ಮೈಸೂರು: ಚುನಾವಣಾ ಆಯೋಗದ ಸೂಚನಾ ಅನ್ವಯ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸೇರಿದಂತೆ 10 ಮಂದಿ ಕೆಎಎಸ್ (ಹಿರಿಯ/ ಕಿರಿಯ ಶ್ರೇಣಿ) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರನ್ನು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾ ಯಿಸಿದ್ದು, ಈ ಸ್ಥಾನಕ್ಕೆ ಶಿಲ್ಪಾನಾಗ್‍ರನ್ನು ನಿಯೋಜಿ ಸಲಾಗಿದೆ. ಮೈಸೂರು ಜಿಲ್ಲೆ ಅಪರ ಜಿಲ್ಲಾ ದಂಡಾಧಿ ಕಾರಿಯಾಗಿ ವರ್ಗಾವಣೆಗೊಂಡಿದ್ದ ಬಿ.ಆರ್. ಪೂರ್ಣಿಮ ಅವರ ಜಾಗಕ್ಕೆ ಶಿವಮೊಗ್ಗ ಎಡಿಸಿ ಜಿ.ಅನು ರಾಧ, ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿದ್ದ ಎಂ.ಜೆ.ರೂಪ ಅವರನ್ನು ಮಂಡ್ಯ ಜಿಲ್ಲೆ ಎಡಿಸಿಯಾಗಿ ವರ್ಗಾಹಿಸಲಾಗಿದೆ.