ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ
ಮೈಸೂರು

ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ

December 6, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ ಆಯೋ ಜಿಸಿದ್ದ ಮೈಬಿಲ್ಡ್-18 ಪ್ರದರ್ಶನಕ್ಕೆ ಚಾರ್ಟೆಡ್ ಹೌಸಿಂಗ್ ಪ್ರೈ (ಲಿ) ವ್ಯವ ಸ್ಥಾಪಕ ನಿರ್ದೇಶಕ ಬಾಲಕೃಷ್ಣ ಹೆಗ್ಡೆ ಬುಧವಾರ ಚಾಲನೆ ನೀಡಿದರು.
ಮೈಸೂರು ವಿವಿ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಐ ಮೈಸೂರು ಘಟ ಕದ ವತಿಯಿಂದ ಇಂದಿನಿಂದ ಡಿ.10 ರವ ರೆಗೆ ನಡೆಯುವ ಮೈಬಿಲ್ಡ್-18 ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು.

ಒಂದು ಸಂಘಟನೆ ಯಶಸ್ವಿಯಾಗಿ ನಡೆ ಯಬೇಕಾದರೆ, ಆ ಸಂಘಟನೆಯ ಮಹಿಳಾ ಮತ್ತು ಯುವ ಘಟಕ ಬಹಳ ಉತ್ಸಾಹ ದಿಂದ ಕೆಲಸ ಮಾಡಬೇಕು. ಅದರಲ್ಲಿ ಮಹಿಳಾ ಘಟಕ ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ, ಆ ಸಂಘಟನೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಅಭಿಪ್ರಾಯಪಟ್ಟರು.

ಬಿಎಐ ಮೈಸೂರು ಘಟಕವು, ಮೈಬಿಲ್ಡ್ ಕಾರ್ಯಕ್ರಮದ ಮೂಲಕ ಮೈಸೂರಿಗರಿಗೆ ವಿನೂತನ ತಂತ್ರಾಂಶಗಳನ್ನು ಕಟ್ಟಡ ನಿರ್ಮಾಣ ವಲಯಕ್ಕೆ ಪರಿಚಯಿಸುತ್ತಿದೆ. ಈ ಪ್ರದರ್ಶನದಲ್ಲಿ ಎಲ್ಲಾ ಬಗೆಯ ತಂತ್ರ ಜ್ಞಾನವನ್ನು ಒಂದೇ ಸೂರಿನಡಿ ಪರಿ ಚಯಿಸಲಾಗುತ್ತಿದೆ. ಅಲ್ಲದೆ, ನೂತನ ಮನೆ ನಿರ್ಮಾಣ ಮಾಡುವವರಿಗೆ ಸುವರ್ಣಾ ವಕಾಶ ಕಲ್ಪಿಸುತ್ತಿರುವುದು ಉತ್ತಮ ಸಂಗತಿ ಎಂದರು.

ಕಟ್ಟಡ ನಿರ್ಮಾಣ, ಬೃಹತ್ ಸೇತುವೆ ನಿರ್ಮಾಣ, ನಗರದಲ್ಲಿ ಬೃಹತ್ ಕಟ್ಟಡ ಗಳ ವಿನ್ಯಾಸ ಸೇರಿದಂತೆ ನಗರದ ಸೌಂದರ್ಯ ಹೆಚ್ಚಿಸಲು ಇಂಜಿನಿಯರಿಂಗ್ ಮತ್ತು ಡೆವ ಲಪರ್ಸ್ ವಲಯದಲ್ಲಿ ಶ್ರಮಿಸುತ್ತದೆ. ಇದ ರಿಂದ ಆ ನಗರದ ಆರ್ಥಿಕ ವೃದ್ದಿಗೂ ಸಹಕಾರಿಯಾಗಲಿದೆ ಎಂದರು.

ಈ ಪ್ರದರ್ಶನದಲ್ಲಿ ವಿವಿಧ ಬಡಾ ವಣೆಗಳ ವಿವರ, ತಂತ್ರಾಂಶಗಳ ಮಳಿಗೆ ಗಳು ಮನೆ ನೀರು ಕೊಯ್ಲು, ಮನೆ ವಾಸ್ತು ಜೋಡಣೆ, ಬಗೆಬಗೆಯ ಪೀಠೋಪ ಕರಣ ಸೇರಿದಂತೆ ಇತರೆ ಸಾಮಗ್ರಿಗಳ ವಿವರಗಳನ್ನು ಈ ಪದರ್ಶನದಲ್ಲಿ ಕಾಣ ಬಹುದು. ಈ ಪ್ರದರ್ಶನವು ಇಂದಿನಿಂದ ಡಿ.10ರವರೆಗೆ ನಡೆಯಲಿದ್ದು, ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಗ್ರಾಹಕರ ವೀಕ್ಷ ಣೆಗೆ ಲಭ್ಯವಿದೆ. ಅಲ್ಲದೆ, ಪ್ರದರ್ಶನ ಪ್ರವೇಶಾತಿಗೆ 20 ರೂ. ನಿಗದಿಪಡಿ ಸಿದ್ದು,161 ಮಳಿಗೆಗಳಲ್ಲಿ ಕಟ್ಟಡ ನಿರ್ಮಾಣ ವಲಯದ ಸಾಮಗ್ರಿಗಳು ಪ್ರದರ್ಶನ ಲಭ್ಯವಿದೆ ಎಂದು ಆಯೋಜಕರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ವೇದಿಕೆಯಲ್ಲಿ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸದಸ್ಯ ಎ. ಆರ್.ರವೀಂದ್ರಭಟ್, ಬಿಎಐ ಮೈಸೂರು ಘಟಕದ ಅಧ್ಯಕ್ಷ ಕೆ.ಸುಬ್ರಹ್ಮಣ್ಯರಾವ್, ಕಾರ್ಯದರ್ಶಿ ಕೆ.ಅಜಿತ್‍ನಾರಾಯಣ್, ಮೈಬಿಲ್ಡ್ -18 ಛೇರ್ಮನ್ ಕೆ.ಎಂ. ರಘುನಾಥ್, ಕಾರ್ಯದರ್ಶಿ ಪಿ.ಪುಟ್ಟ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Translate »