ಮೈಸೂರು,ಜೂ.27(ವೈಡಿಎಸ್)- ಮೈಸೂರಿನ ಯುವಕರೊಬ್ಬರು ಜುಲೈ10 ರಂದು ಥೈಲ್ಯಾಂಡ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿ ಯನ್ ಶಿಪ್‍ಗೆ ಆಯ್ಕೆಯಾಗಿದ್ದಾರೆ. ರಾಘ ವೇಂದ್ರನಗರ ನಿವಾಸಿ ರಮೇಶ್ ಮತ್ತು ಅನಿತಾ ದಂಪತಿ ಪುತ್ರ ಆರ್.ರೋಹಿತ್, ಕರಾಟೆ ಚಾಂಪಿಯನ್‍ಶಿಪ್‍ಗೆ ಆಯ್ಕೆ ಯಾಗಿದ್ದಾರೆ. ಸದ್ಯ ಮೈಸೆಮ್ ಕಾಲೇಜಿ ನಲ್ಲಿ ದ್ವಿತೀಯ ವರ್ಷದ ಇಂಜಿನಿಯ ರಿಂಗ್ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ಕರಾಟೆಯಲ್ಲೂ ಸಾಧನೆಗೈಯ್ಯು ತ್ತಿದ್ದಾರೆ. ಪೋಷಕರು ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇವರು 10 ವರ್ಷದಿಂದ ಕರಾಟೆ ಅಭ್ಯಾಸ ಮಾಡುತ್ತಿದ್ದು, ಇದುವರೆಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದಿದ್ದಾರೆ. ಸದ್ಯ ಕುವೆಂಪುನಗರದ ಜಿಟಿಕೆ ಸ್ಪೀಡ್ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬಹುಮಾನಗಳು: ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾ ವಳಿಯಲ್ಲಿ ಚಿನ್ನ, ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ, ದೆಹಲಿ ಮತ್ತು ಶ್ರೀಲಂಕಾದಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಚಿನ್ನ ಹೀಗೆ ರಾಜ್ಯ, ರಾಷ್ಟ್ರ ಮತ್ತು ಸ್ಥಳೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ 20 ಚಿನ್ನ, 10 ಬೆಳ್ಳಿ ಹಾಗೂ 5 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಕರಾಟೆಯಲ್ಲಿ ಸಾಧನೆಗೈಯ್ಯಲು ಹೊರ ಟಿರುವ ರೋಹಿತ್‍ಗೆ ಥೈಲ್ಯಾಂಡ್‍ಗೆ ತೆರ ಳಲು ಆರ್ಥಿಕ ಸಮಸ್ಯೆ ಎದುರಾಗಿದ್ದು, ಮೊ.ಸಂ. 88806 55558 ಮೂಲಕ ಸಂಪರ್ಕಿಸಬಹುದು.