ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ
ಮೈಸೂರು

ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ

December 6, 2018

ಮೈಸೂರು: ಮೈಸೂರು ವಿವಿ ಸಂಜೆ ಕಾಲೇಜು ಹಾಗೂ ವಿವಿ ನೌಕ ರರ ವೇದಿಕೆ ವತಿಯಿಂದ ಮೇಯರ್ ಪುಷ್ಪ ಲತಾ ಜಗನ್ನಾಥ್ ಮತ್ತು ವಿವಿ ಸಂಜೆ ಕಾಲೇಜು ನಿವೃತ್ತ ಪ್ರಾಂಶುಪಾಲರೂ ಆದ ಕರ್ನಾ ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪ್ರೊ.ಚ.ಸರ್ವಮಂಗಳಾ ಅವರನ್ನು ಬುಧವಾರ ಅಭಿನಂದಿಸಲಾಯಿತು.

ಮೈಸೂರು ಮಹಾರಾಜ ಕಾಲೇಜು ಆವ ರಣದಲ್ಲಿರುವ ಸಂಜೆ ಕಾಲೇಜಿನಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕ ರಿಸಿ ಮಾತನಾಡಿದ ಪ್ರೊ.ಚ.ಸರ್ವ ಮಂಗಳಾ, ನಾವಿಂದು ಕೆಟ್ಟ ಕಾಲಘಟ್ಟದಲ್ಲಿ ದ್ದೇವೆ ಎಂಬ ಮಾತು ಆಗಾಗ್ಗೆ ಕೇಳಿ ಬರು ತ್ತಿದೆ. ಸಮಾಜದಲ್ಲಿ ಸಾಮರಸ್ಯದ ಸೇತುವೆ ಗಳು ನಿರ್ಮಾಣವಾಗಬೇಕೇ ಹೊರತು ಪರ ಸ್ಪರ ದೂರವಾಗುವ ಗೋಡೆಗಳು ಸೃಷ್ಟಿ ಯಾಗಬಾರದು. ಅಗ್ಗವಾಗಿ ಸಿಗುವ ಮಾತು ಸಮಾಜದಲ್ಲಿ ಅನೇಕ ಗೊಂದಲ ಸೃಷ್ಟಿ ಸಲು ಬಳಕೆಯಾಗುತ್ತಿದೆ. ಮಾತಿಗೆ ತೆರಿಗೆ ವಿಧಿಸುವ ಕೆಲಸ ಆಗಬೇಕು. ಆಗಲಾದರೂ ತೂಕವಾಗಿ ಮಾತನಾಡುವ ಪ್ರವೃತ್ತಿ ಬೆಳೆಯ ಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಶಿಕ್ಷಕರನ್ನು ಮೌಲ್ಯಮಾಪನ ಮಾಡಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ನನ್ನ 4 ದಶಕಗಳ ಸೇವೆಯಲ್ಲಿ ಇದನ್ನು ಕಂಡು ಕೊಂಡಿದ್ದೇನೆ. ಮಹಿಳಾಪರ ದನಿ ಎತ್ತುವ ತುಡಿತ ನನ್ನಲ್ಲಿ ಸದಾ ಜಾಗೃತವಾಗಿ ಇರು ತ್ತದೆ. ರಾಜ್ಯೋತ್ಸವ ಪ್ರಶಸ್ತಿ ಬರುವ ನಿರೀಕ್ಷೆ ಇರಲಿಲ್ಲ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತ ನಾಡಿ, ನಾನೊಬ್ಬ ಗೃಹಿಣಿಯಾಗಿ, ಪದವಿ ಪಡೆದು, ಎಲ್‍ಎಲ್‍ಬಿ ಮಾಡಿ, ಇಂದು ಮೇಯರ್ ಸ್ಥಾನ ಅಲಂಕರಿಸಿದ್ದೇನೆ. ಒಬ್ಬ ಮಹಿಳೆ ಸಾಧಿಸಬಹುದು ಎನ್ನಲು ನಾನೇ ನಿದರ್ಶನ. ಗೃಹಿಣಿ ಹಾಗೂ ಉದ್ಯೋಗಸ್ಥ ಮಹಿಳೆ ಯರು ವಿದ್ಯಾಭ್ಯಾಸ ಮುಂದುವರೆಸು ವುದು ಸುಲಭ ಸಾಧ್ಯವಲ್ಲ. ಅವರ ಪರಿಶ್ರಮ ನನಗೆ ಅರ್ಥವಾಗುತ್ತದೆ. ನಾನೂ ಸಂಜೆ ಕಾಲೇ ಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾಗಿ ತಮ್ಮ ಕಾಲೇಜು ದಿನಗಳನ್ನು ನೆನೆದುಕೊಂಡರು.

ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋ ಧನಾಲಯ ನಿರ್ದೇಶಕ ಪ್ರೊ.ಎಸ್.ಶಿವ ರಾಜಪ್ಪ ಮಾತನಾಡಿ, ಸಂಜೆ ಕಾಲೇಜು ಎಂದರೆ ತೆರೆಮರೆಯಲ್ಲಿ ಕತ್ತಲಲ್ಲಿ ನಡೆ ಯುವ ಕಾಲೇಜು ಎನ್ನುವಂತಿತ್ತು. ಈಗ ಅದು ಬೆಳಕಿಗೆ ಬಂದಿದೆ. ಅದಕ್ಕೆ ಸರ್ವ ಮಂಗಳಾ ಅವರ ಕೊಡುಗೆಯೂ ಸಾಕಷ್ಟಿದೆ. ಸರ್ವಮಂಗಳಾ ಅವರು ಮಹಿಳಾಪರ ಚಿಂತನೆ, ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಹಾಗೂ ಮೈಸೂರು ವಿವಿ ನೌಕ ರರ ಸಂಘದ ಉಪಾಧ್ಯಕ್ಷ ಚೆನ್ನಬಸಪ್ಪ ಅವ ರನ್ನೂ ಸನ್ಮಾನಿಸಲಾಯಿತು. ಮೈಸೂರು ವಿವಿ ತೋಟಗಾರಿಕೆ ವಿಭಾಗದ ನಿರ್ದೇಶಕ ಮುಜಾ ಫರ್, ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ಆಂಜನೇಯ ಮತ್ತಿತರರಿದ್ದರು.

Translate »