ನನ್ನ ಸರ್ಕಾರ ಬಂಡೆ; ಖಾಲಿ  ಡಬ್ಬಗಳಿಂದ ಅಲುಗಾಡಿಸಲಾಗದು…!
ಮೈಸೂರು

ನನ್ನ ಸರ್ಕಾರ ಬಂಡೆ; ಖಾಲಿ  ಡಬ್ಬಗಳಿಂದ ಅಲುಗಾಡಿಸಲಾಗದು…!

December 6, 2018

ಬೆಂಗಳೂರು:  ನನ್ನ ಸರ್ಕಾರ ಬಂಡೆ ತರಹ ಭದ್ರವಾಗಿದೆ, ಖಾಲಿ ಡಬ್ಬಗಳು ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಸರ್ಕಾರದ ಅಳಿವು-ಉಳಿವಿನ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ಬಿಜೆಪಿಯವರು ಎಷ್ಟೇ ಸದ್ದು ಮಾಡಿದರೂ ಏನೂ ಪ್ರಯೋಜನವಾಗದು ಎಂದರು. ಇಂತಹ ಹೇಳಿಕೆಗಳು ಪ್ರತಿಕ್ರಿಯೆ ನೀಡಲು ಅರ್ಹವಾದ ವಿಷಯಗಳಿಲ್ಲ, ಕಳೆದ 6 ತಿಂಗಳಿನಿಂದಲೂ ಈ ರೀತಿ ಶಬ್ದ ಮಾಡುತ್ತಲೇ ಇದ್ದಾರೆ.

ಮುಖ್ಯಮಂತ್ರಿ ಅವರ ಹೇಳಿಕೆ ಬೆಂಬಲಿಸಿ ಸಂಪುಟ ಸಹೋದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಬಂಡೆಪ್ಪ ಕಾಶೆಂಪೂರ್, ಮೈತ್ರಿ ಸರ್ಕಾರದ ವಿರುದ್ಧ ಹಲವು ತಂತ್ರಗಳನ್ನು ಬಿಜೆಪಿಯವರು ಮಾಡಿದರು. ಅದರಲ್ಲಿ ವಿಫಲರಾಗಿ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಯಾವ ಭೂಕಂಪವೂ ಆಗಲ್ಲ, ಏನೂ ಆಗಲ್ಲ. 6 ತಿಂಗಳಿಂದ ನಾವು ನೋಡುತ್ತಿದ್ದೇವೆ. ಸರ್ಕಾರ ಸ್ಥಿರವಾಗಿದೆ. ಆರು ತಿಂಗಳಿಂದ ಹುಲಿ ಬಂತು ಹುಲಿ ಕಥೆ ಹೇಳುತ್ತಿದ್ದಾರೆ. ಏನು ಆಗುವುದು ಎಂಬುದನ್ನು ನಾವೂ ನೋಡು ತ್ತೇವೆ. ಇವರ ಈ ಹೇಳಿಕೆಗಳು ನಮ್ಮನ್ನು ಇನ್ನೂ ಉತ್ಸಾಹಿಗಳಾಗಿ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಅವರೇ ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಏನೇ ಆಮಿಷ, ತಂತ್ರಗಳಿಗೆ ನಾವು ಮಣಿಯುವುದಿಲ್ಲ. ಕುಮಾರ ಸ್ವಾಮಿ ಅವರಿಗೆ ಮಾತು ಕೊಟ್ಟಿದ್ದೇವೆ. 5 ವರ್ಷ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

Translate »