ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ
ಮೈಸೂರು

ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ

December 6, 2018

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್ ಕಡೇ ವಾರ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇ ಶಕ ಟಿ.ಎಸ್. ಸುಬ್ರ ಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ವೇಳೆ ಬೊಂಬೆಗಳ ಪ್ರದರ್ಶನ, ಸಾಂಸ್ಕøತಿಕ ಕಾರ್ಯ ಕ್ರಮ ಏರ್ಪಡಿಸಲಾಗುವುದು. ಬೊಂಬೆಗಳ ಪ್ರದರ್ಶನದಲ್ಲಿ ಭಾಗವಹಿಸಲಿಚ್ಛಿಸುವವರು, ಈಗಾಗಲೇ ಬೊಂಬೆ ಪ್ರದರ್ಶನ ಮಾಡಿರುವ ಛಾಯಾಚಿತ್ರ, ವಿಡಿಯೋಗಳನ್ನು ಅರಮನೆ ಮಂಡಳಿ ಕಚೇರಿಗೆ ತಲುಪಿಸಿದಲ್ಲಿ ಬೊಂಬೆಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ತಂಡಗಳ ಪೈಕಿ ಉತ್ತಮ ಪ್ರದರ್ಶನ ನೀಡಿದ ತಂಡ/ವ್ಯಕ್ತಿಗಳಿಗೆ ಮೈಸೂರು ಅರಮನೆ ಮಂಡಳಿ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು. ಆಸಕ್ತರು ಸೂಕ್ತ ಮಾಹಿತಿ ಗಳೊಂದಿಗೆ ಡಿಸೆಂಬರ್ 12 ರೊಳಗಾಗಿ ಅರಮನೆ ಮಂಡಳಿ ಉಪನಿರ್ದೇಶಕರನ್ನು (ಕಚೇರಿ ದೂರವಾಣಿ ಸಂಖ್ಯೆ: 0821-2421051) ಸಂಪರ್ಕಿಸುವಂತೆ ಕೋರಲಾಗಿದೆ.

Translate »