ಮೈಸೂರು, ಜು.11(ವೈಡಿಎಸ್)- ಥೈಲ್ಯಾಂಡ್‍ನಲ್ಲಿ ನಡೆದ 7ನೇ ಅಂತಾ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಮೈಸೂರಿನ ಯುವಕ 6 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರು ಬೆಸ್ತಗೇರಿ ನಿವಾಸಿ, ಸಿಎಆರ್ ಮುಖ್ಯಪೇದೆ ಪರಶುರಾಮ್ ಮತ್ತು ಮಂಜುಳ ದಂಪತಿ ಪುತ್ರ ಕುವಲಾಶ್ವ ವಿದೇಶ ದಲ್ಲಿ ಯೋಗ ಸಾಧನೆ ಮಾಡಿದ್ದಾನೆ. ಯುವ ರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ಯೋಗ ಸಾಧನೆಯನ್ನೂ ಮುಂದು ವರೆಸಿದ್ದಾನೆ. ಅಗ್ರಹಾರದ ಎಸ್‍ಜಿಎಸ್ ಯೋಗ ಇಂಟರ್‍ನ್ಯಾಷನಲ್ ಫೌಂಡೇಷನ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್‍ನಲ್ಲಿ ನಾಲ್ಕುವರೆ ವರ್ಷದಿಂದ ಯೋಗ ತರಬೇತಿ ಪಡೆಯುತ್ತಿರುವ ಕುವಲಾಶ್ವನಿಗೆ ಪೋಷ ಕರು ಬೆನ್ನೆಲುಬಾಗಿ ನಿಂತು ಪ್ರೋತ್ಸಾ ಹಿಸುತ್ತಿದ್ದಾರೆ.
ಬಹುಮಾನಗಳು: ಕಳೆದ ಮೇ 21ರಿಂದ 29ರವರೆಗೆ ಥೈಲ್ಯಾಂಡ್‍ನಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ 5 ತಂಡಗಳನ್ನು ಪ್ರತಿನಿಧಿಸಿ, 6 ಪ್ರಶಸ್ತಿ ಗಳಿಸಿಕೊಂಡಿದ್ದಾನೆ. ಅಥ್ಲೆಟಿಕ್ ಯೋಗಾಸನ ಚಾಂಪಿಯನ್ ಶಿಪ್‍ನಲ್ಲಿ ಟ್ರೋಫಿ, ಆರ್ಟಿಸ್ಟಿಕ್ ಸೋಲೊ ಯೋಗಾ ಸನ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ, ಓನ್ ಚಾಯ್ಸ್ ಯೋಗಾಸನ ಚಾಂಪಿಯನ್ ಶಿಪ್‍ನಲ್ಲಿ ಪ್ರಥಮ, ರಿದಮಿಕ್ ಪೇರ್ ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ದ್ವಿತೀಯ, ಗ್ರೂಪ್ ಯೋಗಾಸನ ಚಾಂಪಿ ಯನ್ ಶಿಪ್‍ನಲ್ಲಿ ದ್ವಿತೀಯ, ಅರ್ಕಿಸ್ಟಿಕ್ ಪೇರ್ ಯೋಗಾಸನ ಚಾಂಪಿಯನ್‍ಶಿಪ್ ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ. ಹಾಗೆಯೇ ಬೆಂಗಳೂರು, ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಸೇರಿದಂತೆ ರಾಜ್ಯ, ರಾಷ್ಟ್ರ, ಅಂತಾ ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದ ವಿವಿಧ ಯೋಗಾಸನ ಸ್ಪರ್ಧೆಗಳಲ್ಲಿ ಬಹು ಮಾನ ಪಡೆದಿದ್ದಾರೆ.