ಪಪಂ ಚುನಾವಣೆ; ಜೆಡಿಎಸ್‍ನಿಂದ ಪ್ರಚಾರಕ್ಕೆ ಚಾಲನೆ
ಕೊಡಗು

ಪಪಂ ಚುನಾವಣೆ; ಜೆಡಿಎಸ್‍ನಿಂದ ಪ್ರಚಾರಕ್ಕೆ ಚಾಲನೆ

October 22, 2018

ವಿರಾಜಪೇಟೆ: ಜನಪ್ರತಿನಿಧಿ ಗಳು ಜನಪರ ಅಭಿವೃದ್ಧಿ ಕಾಮಗಾರಿ ಗಳಿಗೆ ಒತ್ತು ನೀಡುವುದರೊಂದಿಗೆ ಜನ ತೆಯ ಅಗತ್ಯ ಬೇಡಿಕೆಗಳನ್ನು ಈಡೇರಿ ಸಲು ಜಾತ್ಯಾತೀತ ಮನೋಭಾವನೆವುಳ್ಳ, ಜನತೆಯ ಸಮಸ್ಯೆಗಳಿಗೆ ನೇರವಾಗಿ ನಿರಂ ತರ ಸ್ಪಂದಿಸುವ ಅಭ್ಯರ್ಥಿಗಳನ್ನು ಮತ ದಾರರು ಬೆಂಬಲಿಸುವಂತಾಗಬೇಕು ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಪಟ್ಟಣದ ಹದಿನೈದನೇ ವಾರ್ಡ್ ಗಾಂಧಿ ನಗರದಿಂದ ಪಟ್ಟಣ ಪಂಚಾಯಿತಿ ಚುನಾ ವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿ.ಎ.ಮಂಜುನಾಥ್ ಅವರ ಪರ ಚುನಾ ವಣಾ ಪ್ರಚಾರಕ್ಕೆ ಚಾಲನೆ ನೀಡಿದ ಸಂಕೇತ್ ಪೂವಯ್ಯ ಮಾತನಾಡುತ್ತ, ಪಟ್ಟಣ ಪಂಚಾಯಿತಿಯ ಮೂಲಭೂತ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸಲು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರಾಮಾ ಣಿಕ ಪ್ರಯತ್ನ ನಡೆಸಬೇಕು. ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಚುನಾ ವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು, ಜಾತ್ಯಾತೀತ ಮನೋಭಾವದ ಸಿದ್ಧಾಂತ ದಲ್ಲೂ ಎರಡು ಪಕ್ಷಗಳ ನಿಲುವು ಒಂದೇ ಆಗಿದೆ. ಮತದಾರರು ಈ ಬಾರಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನೀಡು ತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ಅವಕಾಶ ಕಲ್ಪಿಸುವುದರೊಂದಿಗೆ ಉತ್ತಮ ಆಡಳಿತಕ್ಕೆ ಅನುವು ಮಾಡಿಕೊಡುವ ಮೂಲಕ ಪಕ್ಷವನ್ನು ಬೆಂಬಲಿಸುವಂತೆ ಮತದಾ ರರನ್ನು ಕೋರಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮರಿಯಾ ಸಿಕ್ವೇರಾ, ಪಕ್ಷದ ಅಮ್ಮಂಡ ವಿವೇಕ್, ಚಿಲ್ಲವಂಡ ಗಣಪತಿ, ರಾಖೇಶ್ ಬಿದ್ದಪ್ಪ, ಟಿ.ಎಂ. ಯೋಗೀಶ್ ನಾಯ್ಡು, ನಿತಿನ್, ಶಾಂತ, ಸುಮಿತ್ರ ಮುಂತಾದವರು ಹಾಜರಿದ್ದರು.

Translate »