ಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಯ ವಂಡ ಜಿ. ಮೋಹನ್ ಮಾತನಾಡಿ, ಕೊಡವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಮಂದ್‍ಗಳು ತನ್ನ ಗತವೈ ಭವ ಕಳೆದುಕೊಳ್ಳಲು ಕೊಡವರ ಜನ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿರು ವುದು ಕಾರಣವಾಗಿದೆ. ಕೊಡವರ ವಿಶಿಷ್ಟ ಸಂಸ್ಕೃತಿ ಉಳಿಸಿಕೊಳ್ಳಲು ವಿಶೇಷ ಗಮನ ಹರಿಸಬೇಕಾಗಿದೆ. 100 ವರ್ಷಕ್ಕೆ ಹಿಂದೆ ಕೊಡವರ ಸ್ಥಿತಿಗತಿ ಹಾಗೂ ಈಗಿನ ಸ್ಥಿತಿಗತಿ ಬಗ್ಗೆ ಕೊಡವ ಸಾಹಿತ್ಯ ಅಕಾ ಡೆಮಿ ಅಧ್ಯಯನದ ದಾಖಲೆ ಮಾಡಿ, ಸರಕಾರದ ಮಟ್ಟದಿಂದ ಕೊಡವ ಸಮು ದಾಯದ ರಕ್ಷಣೆಗೆ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾ ಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಮುಚ್ಚಿ ಹೋಗಿದ್ದ ಈ ಮಂದ್ ತೆರೆಞ ಯುವ ಸುಯೋಗ ನನಗೆ ದೊರೆತದ್ದು ಸಂತಸವಾಗಿದೆ. ಪ್ರಯತ್ನ ಪಡದೇ ಏನು ಸಾಧನೆ ಸಾಧ್ಯವಿಲ್ಲ. ಮಂದ್‍ಗಳ ಮಹತ್ವ ಮತ್ತು ಕೊಡವ ಸಂಸ್ಕೃತಿ ಬಗ್ಗೆ ಕಿರಿಯ ರಲ್ಲಿ ಅರಿವು-ಅಭಿಮಾನ ಮೂಡಿಸುವ ಕೆಲಸ ಹಿರಿಯರಿಂದ ಆಗಬೇಕಾಗಿದೆ. ಇಂದು ತೆರೆದಿರುವ ಮಂದ್ ಮುಂದೆ ಚೆನ್ನಾಗಿ ನಡೆಯಬೇಕು. ಮಂದ್‍ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತ ಅದರ ಜೀವಂತಿಕೆ ಕಾಪಾಡಿಕೊಳ್ಳಬೇಕು. ಹಾಗೆಯೇ ಮತ್ತೊಂದು ಮಂದ್, ತೂಚಮ ಕೇರಿಯಲ್ಲಿ ಹಲವು ವರ್ಷದಿಂದ ಮುಚ್ಚಿ ಹೋಗಿರುವುದನ್ನು ತೆರೆಯಲು ಗ್ರಾಮ ಸ್ಥರು ಆಸಕ್ತಿ ತಳೆದಿರುವುದು ನೋಡಿದರೆ ಇಂದಿನ ಯುವ ಪೀಳಿಗೆಗೆ ಮತ್ತು ಜನ ರಿಗೆ ಮಂದ್‍ನ ಮಹತ್ವ ಅರಿವು ಮೂಡು ತ್ತಿದೆ ಅನಿಸುತ್ತಿದೆ ಎಂದರು.

ಈ ಸಂದರ್ಭ ಪಯ್ಯಡ ಮಂದ್ ತಂಡ ಮತ್ತು ಹುದಿಕೇರಿ ಶ್ರೀ ಮಹಾದೇವ ಯುವಕ ಸಂಘ ತಂಡದಿಂದ ಪುತ್ತರಿ ಕೋಲಾಟ್, ಪರೆಯಕಳಿ ಪ್ರದರ್ಶನ ನಡೆಯಿತು. ಪಾರುವಂಗಡ ವನಜಾ ಸುರೇಶ್ ಪ್ರಾರ್ಥಿಸಿ, ಶ್ರೀ ಮಹಾದೇವ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಮಂಡಂ ಗಡ ಅಶೋಕ್, ಅಕಾಡೆಮಿ ಸದಸ್ಯರು ಗಳಾದ ಚಂಗುಲಂಡ ಸೂರಜ್ ಸ್ವಾಗತಿಸಿ, ಅಂಗೀರ ಕುಸುಮ್ ನಿರೂಪಿಸಿ, ಬೊಳ್ಳ ಜಿರ ಅಯ್ಯಪ್ಪ ವಂದಿಸಿದರು.

ಮಹಿಳೆಯರು, ಮಕ್ಕಳು, ಹಿರಿಯರು ಸಾಮೂಹಿಕವಾಗಿ ವಾಲಗತಾಟ್‍ಗೆ ಹೆಜ್ಜೆ ಹಾಕುವ ಮೂಲಕ ಪುನರುಜ್ಜೀವನ ಕಂಡ ಪಯ್ಯಡ ಮಂದ್ ಕಾರ್ಯ ಕ್ರಮದಲ್ಲಿ ಸಂಭ್ರಮಿಸಿದರು.

Translate »