ಮೈಸೂರು,ಜು.8(ಎಂಟಿವೈ)- ‘ಮೈಸೂರು ಸಾಹಿತ್ಯ ಸಂಭ್ರಮ’ದ ಮೂರನೇ ಆವೃತ್ತಿ ಕಾರ್ಯಕ್ರಮ ಜು.13 ಮತ್ತು 14ರಂದು ಹೋಟೆಲ್ ಸದರ್ನ್ ಸ್ಟಾರ್ ಸಭಾಂಗಣ ದಲ್ಲಿ ಜರುಗಲಿದ್ದು, ಒಂದೇ ಸಮಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರತ್ಯೇಕ ವೇದಿಕೆಯಲ್ಲಿ ವಿವಿಧ ಗೋಷ್ಠಿ ಜರುಗಲಿವೆ ಎಂದು ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ 2015ರಲ್ಲಿ ಆರಂ ಭಿಸಿದ `ಸಾಹಿತ್ಯ ಸಂಭ್ರಮ’ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿಯಾಗುತ್ತಾ ಸಾಗಿದೆ. ಈ ವರ್ಷ ಮೂರನೇ ಆವೃತ್ತಿಯಾಗಿದ್ದು, ಸಾಹಿತ್ಯ, ಚಲನಚಿತ್ರ, ಪತ್ರಿಕೋದ್ಯಮ, ನಾಟಕ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ತಜ್ಞರಿಂದ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರತ್ಯೇಕ ವೇದಿಕೆಯಲ್ಲಿ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ವಿನೋಬಾ ರಸ್ತೆಯ ಲ್ಲಿರುವ ಹೋಟೆಲ್ ಸದರ್ನ್ ಸ್ಟಾರ್ ಸಭಾಂಗಣದಲ್ಲಿ ಜು.13ರಂದು ಮಧ್ಯಾಹ್ನ 2ಗಂಟೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೇಖಕ, ಅಂಕಣಕಾರ ಡಾ. ದೇವದತ್ತ ಪಟ್ನಾಯಕ್ ದಿಕ್ಸೂಚಿ ಭಾಷಣದಲ್ಲಿ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಮಾತನಾಡಲಿದ್ದಾರೆ. ಹೋಟೆಲ್‍ನ ಜ್ಯೋತಿ ಹಾಲ್‍ನಲ್ಲಿ ಇಂಗ್ಲೀಷ್ ಗೋಷ್ಠಿ ಗಳು, ದರ್ಬಾರ್ ಹಾಲ್‍ನಲ್ಲಿ ಕನ್ನಡದ ಗೋಷ್ಠಿಗಳು ನಡೆಯಲಿವೆ ಎಂದು ಹೇಳಿದರು.
ಇಂಗ್ಲೀಷ್ ಗೋಷ್ಠಿ: ಮಧ್ಯಾಹ್ನ 3.45 ರಿಂದ 4.45 ರವರೆಗೆ ವೇಶ್ಯಾವಾಟಿಕೆ, ಭಾರ ತೀಯ ಇತಿಹಾಸ, ಮಹಾತ್ಮ ಮತ್ತು ಇಟಾ ಲಿಯನ್ ಬ್ರಾಹ್ಮಣ ಕಥೆಗಳ ಕುರಿತ ಗೋಷ್ಠಿಯಲ್ಲಿ ಮನು ಪಿಳ್ಳೈ ಮತ್ತು ಪ್ರೀತಿ ಮರೋಲಿ ಮಾತನಾಡಲಿದ್ದಾರೆ. ಸಂಜೆ 4.45 ರಿಂದ 5.45 ರವರೆಗೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಇನ್ನೂ ಪ್ರಬಲವಾಗಿದೆಯೇ? ವಿಷಯ ಕುರಿತು ಎನ್‍ಡಿಟಿವಿಯ ಶ್ರೀನಿವಾಸ ಜೈನ್, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾ ವಾಣಿಯಿಂದ ಶಾಂತಕುಮಾರ್ ಮತ್ತು `ಸ್ಟಾರ್ ಆಫ್ ಮೈಸೂರು’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅವರು ವಿಚಾರ ಮಂಡಿಸಲಿದ್ದಾರೆ.
ಜು. 14ರಂದು ಬೆಳಿಗ್ಗೆ 9.30 ರಿಂದ 10.20 ರವರೆಗೆ ‘ಶೋಭಾ-70’ ಕುರಿತು ಗೋಷ್ಠಿ ನಡೆಯಲಿದ್ದು, ಶೋಭಾ ಡೇ, ಮಹೇಶ್ ರಾವ್ ವಿಷಯ ಮಂಡನೆ ಮಾಡುವರು. ಬೆಳಿಗ್ಗೆ 10.20ರಿಂದ 11.05ರವರೆಗೆ ರಾಜತಾಂತ್ರಿಕತೆ, ಸಂಗೀತದ ಮೂಲಕ ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಟ್ಟುವಿಕೆ ವಿಷಯ ಕುರಿತು ನಡೆಯುವ ಗೋಷ್ಠಿಯಲ್ಲಿ ನಿರುಪಮಾ ಮೆನನ್‍ರಾವ್ ಮಾತನಾಡಲಿದ್ದಾರೆ. ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 12.05 ರವರೆಗೆ ದೂರದ ಕ್ಷೇತ್ರ: ಎರಡನೆಯ ಮಹಾಯುದ್ಧದ ಭಾರತೀಯ ಕಥೆ ಕುರಿತು ರಘು ಕಾರ್ನಾಡ್, ಏರ್ ಮಾರ್ಷಲ್ ನಂದ ಕಾರಿಯಪ್ಪ ಮಾತನಾಡುವರು. ಮಧ್ಯಾಹ್ನ 12.05 ರಿಂದ ಮಧ್ಯಾಹ್ನ 1 ರವರೆಗೆ ‘ಪ್ರತಿ ಮತ ಎಣಿಕೆ ಮಾಡುತ್ತದೆ’ ಕುರಿತು ನವೀನ್ ಚಾವ್ಲಾ, ಚಂದನ್‍ಗೌಡ, ಮಧ್ಯಾಹ್ನ 1ರಿಂದ 2ರವರೆಗೆ ಕಾಡು ಸಂರಕ್ಷಣೆ ಮತ್ತು ಸಹ ಬಾಳ್ವೆ ವಿವಾಹಗಳ ಕುರಿತ ಗೋಷ್ಠಿಯಲ್ಲಿ ರೋಮುಲಸ್ ಅರ್ಲ್‍ವಿಟೇಕರ್, ಜಾನಕಿ ಲೆನಿನ್, ಸುನೀತಾ ಧೈರ್ಯಂ, ಹರಿಣಿ ನಾಗೇಂದ್ರ, ಸೀಮಾ ಮುಂಡೋಲಿ ಮಾತ ನಾಡಿದರೆ, ಮಧ್ಯಾಹ್ನ 2 ರಿಂದ 3 ರವರೆಗೆ ಸಾಹಿತ್ಯ ಸಮಿತಿ, ಕಲ್ಪನೆಯ ಆಕೃತಿಗಳು ಕುರಿತು ಮಾರ್ಕ್ ಅಬಾಟ್, ಸೀತಾ ಭಾಸ್ಕರ್, ಸುಜಾತ ರಾಜ್‍ಪಾಲ್, ಲಕ್ಷ್ಮಿ ಪಾಲೇಕಂಡ, ಡಾ.ವಿ.ಶ್ರೀನಿವಾಸ್ ವಿಷಯ ಮಂಡಿಸಲಿದ್ದಾರೆ.
ಕನ್ನಡ ಗೋಷ್ಠಿ: ಜು.13ರಂದು ಮಧ್ಯಾಹ್ನ 3.45 ರಿಂದ 4.45ರವರೆಗೆ ಚಲನಚಿತ್ರ ಪ್ರಪಂಚದಲ್ಲಿ ನಿರ್ದೇಶಕರ ಕಮಾಲ್ ಕುರಿತು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಬಿ.ಸುರೇಶ, ಪ್ರೀತಿ ನಾಗರಾಜ್ ಮಾತನಾಡಲಿದ್ದಾರೆ. ಮಧ್ಯಾಹ್ನ 4.45 ರಿಂದ ಸಂಜೆ 5.45 ರವರೆಗೆ `ಗಿರೀಶ’ ಮಂಡಲದ ಸುತ್ತ ಒಂದು ಸುತ್ತು ಕುರಿತು ಕುರಿತ ಗೋಷ್ಠಿಯಲ್ಲಿ ಅರವಿಂದ ಮಾಲಗತ್ತಿ, ಚೈತನ್ಯ ಕರೆಹಳ್ಳಿ, ವೆಂಕಟೇಶ್ ಪ್ರಸಾದ್ ಮತ್ತು ಭಾಗೀರಥಿ ಬಾಯಿ ಕದಂ ವಿಷಯ ಮಂಡನೆ ಮಾಡುವರು.
ಜು.14ರಂದು ಬೆಳಿಗ್ಗೆ 10 ರಿಂದ 11 ರವರೆಗೆ ಮೈಸೂರು ಒಡೆಯರ `ಪರಿ’ ಲೋಕಪಾಲರ `ಮಾದರಿ’ ಕುರಿತು ಧರ್ಮೇಂದ್ರ ಕುಮಾರ ಅರೇಹಳ್ಳಿ, ಗೌರಿ ಸತ್ಯ, ಈಚನೂರು ಕುಮಾರ್ ಮತ್ತು ಸಿ. ನಾಗಣ್ಣ ಮಾತನಾಡುವರು. ಬೆಳಿಗ್ಗೆ 11 ರಿಂದ 11.50 ರವರೆಗೆ ಸಮಾಜ ಸುಧಾರಣೆಗೆ `ವೇದ’ದ ಕೊಡುಗೆ ಕುರಿತು ವಾದಿರಾಜ ಉಪಾಧ್ಯಾಯ ವಿಷಯ ಮಂಡನೆ ಮಾಡುವರು. ಮಧ್ಯಾಹ್ನ 11.50 ರಿಂದ 12.40 ರವರೆಗೆ ಕನ್ನಡ ನುಡಿ, ಸಾಹಿತ್ಯ `ಪ್ರಧಾನ ಧಾರೆ’ ಕುರಿತ ಗೋಷ್ಠಿಯಲ್ಲಿ ಪ್ರೊ. ಶೆಟ್ಟಾರ್, ಪೃಥ್ವಿದತ್ತ ಚಂದ್ರ ಶೋಭಿ ಮಾತನಾಡುವರು. ಮಧ್ಯಾಹ್ನ 12.40 ರಿಂದ 12.55 ರವರೆಗೆ ‘ಮುನ್ನುಡಿ: ಯುದ್ಧ ಮತ್ತು ಕೊಳಕು ಪ್ರೇಯಸಿ’ ಕುರಿತ ಗೋಷ್ಠಿಯಲ್ಲಿ ಡಾ. ಲತಾ ಮುತ್ತಣ್ಣ, ಮಧ್ಯಾಹ್ನ 1 ರಿಂದ 2 ರವರೆಗೆ ‘ಹಿಂದಿನ ಸುಳಿವುಗಳನ್ನು ಕಂಡು ಹಿಡಿಯುವುದು: ಆಳವಾಗಿ ಅಗೆಯು ವುದು’ ಕುರಿತ ಗೋಷ್ಠಿಯಲ್ಲಿ ದೇವಿಕಾ ಕಾರಿಯಪ್ಪ, ಮಧ್ಯಾಹ್ನ 2 ರಿಂದ 3 ರವರೆಗೆ ಮೊಸಳೆಗಳ ಜಗತ್ತು ಕುರಿತು ಗೋಷ್ಠಿಯಲ್ಲಿ ರೋಮುಲಸ್ ಅರ್ಲ್ ವಿಟೇಕರ್ ವಿಷಯ ಮಂಡನೆ ಮಾಡಲಿ ದ್ದಾರೆ ಎಂದು ಅವರು ವಿವರಿಸಿದರು.
ಎರಡೂ ದಿನ ಗೋಷ್ಠಿಗಳಿಗೆ ಉಚಿತ ಪ್ರವೇಶವಿದ್ದು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗಾಗಿ 7899757259 ಅಥವಾ www.mysuruliteraturefestival.com ವೆಬ್ ಸೈಟ್ ಸಂಪರ್ಕಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ರೇಯನ್ ಎಫ್ ಇರಾನಿ, ಸದಸ್ಯರಾದ ಸ್ಯಾಮ್ ಚೆರಿಯನ್, ಥಂಕಮ್ ಪಣಕಲ್, ಕಿಟ್ಟಿ ಮಂದಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.