ಮಡಿಕೇರಿ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಕೊಡಗು ಘಟಕ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ‘ಯಶಸ್ವಿ’ ಹೆಸರಿನಲ್ಲಿ ಹಮ್ಮಿಕೊಂಡಿರುವ ಟೈಲರಿಂಗ್ ಮತ್ತು ಆಹಾರೋತ್ಪನ್ನಗಳ ತಯಾರಿಕೆಯ ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.
ಕಾಲೂರು ಸರ್ಕಾರಿ ಶಾಲೆಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟಿಸಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂತ್ರಸ್ಥ ಗ್ರಾಮಸ್ಥರ ಭವಿಷ್ಯದ ಜೀವನಕ್ಕೆ ನೆರವಾಗಬಲ್ಲ ನಿಟ್ಟಿನಲ್ಲಿ ಇಂಥ ಯೋಜನೆಗಳು ಶ್ಲಾಘನೀಯ. ಕಾಲೂರು ಗ್ರಾಮದ ಮಹಿಳೆಯರು ಮುಂದಿನ ದಿನಗಳಲ್ಲಿ ಉತ್ಪಾದಿಸುವನ ಆಹಾರೋತ್ಪನ್ನಗಳನ್ನು ಜಿಲ್ಲಾಮಟ್ಟದಲ್ಲಿ ಪ್ರವಾಸಿಗರೂ ಸೇರಿದಂತೆ ಸ್ಥಳೀಯರಿಗೆ ಮಾರಾಟ ಮಾಡುವಲ್ಲಿ ಸೂಕ್ತ ನೆರವು ನೀಡಲಾಗುತ್ತದೆ. ಕಾಲೂರು, ದೇವಸ್ತೂರು ಗ್ರಾಮದಲ್ಲಿ ಸೂಕ್ತ ನಿವೇಶನ ದೊರಕಿದ್ದಲ್ಲಿ ಗ್ರಾಮಸ್ಥರ ಬೇಡಿಕೆಯಾಗಿ ರುವ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡು ವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಆಹಾರೋತ್ಪನ್ನ ತರಬೇತಿ ಉದ್ಘಾಟಿಸಿ ಮಾತನಾಡಿ, ಸಂತ್ರಸ್ತರಲ್ಲಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಂಥ ಕೌಶಲ್ಯಾಭಿವೃದ್ದಿ ತರಬೇತಿ ಪ್ರಶಂಸನೀಯ. ಇದು ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆಯಾಗಲಿದೆ ಎಂದರಲ್ಲದೇ, ಸಂತ್ರಸ್ತ ಮಹಿಳೆಯರು ಸಂಕಷ್ಟದಲ್ಲಿದ್ದರೂ ಧೈರ್ಯ ಕಳೆದುಕೊಳ್ಳದೇ ಜೀವನ ನಡೆಸುವಂಥ ಸ್ಥೈರ್ಯವನ್ನು ನೀಡಿದ್ದಾರೆ ಎಂದರು.
ಪ್ರಕೃತಿ ಸೌಂದರ್ಯದ ನಡುವಿನ ಗ್ರಾಮ ಗಳಲ್ಲಿರುವ ಮಹಿಳೆಯರು ಆಡಂಬರ, ವಿಜೃಂಭಣೆಯ ಜೀವನ ಶೈಲಿಯಿಂದ ದೂರ ವಾಗಿ ತಮ್ಮ ನಡುವಿನ ಪ್ರಕೃತಿಯಂತೆಯೇ ಸಹಜ ಸೌಂದರ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂದರು. ಭಾರತೀಯ ವಿದ್ಯಾಭವನ, ಪ್ರಾಜೆಕ್ಟ್ ಕೂರ್ಗ್ ಹಮ್ಮಿಕೊಂಡಿರುವ ಯಶಸ್ವಿ ಯೋಜನೆ ಹೆಸರಿಗೆ ತಕ್ಕಂತೆ ಅರ್ಥ ಪೂರ್ಣವಾಗಲಿ ಎಂದೂ ವೀಣಾ ಅಚ್ಚಯ್ಯ ಹಾರೈಸಿದರು.
ಎಲ್ಲರೂ ಕೊಡಗಿನ ಬಗ್ಗೆ ಅಭಿಮಾನ, ಪ್ರೀತಿ ಹೊಂದಿರುವುದರಿಂದಾಗಿಯೇ ಸಂತ್ರಸ್ತರಿಗೆ ಭಾರೀ ಪ್ರಮಾಣದ ನೆರವು ಬಂದಿದೆ. ಹೀಗಿರುವಾಗ ಬಂದಂಥ ಸಹಾ ಯವನ್ನು ಸಾರ್ಥಕ ರೀತಿಯಲ್ಲಿ ಬಳಸಿ ಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟ ವೀಣಾ ಅಚ್ಚಯ್ಯ, ಕೊಡಗಿನ ಶಾಸಕರೆ ಲ್ಲರೂ ರಾಜಕೀಯ ರಹಿತವಾಗಿ ನವ ಕೊಡಗಿನ ನಿರ್ಮಾಣಕ್ಕೆ ಮುಂದಾಗಲಿ ದ್ದಾರೆ ಎಂದೂ ಆಶಿಸಿದರು.
ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತ ನಾಡಿ, ಮಡಿಕೇರಿಯ ಕೊಡವ ಸಮಾಜ ಸಂಕೀರ್ಣದಲ್ಲಿನ ಅಂಗಡಿಗಳಲ್ಲಿ ಕಾಲೂರು ಗ್ರಾಮಸ್ಥರು ತಯಾರಿಸಿದ ಆಹಾರೋ ತ್ಪನ್ನ, ಉಡುಪುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾಲೂರಿನ ಶ್ರೀ ಅಯ್ಯಪ್ಪ ದೇವಾಲಯ ನಿರ್ಮಾಣಕ್ಕೆ ಭಾರತೀಯ ವಿದ್ಯಾಭವನದಿಂದ ಅಗತ್ಯ ನೆರವು ನೀಡುವುದಾಗಿಯೂ ಪ್ರಕಟಿಸಿ ದರು. ಗ್ರಾಮೀಣ ಜನರ ಸಂಕಷ್ಟ ನಿವಾ ರಣೆಗಾಗಿ ಜನಪ್ರತಿನಿಧಿಗಳು, ವಿವಿಧ ಸಂಘ ಟನೆಗಳನ್ನೊಳಗೊಂಡಂತೆ ಜನಸೇವಾ ಟ್ರಸ್ಟ್‍ನ್ನು ಪ್ರಾರಂಭಿಸಿದ್ದು, ಟ್ರಸ್ಟ್ ಮೂಲಕ ಸಂಗ್ರಹ ವಾಗುವ ಹಣವನ್ನು ನಿರಾಶ್ರಿತರ ಬದುಕು ರೂಪಿಸಲು ವೆಚ್ಚ ಮಾಡಲಾಗುತ್ತದೆ ಎಂದೂ ದೇವಯ್ಯ ಹೇಳಿದರು.
ಡಾ.ಎಂ.ಜಿ.ಪಾಟ್ಕರ್ ಮಾತನಾಡಿ, ಮಾನವರಿಗೆ ಪ್ರಕೃತಿಯ ಅಗತ್ಯವಿದೆಯೇ ವಿನಾ ಪ್ರಕೃತಿಗೆ ಮಾನವನ ಅಗತ್ಯವಿಲ್ಲ. ಹೀಗಾಗಿ, ಪ್ರಕೃತಿಯನ್ನು ರಕ್ಷಿಸುವತ್ತಲೂ ಮಾನವ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಪ್ರೀತಿಯಂತೆ, ಕೋಪ ಕೂಡ ನಿಸರ್ಗಕ್ಕುಂಟು. ಸೂರ್ಯನ ಕಿರಣಗಳು ಎಲ್ಲಾ ಕಡೆಯೂ ಸಮಾನವಾಗಿ ಬೀಳು ವಂತೆ ಪ್ರಕೃತಿ ದೇವನೂ ಕೂಡ ಒಂದೇ ರೀತಿಯಲ್ಲಿ ತನ್ನ ಕರುಣೆ, ಕೋಪ ತೋರಿ ಸುತ್ತಾನೆ ಎಂದು ವಿಶ್ಲೇಷಿಸಿದರು.
ಪ್ರಾಜೆಕ್ಟ್ ಕೂರ್ಗ್ ಸಂಚಾಲಕ, ಭಾರತೀಯ ವಿದ್ಯಾಭವನದ ಕೊಡಗು ಘಟ ಕದ ಕಾರ್ಯದರ್ಶಿ ಬಾಲಾಜಿಕಶ್ಯಪ್ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರಾಜೆಕ್ಟ್ ಕೂರ್ಗ್ ಯೋಜನೆಗೆ ನೆರವು ಲಭಿಸಿದ್ದು, ಕಾಲೂರಿನಲ್ಲಿ ಮಿನಿ ಭಾರತದಂತೆ ಎಲ್ಲಾ ಭಾಗಗಳಿಂದ ಬಂದ ಹೊಲಿಗೆ ಯಂತ್ರಗಳು ಸ್ಥಾಪಿತವಾಗಿದೆ. ಪ್ರಸ್ತುತ 26 ಟೈಲರಿಂಗ್ ಯಂತ್ರಗಳ ಮೂಲಕ ಗ್ರಾಮದ ಮಹಿಳೆಯರಿಗೆ ಟೈಲರಿಂಗ್‍ನಲ್ಲಿ ವಿಭಾಗವಾರು 3 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಅಂತೆಯೇ ಆಹಾರೋ ತ್ಪನ್ನಗಳ ಬಗ್ಗೆ 30 ಮಹಿಳೆಯರಿಗೆ ಪ್ರಥಮ ಹಂತದಲ್ಲಿ ತರಬೇತಿ ನೀಡಿ, ಕೂರ್ಗ್ ಫ್ಲೇವರ್ ಹೆಸರಿನಲ್ಲಿ ಸಂತ್ರಸ್ತ ಮಹಿಳೆ ಯರು ತಯಾರಿಸಿದ ಆಹಾರೋತ್ಪನ್ನ ಗಳನ್ನು ಮಾರುಕಟ್ಟೆಗೆ ಶೀಘ್ರದಲ್ಲಿ ಬಿಡು ಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾಲೂರು ಗ್ರಾಮದ ಹಿರಿಯರಾದ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಪ್ರಾಜೆಕ್ಟ್ ಕೂರ್ಗ್ ಮೂಲಕ ಕಾಲೂರಿನ ಸಂತ್ರಸ್ತರು ಸಾಕಷ್ಟು ಸಹಾಯ ಪಡೆದಿದ್ದು, ಇದೀಗ ವೃತ್ತಿ ಕೌಶಲ್ಯ ಶಿಬಿರಗಳ ಮೂಲಕ ಹೊಸ ವೃತ್ತಿಯನ್ನು ಕಂಡುಕೊಂಡು ಆರ್ಥಿಕ ಚೈತನ್ಯ ಹೊಂದುವಂತಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭ ತರಬೇತುದಾರರಾದ ಕೊಡಗು ಟೈಲರ್ಸ್ ಅಸೋಸಿಯೇಷನ್‍ನ ಮಡಿಕೇರಿ ಘಟಕದ ಉಪಾಧ್ಯಕ್ಷೆ ಅಶ್ರಫು ನ್ನೀಸಾ, ಉಡುಪಿಯ ಹೆಸರಾಂತ ಆಹಾರೋ ತ್ಪನ್ನ ತರಬೇತುದಾರರಾದ ನೀನಾ ಆರ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾಲೂರಿನ ನಿವೃತ್ತ ಯೋಧ 103 ವರ್ಷದ ನಂದಲಪ್ಪಂಡ ಮೇದಪ್ಪ ಅವ ರಿಗೆ ಗಾಲಿಕುರ್ಚಿಯನ್ನು ನೀಡಲಾಯಿತು. ಫಲಾನುಭವಿಗಳಿಗೆ ಜೇನುಪೆಟ್ಟಿಗೆ, ಕುಡಿಯುವ ನೀರಿನ ಸರಬರಾಜು ಪೈಪ್‍ಗಳನ್ನೂ ಪ್ರಾಜೆಕ್ಟ್ ಕೂರ್ಗ್, ಭಾರತೀಯ ವಿದ್ಯಾ ಭವನದ ವತಿಯಿಂದ ವಿತರಿಸಲಾಯಿತು.
ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಎಂ.ಇ. ಚಿಣ್ಣಪ್ಪ, ಪ್ರಾಜೆಕ್ಟ್ ಕೂರ್ಗ್‍ನ ಡಾ. ನಯನಕಶ್ಯಪ್, ಭಾರತೀಯ ವಿದ್ಯಾಭವನದ ಸದಸ್ಯ ಕುಪ್ಪಂಡ ಪ್ರೇಮ್ ನಾಥ್ ವೇದಿಕೆಯಲ್ಲಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ, ಪ್ರಾಜೆಕ್ಟ್ ಕೂರ್ಗ್‍ನ ನಿರ್ದೇಶಕರಾದ ಮಂಡೇಪಂಡ ರತನ್ ಕುಟ್ಟಯ್ಯ, ರಮೇಶ್ ಹೊಳ್ಳ, ಅನಿಲ್ ಎಚ್.ಟಿ, ಕೊಲ್ಯದ ಗಿರೀಶ್, ಮೋಹನ್ ದಾಸ್, ಜಯಂತ್ ರಾವ್, ವೇದಮೂರ್ತಿ, ಶ್ರೀ ಓಂಕಾರೇಶ್ವರ ದೇವಾಲ ಯದ ಅಧ್ಯಕ್ಷ ಜಗದೀಶ್, ವ್ಯವಸ್ಥಾಪಕ ಎಸ್.ಎಸ್.ಸಂಪತ್ ಕುಮಾರ್, ತೆನ್ನೀರ ಮೈನಾ, ಡಾ.ಜಯಲಕ್ಷೀ ಪಾಟ್ಕರ್ ಸೇರಿ ದಂತೆ ಗಣ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.