ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕೊಡಗು

ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

October 22, 2018

ಮಡಿಕೇರಿ:  ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ನಿವೃತ್ತ ಪೊಲೀಸ್ ಅಧೀಕ್ಷ ಕರ ಪರವಾಗಿ ಅಪ್ಪಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಸುಂದರ ರಾಜ್, ಉಪ ವಿಭಾಗಾಧಿಕಾರಿ ಟಿ.ಜವರೇ ಗೌಡ, ಪೊಲೀಸ್ ನಿರೀಕ್ಷಕ ಮೇದಪ್ಪ, ಜಿಲ್ಲಾಸಶಸ್ತ್ರ ಪಡೆಯ ತಿಮ್ಮಪ್ಪಗೌಡ, ಇನ್ಸ್‍ಪೆಕ್ಟರ್‍ಗಳ ಪರವಾಗಿ ಭರತ್, ಮಾಜಿ ಸೈನಿಕರ ಪರವಾಗಿ ಮೇಜರ್(ನಿವೃತ್ತ) ಚಿಂಗಪ್ಪ, ಪಿಎಸ್‍ಐಗಳ ಪರವಾಗಿ ಷಣ್ಮುಗ, ನಗರಸಭೆ ಪರವಾಗಿ ಶ್ರೀಮತಿ ಬಂಗೇರಾ, ಮಾಧ್ಯಮಗಳ ಪರವಾಗಿ ಸವಿತಾ ರೈ, ಮಹಿಳಾ ಪೊಲೀಸರ ಪರವಾಗಿ ಅಚ್ಚಮ್ಮ, ಪೊಲೀಸರ ಪರವಾಗಿ ಮಹದೇವ, ಸಹಾಯಕ ಮುಖ್ಯ ಪೇದೆಗಳ ಪರವಾಗಿ ಅಶೋಕ, ನಿವೃತ್ತ ಮಹಿಳಾ ಪೊಲೀಸರ ಪರವಾಗಿ ಪಾರ್ವತಿ, ನಿವೃತ್ತ ಪೊಲೀಸರ ಪರವಾಗಿ ಕಾವೇರಪ್ಪ, ಇತರರು ಪೊಲೀಸ್ ಹುತಾತ್ಮರ ಪ್ರತಿಮೆಗೆ ಹೂಗುಚ್ಚ ಅರ್ಪಿಸಿ ಗೌರವ ನಮನ ಸಮರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಸಮಾಜದಲ್ಲಿ ಶಾಂತಿಗಾಗಿ ಪೊಲೀಸರು ದಿನದ 24 ಗಂಟೆಯೂ ಜಾಗೃತರಾಗಿ ಕೆಲಸ ನಿರ್ವಹಿಸುತ್ತಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ದೇಶ ದಲ್ಲಿ ನಾಗರಿಕರ ರಕ್ಷಣೆ ಮತ್ತು ಶಾಂತಿ ನೆಲೆಸುವಲ್ಲಿ ಅವರ ಪಾತ್ರ ಮಹತ್ತರ ಎಂದು ಹೇಳಿದರು.

ಪೊಲೀಸರು ತಮ್ಮ ಆತ್ಮ ರಕ್ಷಣೆಯನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾ ಗುತ್ತಾರೆ. ಪೊಲೀಸರ ಸೇವೆ ಸದಾ ಸ್ಮರ ಣೀಯ. ಕಠಿಣ ಸಂದರ್ಭದಲ್ಲಿ ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸುವಲ್ಲಿ ಪೊಲೀಸರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೊಲೀಸರು ಶಾಂತಿ ಸುವ್ಯವಸ್ಥೆಗಾಗಿ ಸದಾ ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುತ್ತಾರೆ. ರಾಷ್ಟ್ರದ ಗಡಿ ಭಾಗದಲ್ಲಿ ಸೈನಿಕರು ಸದಾ ಕರ್ತವ್ಯ ನಿರ್ವಹಿಸುವಂತೆ, ದೇಶದ ಒಳಭಾಗದಲ್ಲಿ ಪೊಲೀಸರು ನಾಗರಿಕ ರಕ್ಷಣೆಗೆ ಶ್ರಮಿಸುತ್ತಾರೆ ಎಂದರು.

ಪೊಲೀಸರು ಯಾವುದೇ ರೀತಿಯ ಮಾನ ಸಿಕ ಒತ್ತಡಗಳಿಗೆ ತುತ್ತಾಗದೆ, ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಕೆಲಸ ದಲ್ಲಿ ನಿಷ್ಠೆ ತೋರಿಸಿದ್ದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಕಾಪಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ನುಡಿದರು.

ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ವಿವರ ವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಓದಿದರು.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ದೇಶ ಹಾಗೂ ಸಮಾಜದ ರಕ್ಷಣೆ ಸಂದರ್ಭದಲ್ಲಿ ದೇಶದಲ್ಲಿ 414 ಮಂದಿ ಮತ್ತು ರಾಜ್ಯದಲ್ಲಿ 15 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾ ಯಿತು. ಪೊಲೀಸ್ ಮುಖ್ಯ ಪೇದೆ ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡ ದವರು ರಾಷ್ಟ್ರಗೀತೆ ಹಾಡಿದರು. ಅಂತೋಣಿ ಡಿಸೋಜ ನಿರೂಪಿಸಿದರು.

Translate »