ಮೈಸೂರಿನಲ್ಲಿ ಭಾರತೀಯ ಭಾಷಾ ಸಂಘದ  ಅಂತರರಾಷ್ಟ್ರೀಯ ಸಮ್ಮೇಳನ ಆರಂಭ
ಮೈಸೂರು

ಮೈಸೂರಿನಲ್ಲಿ ಭಾರತೀಯ ಭಾಷಾ ಸಂಘದ ಅಂತರರಾಷ್ಟ್ರೀಯ ಸಮ್ಮೇಳನ ಆರಂಭ

December 6, 2018

ಮೈಸೂರು: ವಿವಿಧ ಭಾಷೆ ಗಳಿಗೆ ಸಂಬಂಧಿಸಿದಂತೆ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ವತಿಯಿಂದ ಸಿದ್ಧ ಪಡಿಸಿರುವ ಪಠ್ಯ, ವಾಕ್ ಹಾಗೂ ಸಂಜ್ಞೆ ಗಳ ದತ್ತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಐಐಎಲ್ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಹೇಳಿದರು.

ಭಾರತೀಯ ಭಾಷಾ ಸಂಸ್ಥಾನದಲ್ಲಿ ಡಿ. 7ರವರೆಗೆ ಪುಣೆಯ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾದ (ಎಲ್‍ಎಸ್‍ಐ) 40ನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿ ಸಿದ್ದು, ಬುಧವಾರ ಹಮ್ಮಿಕೊಂಡಿದ್ದ ಸಮ್ಮೇ ಳನದ ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಇಂತಹ ದತ್ತಾಂಶ (ವಿವಿಧ ಭಾಷೆಗಳಿಗೆ ಸಂಬಂಧಿ ಸಿದ ಕಾರ್ಪಸ್) ಅಭಿವೃದ್ಧಿಪಡಿಸಿರುವುದು ಭಾರತದಲ್ಲಿ ಇದೇ ಮೊದಲು. ಮುಂದಿನ ತಿಂಗಳು ಅಥವಾ ಅದಕ್ಕೂ ಮೊದಲೇ ಪ್ರಧಾನ ಮಂತ್ರಿಗಳು ಇಲ್ಲವೇ ಎಂಹೆಚ್‍ಆರ್‍ಡಿ ಸಚಿವ ರಿಂದ ದತ್ತಾಂಶ ಲೋಕಾರ್ಪಣೆ ಮಾಡಿ ಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ರೀತಿಯ ಸಮ್ಮೇಳನಗಳು ವಿಚಾರ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಲಿದೆ. ಸಿಐಐಎಲ್ ಸುವರ್ಣ ಮಹೋತ್ಸವ ಆಚ ರಿಸಿಕೊಳ್ಳುತ್ತಿದ್ದು, ಇದರ ನಿಮಿತ್ತ 11 ಪುಸ್ತಕ ಗಳನ್ನು ಬಿಡುಗಡೆ ಮಾಡಲಾಗಿದೆ. 50 ಸಂಶೋಧನಾ ಲೇಖನಗಳ ಸಂಚಿಕೆ ಹೊರ ತರಲು ಉದ್ದೇಶಿಸಲಾಗಿದೆ. ಸಿಐಐಎಲ್‍ನಲ್ಲಿ ಈಗಾಗಲೇ `ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಕಾರ್ಯ ನಿರ್ವಹಣೆ ಮಾಡುತ್ತಿದೆ. ಜೊತೆಗೆ ಕೆಲ ದಿನಗಳ ಹಿಂದೆ ಯಷ್ಟೇ ಸಂಸ್ಥೆಯಲ್ಲಿ `ಶಾಸ್ತ್ರೀಯ ತೆಲುಗು ಅತ್ಯುನ್ನತ ಅಧ್ಯಯನ ಕೇಂದ್ರ’ ಕಾರ್ಯಾ ರಂಭ ಮಾಡಿತು ಎಂದು ಹೇಳಿದರು.

ಶೀಘ್ರದಲ್ಲಿ `ಶಾಸ್ತ್ರೀಯ ಒರಿಯಾ ಅತ್ಯು ನ್ನತ ಅಧ್ಯಯನ ಕೇಂದ್ರ’ ಭುವನೇಶ್ವರದಲ್ಲಿ ಆರಂಭಗೊಳ್ಳಲಿದೆ. ಜೊತೆಗೆ ಸಿಐಐಎಲ್ ಸಂಸ್ಥೆ ಮೂಲಕ `ಶಾಸ್ತ್ರೀಯ ಮಲಯಾಳಂ ಅತ್ಯುನ್ನತ ಅಧ್ಯಯನ ಕೇಂದ್ರ’ ತೆರೆಯಲು ಕೇರಳ ಸರ್ಕಾರ ಉತ್ಸುಕತೆ ತೋರಿದೆ. ಇದಕ್ಕೆ ಅಗತ್ಯ ಸಹಕಾರ ನೀಡಲು ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯವೂ ಮುಂದೆ ಬಂದಿದೆ ಎಂದು ತಿಳಿಸಿದರು.
ಭಾಷಾ ಶಿಕ್ಷಣ ಭಾರತದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದವರು ಹೆಚ್ಚು ಪ್ರಮಾಣದಲ್ಲಿ ಹೊರಹೊಮ್ಮುತ್ತಿದ್ದಾರೆಯೇ ಹೊರತು ಅವ ರಲ್ಲಿ ತಾವು ಅಧ್ಯಯನ ನಡೆಸಿದ ಭಾಷೆಯ ಬಗೆಗೆ ಆಳವಾದ ಜ್ಞಾನ ಕಂಡುಬರುತ್ತಿಲ್ಲ. ಭಾರತೀಯ ಭಾಷಾ ಸಂಸ್ಥಾನ ರೂಪಿಸಿ ರುವ ಪಠ್ಯವನ್ನಾದರೂ ಪಠ್ಯಕ್ರಮದಲ್ಲಿ ಅಳ ವಡಿಸಿ ಮಕ್ಕಳನ್ನು e್ಞÁನವಂತರನ್ನಾಗಿ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.

ಹೈದರಾಬಾದಿನ ಇಎಫ್‍ಎಲ್ ವಿಶ್ವವಿದ್ಯಾ ನಿಲಯದ ಭಾಷಾಶಾಸ್ತ್ರ ನಿವೃತ್ತ ಪ್ರಾಧ್ಯಾ ಪಕ ಪ್ರೊ.ಕೆ.ಎ.ಜಯಶೀಲನ್ ಮಾತ ನಾಡಿ, `ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ’ ವತಿಯಿಂದ ಭಾಷಾಶಾಸ್ತ್ರಕ್ಕೆ ಸಂಬಂ ಧಿಸಿದಂತೆ ಪರಿಣಾಮಕಾರಿ ಕಾರ್ಯಕ್ರಮ ಗಳನ್ನು ನಡೆಸುತ್ತ ಬಂದಿದೆ. 15 ದಿನಗಳ ಕಾಲ ಭಾಷಾ ಬೋಧನಾ ವಿಧಾನ, ಭಾಷಾ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ವೈವಿಧ್ಯ ಮಯ ಕಾರ್ಯಕ್ರಮ ರೂಪಿಸುವ ಪರಿಪಾಠ ಹೊಂದಿದೆ. ಇದರಿಂದ ಭಾಷಾಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನಾ ಚಟುವಟಿಕೆಗಳು ನಡೆಯುವಂತಾಗಿದ್ದು, ಅದೇ ಮಾದರಿ ಯಲ್ಲಿ ಸಿಐಐಎಲ್, ಎಲ್‍ಎಸ್‍ಐ ಸಹ ಪರಿ ಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸ ಬೇಕು ಎಂದು ಸಲಹೆ ನೀಡಿದರು.

ಮೈಸೂರು ಆವಿಷ್ಕಾರಗಳ ತಾಣ: ಇದಕ್ಕೂ ಮುನ್ನ ಉದ್ಘಾಟನೆ ನೆರವೇರಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮಾತನಾಡಿ, ಮೈಸೂರು ನಾನಾ ವಿಷಯ ಗಳಿಗೆ ಸಂಬಂಧಿಸಿದಂತೆ ಸಂಶೋಧನಾ ತಾಣವಾಗಿದೆ. ಹೀಗಾಗಿ ಇದೊಂದು ಜ್ಞಾನದ ಶಿಖರವಾಗಿದೆ. e್ಞÁನ ಪಡೆಯಲು ಭಾಷೆ ಪ್ರಮುಖ ಸಾಧನವಾಗಿದೆ. ಪ್ರಸ್ತುತ ಭಾಷೆ ಕಲಿಕೆ ಹಾಗೂ ಅರ್ಥೈಸಿಕೊಳ್ಳುವಿಕೆಯಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಸಾಧನವಾಗಿ ಬಳಕೆಯಾಗುತ್ತಿದೆ. ಭಾರತೀಯ ಭಾಷಾ ಸಂಸ್ಥಾನ ಸೇರಿದಂತೆ ಅನೇಕ ಸಂಸ್ಥೆಗಳು e್ಞÁನ ಸಂಶೋಧನೆಯಲ್ಲಿ ತೊಡಗಿವೆ ಎಂದು ತಿಳಿಸಿದರು.

ಇದೇ ವೇಳೆ ಗಾಂಧೀಜಿ ರಚನೆಯ `ಹಿಂದ್ ಸ್ವರಾಜ್’ ಕೃತಿಯ ವಿವಿಧ ಭಾಷಾ ನುವಾದ ಕೃತಿಗಳು ಸೇರಿದಂತೆ ಒಟ್ಟು 11 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಎಲ್‍ಎಸ್‍ಐ ಅಧ್ಯಕ್ಷ ಪಂಚಾನನ್ ಮೊಹಾಂತಿ, ಕಾರ್ಯದರ್ಶಿ ಶೈಲೇಂದ್ರ ಮೋಹನ್, ಸಮ್ಮೇಳನದ ಸಂಚಾಲಕ ಡಾ.ತಾರಿಕ್ ಖಾನ್ ಮತ್ತಿತರರು ಹಾಜರಿದ್ದರು.

Translate »