ಮೈಸೂರಲ್ಲಿವೆ 12 ಅತ್ಯಂತ ತೀವ್ರ ಅಪಘಾತ ವಲಯಗಳು
ಮೈಸೂರು

ಮೈಸೂರಲ್ಲಿವೆ 12 ಅತ್ಯಂತ ತೀವ್ರ ಅಪಘಾತ ವಲಯಗಳು

April 26, 2019

ಮೈಸೂರು: ಮೈಸೂರಲ್ಲಿ 12 ತೀವ್ರ ಅಪಘಾತ ವಲಯಗಳಿವೆ. ಮೈಸೂರಿನ ಕೆ.ಆರ್, ಎನ್‍ಆರ್, ಸಿದ್ದಾರ್ಥ ನಗರ ಹಾಗೂ ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ 12 ಅಪಘಾತ ವಲಯಗಳಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಒಟ್ಟು 169 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟಿದ್ಧರೆ, 158 ಮಂದಿಗೆ ತೀವ್ರತರ ಗಾಯಗಳಾಗಿವೆ. 500 ಮೀಟರ್ ಅಂತರದಲ್ಲಿ ಮೂರು ವರ್ಷದಲ್ಲಿ 10 ಅಪಘಾತ ಸಂಭವಿಸಿ, ಸಾಕಷ್ಟು ಸಾವು-ನೋವುಗಳಾಗಿದ್ದರೆ ಅಂತಹ ಸ್ಥಳವನ್ನು ತೀವ್ರ ಅಪಘಾತ ವಲಯ(ಃಟಚಿಛಿಞ Sಠಿoಣ) ಎಂದು ಮಿನಿಷ್ಟ್ರಿ ಆಫ್ ರೋಡ್ ಟ್ರಾನ್ಸ್‍ಪೋರ್ಟ್ ಹೈವೇ ಅಥಾರಿಟಿ ಪರಿಗಣಿಸಿದೆ.

ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ ಗೇಟ್ ಬಳಿ 2016ರಿಂದ 2018ರವರೆಗಿನ ಮೂರು ವರ್ಷ ಗಳಲ್ಲಿ 29 ಅಪಘಾತಗಳು ಸಂಭವಿಸಿದ್ದು, ಮೂವರು ಸಾವನ್ನಪ್ಪಿ 34 ಮಂದಿಗೆ ತೀವ್ರತರ ಗಾಯಗಳಾ ಗಿವೆ. ಗಣಪತಿ ಸಚ್ಚಿದಾನಂದ ಆಶ್ರಮದ ಬಳಿ ಒಟ್ಟು 28 ಅಪಘಾತಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀಯಾ ಕಂಫಟ್ರ್ಸ್ ಬಳಿ 17 ಅಪಘಾತಗಳು ಸಂಭವಿಸಿ, ನಾಲ್ವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿ ದ್ದಾರೆ. ದೇವೇಗೌಡ ಸರ್ಕಲ್ ಬಳಿ 11 ಅಪಘಾತ ಗಳಲ್ಲಿ ಓರ್ವ ಸಾವನ್ನಪ್ಪಿ, 15 ಮಂದಿಗೆ ಗಾಯಗಳಾ ಗಿದ್ದರೆ, ಸರದಾರ ವಲ್ಲಭಬಾಯ್ ಪಟೇಲ್ ನಗರದಲ್ಲಿ ಸಂಭವಿಸಿದ 11 ಅಪಘಾತಗಳಲ್ಲಿ ಓರ್ವ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ತಿರುಮಲ ಟ್ರಸ್ಟ್ ಬಳಿ 5 ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಕುಮಾರ ಫಾರಂ ಬಳಿ ಸಂಭವಿಸಿದ 5 ಅಪಘಾತಗಳಲ್ಲಿ ಇಬ್ಬರು ಸಾವ ನ್ನಪ್ಪಿ, 6 ಮಂದಿ ಗಾಯಗೊಂಡಿದ್ದಾರೆ. ದಕ್ಷ ಪಿಯು ಕಾಲೇಜ್ ಬಳಿ 10 ಅಪಘಾತಗಳು ಸಂಭವಿಸಿದ್ದು, ಮೂವರು ಸಾವನ್ನಪ್ಪಿ, 7 ಮಂದಿಗೆ ತೀವ್ರ ಗಾಯಗಳಾಗಿವೆ.

ಹೂಟಗಳ್ಳಿ ಜಂಕ್ಷನ್‍ನಲ್ಲಿ 13 ಅಪಘಾತಗಳಿಂದ ಮೂವರು ಅಸು ನೀಗಿ, 10 ಮಂದಿ ಗಾಯಗೊಂಡಿ ದ್ದಾರೆ. ಯಶಸ್ವಿನಿ ಕಲ್ಯಾಣ ಮಂಟಪ ಬಳಿ 12 ಅಪ ಘಾತಗಳಾಗಿದ್ದು, ಓರ್ವ ಮೃತ ಪಟ್ಟು 11 ಮಂದಿ ಗಾಯ ಗೊಂಡಿದ್ದಾರೆ. ಕೆ.ಆರ್‍ಎಸ್ ರಸ್ತೆಯ ರಿಂಗ್ ರೋಡ್ ಜಂಕ್ಷನ್‍ನಲ್ಲಿ 19 ಆಕ್ಸಿಡೆಂಟ್‍ಗಳು ಸಂಭವಿ ಸಿದ್ದು, 7 ಮಂದಿ ಸಾವನ್ನಪ್ಪಿ 14 ಮಂದಿ ಗಾಯ ಗೊಂಡಿದ್ದಾರೆ. ದಿ ರೂಸ್ಟ್ ಹೋಟೆಲ್ ಬಳಿ ಸಂಭವಿಸಿದ 9 ಅಪಘಾತಗಳಿಂದ ನಾಲ್ವರು ಕೊನೆಯುಸಿರೆಳೆದು 7 ಮಂದಿಗೆ ತೀವ್ರ ಗಾಯ ಗಳಾಗಿವೆ ಎಂಬ ಮಾಹಿತಿಯನ್ನು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಕಛೇರಿ ಮೂಲಗಳಿಂದ ತಿಳಿದು ಬಂದಿದೆ.

ಉಳಿದಂತೆ ಬೋಗಾದಿ ರಿಂಗ್ ರಸ್ತೆ ಜಂಕ್ಷನ್, ದಟ್ಟಗಳ್ಳಿ ಬಳಿ ಸಾರಾ ಕನ್ವೆನ್ಷನ್ ಹಾಲ್ ಸಮೀಪ, ಹುಣಸೂರು ರಸ್ತೆಯ ಜಲದರ್ಶಿನಿ ಬಳಿಯೂ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಮತ್ತು ಸ್ಥಳೀಯ ಆಡಳಿತ ದಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಪಘಾತಗಳು ನಿಯಂತ್ರಣ ದಲ್ಲಿವೆ. ತೀವ್ರ ಅಪಘಾತ ವಲಯಗಳೆಂದು ಗುರುತಿ ಸಿರುವ ಸ್ಥಳಗಳಲ್ಲಿ `ಅಪಘಾತ ವಲಯ’, `ನಿಧಾನ ವಾಗಿ ಚಲಿಸಿ’ ಸೂಚನಾ ಫಲಕ ಅಳವಡಿಸಿ ರಸ್ತೆಗಳಿಗೆ ರೋಡ್ ಹಂಪ್ ನಿರ್ಮಿಸಿ, ಕೆಲವೆಡೆ ಜಿಗ್‍ಜಾಗ್ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕರು ಸೂಚನಾ ಫಲಕ ಇರುವೆಡೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ಅಪ ಘಾತ ತಪ್ಪಿಸಬೇಕೆಂದು ನಗರ ಪೊಲೀಸ್ ಕಮೀ ಷ್ನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಅದರಂತೆ ಮೈಸೂರಿನ ನಂಜನಗೂಡು ರಸ್ತೆಯ ಬಂಡೀಪಾಳ್ಯ ಎಪಿಎಂಸಿ ಗೇಟ್, ಗಣಪತಿ ಸಚ್ಚಿದಾ ನಂದ ಆಶ್ರಮದ ಬಳಿ, ಬೆಂಗಳೂರು-ಮೈಸೂರು ಹೆದ್ದಾರಿಯ ಸಿದ್ದಲಿಂಗಪುರ ಮತ್ತು ಕಳಸ್ತವಾಡಿ ನಡು ವಿನ ಶ್ರೀಯಾ ಕಂಫಟ್ರ್ಸ್ ಮುಂಭಾಗ, ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್, ತಿ.ನರಸೀಪುರ ರಸ್ತೆಯ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ ಬಳಿ, ರಿಂಗ್ ರೋಡ್ ಜಂಕ್ಷನ್ ಸಮೀಪದ ತಿರುಮಲ ಟ್ರಸ್ಟ್ ಬಳಿ, ದೊಡ್ಡ ಆಲದ ಮರ ಬಳಿಯ ಕುಮಾರ್ ಫಾರಂ ಎದುರು, ಹೆಬ್ಬಾಳಿನ ದಕ್ಷ ಪಿಯು ಕಾಲೇಜು ಬಳಿ ರಿಂಗ್‍ರಸ್ತೆ, ಹುಣಸೂರು ರಸ್ತೆಯ ಹೂಟಗಳ್ಳಿ ಜಂಕ್ಷನ್, ಎಸ್‍ಆರ್‍ಎಸ್ ಕಾಲೋನಿ ಮತ್ತು ಯಶಸ್ವಿ ಕಲ್ಯಾಣ ಮಂಟಪ ನಡುವೆ, ಕೆಆರ್‍ಎಸ್ ರಸ್ತೆಯ ರಿಂಗ್ ರೋಡ್ ಜಂಕ್ಷನ್ ಹಾಗೂ ಬಾಲೇಸು ಚರ್ಚ್ ಮತ್ತು ರೂಸ್ಟ್ ಹೋಟೆಲ್ ನಡುವಿನ ಸ್ಥಳಗಳನ್ನು ತೀವ್ರ ಅಪಘಾತ ವಲಯಗಳೆಂದು ಗುರ್ತಿಸಲಾಗಿದೆ.

Translate »