ಮಹಾರಾಷ್ಟ್ರದಲ್ಲಿ ಮಿಂಚಿದ ಮೈಸೂರಿನ ಪ್ರತಿಭೆಜಿಮ್ನಾಸ್ಟಿಕ್, ಕಬಡ್ಡಿಯಲ್ಲಿ ಕಾವ್ಯ ಕಮಾಲ್
ಮೈಸೂರು

ಮಹಾರಾಷ್ಟ್ರದಲ್ಲಿ ಮಿಂಚಿದ ಮೈಸೂರಿನ ಪ್ರತಿಭೆಜಿಮ್ನಾಸ್ಟಿಕ್, ಕಬಡ್ಡಿಯಲ್ಲಿ ಕಾವ್ಯ ಕಮಾಲ್

July 26, 2019

ಮೈಸೂರು,ಜು.25(ವೈಡಿಎಸ್)- 2019ರ ಮೇ ಮಾಹೆಯಲ್ಲಿ ಮಹಾರಾಷ್ಟ್ರದಲ್ಲಿ ನಡೆದ 9ನೇ ಟ್ರಾಂಪೊಲಿನ್ ಅಂಡ್ ಟಂಬ್ಲಿಂಗ್ ಜಿಮ್ನಾಸ್ಟಿಕ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಯುವ ಪ್ರತಿಭೆ ರಾಜ್ಯವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಮುಡಿಗೇರಿಸಿಕೊಂಡಿ ದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿ ಜಗದೀಶ್ ಮತ್ತು ನಂದಿನಿ ದಂಪತಿ ಪುತ್ರಿ ಜೆ.ಕಾವ್ಯ, ಟೆರೇಷಿಯನ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ, ಜಿಮ್ನಾಸ್ಟಿಕ್ಸ್ ಪಂದ್ಯಾ ವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. ಆಕೆಯ ಸಾಧನೆಗೆ ತಾಯಿ ನಂದಿನಿ, ತರಬೇತುದಾರರಾದ ಇಲಿಯಾಸ್, ಆಂಥೋನಿ ಮೋಸಸ್ ಬೆನ್ನೆಲುಬಾಗಿ ನಿಂತಿದ್ದಾರೆ.

ಬಹುಮಾನಗಳು: 2019ರ ಮೇನಲ್ಲಿ ಮಹಾ ರಾಷ್ಟ್ರದಲ್ಲಿ ನಡೆದ 9ನೇ ಟ್ರಾಂಪೊಲಿನ್ ಅಂಡ್ ಟಂಬ್ಲಿಂಗ್ ಜಿಮ್ನಾಸ್ಟಿಕ್ ನ್ಯಾಷನಲ್ ಚಾಂಪಿ ಯನ್ ಶಿಪ್‍ನಲ್ಲಿ ಬೆಳ್ಳಿಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 2018ರಂದು ತ್ರಿಪುರದಲ್ಲಿ ನ್ಯಾಷನಲ್ ಸ್ಕೂಲ್ ಗೇಮ್ಸ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಜಿಮ್ನಾಸ್ಟಿಕ್ ಮತ್ತು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಪ್ರಥಮ, 2017ರ ಆಗಸ್ಟ್‍ನಲ್ಲಿ ತಮಿಳುನಾಡಿನ ಹೊಸೂರು ಮತ್ತು ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನ. 2017ರಂದು ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್‍ನಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

2019ರ ಜನವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ಸಬ್‍ಜೂನಿಯರ್ ಕಬಡ್ಡಿ ಪಂದ್ಯಾವಳಿ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಅಷ್ಟೆಯಲ್ಲದೆ, ಮೈಸೂರಿ ನಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಮತ್ತು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಹೀಗೆ ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Translate »